ಸರಣಿ ಕಳವು: ಎಂಟು ಮನೆಗಳಿಗೆ ಕನ್ನ

7

ಸರಣಿ ಕಳವು: ಎಂಟು ಮನೆಗಳಿಗೆ ಕನ್ನ

Published:
Updated:
Prajavani

ಆಲಮೇಲ: ಇಲ್ಲಿಗೆ ಸಮೀಪದ ದೇವಣಗಾಂವ ಗ್ರಾಮದಲ್ಲಿ ಸೋಮವಾರ ರಾತ್ರಿ ಕಳ್ಳರು ತಮ್ಮ ಕರಾಮತ್ತು ತೋರಿಸಿದ್ದು, ಎಂಟು ಮನೆಗಳಿಗೆ ಕನ್ನ ಹಾಕಿದ್ದಾರೆ.

ಗ್ರಾಮದ ಬಸವರಾಜ ನಾಗಪ್ಪ ಪೂಜಾರಿ ಅವರ ಮನೆಯಲ್ಲಿನ 15 ಗ್ರಾಂ ಚಿನ್ನ, 110 ಗ್ರಾಂ ಬೆಳ್ಳಿ, ಸ್ವಾಮಿನಾಥ ಶಂಕರ ಭಿಂಗೆ ಅವರ ಮನೆಯಲ್ಲಿನ 5 ಗ್ರಾಂ ತೂಕದ ಚಿನ್ನದ ಬಳೆಗಳು, 5 ಗ್ರಾಂ ಚಿನ್ನದ ಉಂಗುರ, ₹ 57,000 ನಗದು ದೋಚಿದ್ದಾರೆ.

ಸಾಹೇಬಗೌಡ ಭೀಮರಾಯ ಕಟ್ಟಿ ಅವರಿಗೆ ಸೇರಿದ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳವಾಗಿದೆ. ಶಿವಶರಣ ಹಣಮಂತಪ್ಪ ಭೂಸನೂರ, ರವಿಕುಮಾರ ಶರಣಪ್ಪ ಗಂಗನಳ್ಳಿ, ಬಸವರಾಜ ನಿಂಬಾಳ, ಶಂಕ್ರೆಪ್ಪ ಬಾಗೇವಾಡಿ, ಕೆಂಚಪ್ಪ ಪೂಜಾರಿ ಅವರ ಮನೆಗಳ ಬೀಗ ಮುರಿದು ಮನೆಗಳಲ್ಲಿ ಹಣ, ಆಭರಣಗಳಿಗೆ ಶೋಧ ನಡೆಸಿ, ನಗದು, ಇತರ ವಸ್ತುಗಳನ್ನು ದೋಚಿದ್ದಾರೆ ಎಂದು ಮನೆಯವರು ವಿವರಿಸಿದ್ದಾರೆ. ಮನೆಗಳಲ್ಲಿನ ಬಟ್ಟೆ, ವಸ್ತುಗಳನ್ನು ಚೆಲ್ಲಾಪಿಲ್ಲಿಗಳಾಗಿ ಎಸೆದು ಹೋಗಿದ್ದಾರೆ.

ಹೊಸ ವರ್ಷದ ದಿನವೇ ಕಳ್ಳರ ಈ ಕೃತ್ಯ ಎಸಗಿದ್ದು ಗ್ರಾಮವನ್ನು ಬೆಚ್ಚಿ ಬೀಳಿಸಿದೆ. ಗ್ರಾಮಕ್ಕೆ ಹೆಚ್ಚಿನ ಪೋಲಿಸ್ ಸಿಬ್ಬಂದಿಯನ್ನು ನೇಮಿಸಿ, ಭಯ ಹೋಗಲಾಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !