ಸುಲಿಗೆಕೋರರ ಗ್ಯಾಂಗ್ ಬಲೆಗೆ

7
ಡ್ರಾಪ್ ನೀಡುವ ನೆಪದಲ್ಲಿ ಕ್ಯಾಬ್‌ಗೆ ಹತ್ತಿಸಿಕೊಂಡು ಸುಲಿಗೆ

ಸುಲಿಗೆಕೋರರ ಗ್ಯಾಂಗ್ ಬಲೆಗೆ

Published:
Updated:

ಬೆಂಗಳೂರು: ಡ್ರಾಪ್ ನೀಡುವ ನೆಪದಲ್ಲಿ ಕ್ಯಾಬ್‌ನಲ್ಲಿ ಹತ್ತಿಸಿಕೊಂಡು ಮಾರ್ಗಮಧ್ಯೆ ಚಾಕುವಿನಿಂದ ಬೆದರಿಸಿ ಸಾರ್ವಜನಿಕರಿಂದ ನಗ–ನಾಣ್ಯ ದೋಚುತ್ತಿದ್ದ ಕುಖ್ಯಾತ ಸುಲಿಗೆಕೋರರ ಗ್ಯಾಂಗ್ ಪರಪ್ಪನ ಅಗ್ರಹಾರ ಪೊಲೀಸರ ಬಲೆಗೆ ಬಿದ್ದಿದೆ.

‘ಹೊಸೂರಿನ ನಾಗೇಂದ್ರ ಅಲಿಯಾಸ್ ನಾಗ, ವೆಂಕಟೇಶ, ವಿಜಯ್‌ಕುಮಾರ್ ಹಾಗೂ ಆನೇಕಲ್‌ನ ಬಸವರಾಜ್ ಎಂಬುವರನ್ನು ಬಂಧಿಸಿ, ಎರಡು ಕಾರುಗಳು ಹಾಗೂ 84 ಗ್ರಾಂನ ಚಿನ್ನದ ಸರ ಜಪ್ತಿ ಮಾಡಿದ್ದೇವೆ. ಈ ಗ್ಯಾಂಗ್ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಏಳು ಸುಲಿಗೆ ಪ್ರಕರಣಗಳು ದಾಖಲಾಗಿದ್ದವು’ ಎಂದು ಆಗ್ನೇಯ ವಿಭಾಗದ ಡಿಸಿಪಿ ಎಂ.ಬಿ.ಬೋರಲಿಂಗಯ್ಯ ತಿಳಿಸಿದರು.

ಇವರ ವಿರುದ್ಧ ಎಲೆಕ್ಟ್ರಾನಿಕ್‌ ಸಿಟಿ ನಿವಾಸಿ ಆರ್.ಕಾರ್ತಿಕ್ ಎಂಬುವರು ಜುಲೈ 28ರಂದು ದೂರು ಕೊಟ್ಟಿದ್ದರು. ನಗರದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುವ ಕಾರ್ತಿಕ್, ಜುಲೈ 27ರ ರಾತ್ರಿ ಹೊಸೂರಿಗೆ ಹೋಗಲು ಎಲೆಕ್ಟ್ರಾನಿಕ್‌ ಸಿಟಿ 2ನೇ ಹಂತದಲ್ಲಿ ಬಸ್‌ಗಾಗಿ ಕಾಯುತ್ತಿದ್ದರು.

ಈ ವೇಳೆ ಕಾರಿನಲ್ಲಿ ಅಲ್ಲಿಗೆ ಬಂದಿದ್ದ ಆರೋಪಿಗಳು, ‘ನಾವೂ ಹೊಸೂರಿಗೆ ಹೋಗುತ್ತಿದ್ದೇವೆ. ಡ್ರಾಪ್ ಮಾಡುತ್ತೇವೆ ಬನ್ನಿ’ ಎಂದಿದ್ದರು. ಆ ಮಾತನ್ನು ನಂಬಿ ಕಾರ್ತಿಕ್ ಕಾರು ಹತ್ತಿದ್ದರು. ಸ್ವಲ್ಪ ದೂರ ಹೋಗುತ್ತಿದ್ದಂತೆಯೇ ಅವರನ್ನು ಚಾಕುವಿನಿಂದ ಬೆದರಿಸಿದ ಆರೋಪಿಗಳು, ಮೊಬೈಲ್, ಚಿನ್ನದ ಸರ ಹಾಗೂ ಎರಡು ಉಂಗುರಗಳನ್ನು ಕಿತ್ತುಕೊಂಡಿದ್ದರು.

ಎಟಿಎಂ ಕಾರ್ಡನ್ನೂ ಕಸಿದುಕೊಂಡಿದ್ದ ಅವರು, ಹೊಸೂರು ರಸ್ತೆ ಬಲಗಾರನಹಳ್ಳಿ ಬಳಿಯ ಫೆಡರಲ್ ಬ್ಯಾಂಕ್ ಎಟಿಎಂ ಘಟಕದಲ್ಲಿ ₹ 15 ಸಾವಿರ ಡ್ರಾ ಮಾಡಿಕೊಂಡಿದ್ದರು. ನಂತರ ಅತ್ತಿಬೆಲೆ ಸರ್ವಿಸ್ ರಸ್ತೆಯಲ್ಲಿ ಅವರನ್ನು ಕಾರಿನಿಂದ ಇಳಿಸಿ ಮೊಬೈಲ್ ಮರಳಿಸಿದ್ದ ಆರೋಪಿಗಳು, ‘ಪೊಲೀಸರಿಗೆ ದೂರು ಕೊಟ್ಟರೆ ಗುಂಡಿಕ್ಕಿ ಕೊಲ್ಲುತ್ತೇವೆ’ ಎಂದು ಬೆದರಿಸಿ ಹೋಗಿದ್ದರು.

ಬಳಿಕ ಸ್ನೇಹಿತನನ್ನು ಸ್ಥಳಕ್ಕೆ ಕರೆಸಿಕೊಂಡ ಕಾರ್ತಿಕ್, ಅವರ ಕಾರಿನಲ್ಲಿ ನಗರಕ್ಕೆ ವಾಪಸಾಗಿ ಠಾಣೆಗೆ ದೂರು ಕೊಟ್ಟಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !