ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

7

ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

Published:
Updated:
Deccan Herald

ಚೇಳೂರು: ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮರವಾರಪಲ್ಲಿ ಕ್ರಾಸ್ ಬಳಿ ಭಾನುವಾರ ಖಾಸಗಿ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಡ್ಡಂಪಲ್ಲಿ ಗ್ರಾಮದ ಎ.ಸುರೇಶ್ (32) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

 ಸುರೇಶ್ ಪ್ರತಿ ನಿತ್ಯ ರಾಶ್ಚೇರುವು ಡೇರಿಗೆ ಹಾಲು ತೆಗೆದುಕೊಂಡು ಹೋಗುವರು. ಎಂದಿನಂತೆ ಅವರು ಹೋಗುವಾಗ ಕಮ್ಮರವಾರಪಲ್ಲಿ ಕ್ರಾಸ್ ಬಳಿ  ಬಿಳ್ಳೂರು ಕಡೆಯಿಂದ ಚೇಳೂರು ಮಾರ್ಗವಾಗಿ ಚಿಂತಾಮಣಿಗೆ ಹೋಗುವ ವಿಎಂಎಂ ಬಸ್ ಡಿಕ್ಕಿಯಾಗಿದೆ. ಬಸ್ ಚಾಲಕ ಪರಾರಿಯಾಗಿದ್ದಾನೆ.

ರೊಚ್ಚಿಗೆದ್ದ ಗ್ರಾಮಸ್ಥರು, ಸಾರ್ವಜನಿಕರು ಬಸ್ಸಿನ ಗಾಜುಗಳನ್ನ ಜಖಂಗೊಳಿಸಿದರು. ಎಸ್ಐ ಎನ್.ಚಂದ್ರಕಲಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !