ಗಾಂಜಾ ಮಾರುತ್ತಿದ್ದ ಮಹಿಳೆ ಸೆರೆ

7

ಗಾಂಜಾ ಮಾರುತ್ತಿದ್ದ ಮಹಿಳೆ ಸೆರೆ

Published:
Updated:

ಬೆಂಗಳೂರು: ಕೊಳೆಗೇರಿ ಹುಡುಗರಿಗೆ ಗಾಂಜಾ ಮಾರುತ್ತಿದ್ದ ರಮ್ಯಾ (20) ಎಂಬಾಕೆಯನ್ನು ಬಂಧಿಸಿರುವ ಬೆಳ್ಳಂದೂರು ಪೊಲೀಸರು, ₹ 15 ಸಾವಿರ ಮೌಲ್ಯದ ಅರ್ಧ ಕೆ.ಜಿ.ಗಾಂಜಾ ಜಪ್ತಿ ಮಾಡಿದ್ದಾರೆ.

‘ಬನಶಂಕರಿಯ ಎಂಜಿಆರ್ ಜೋಪಡಿ ನಿವಾಸಿಯಾದ ರಮ್ಯಾ, ಸೋಮವಾರ ಮಧ್ಯಾಹ್ನ 3.30ರ ಸುಮಾರಿಗೆ ಬೆಳ್ಳಂದೂರು ಹೊರವರ್ತುಲ ರಸ್ತೆಯ ಕೊಳೆಗೇರಿ ಪ್ರದೇಶದಲ್ಲಿ ಗಾಂಜಾ ಮಾರುತ್ತಿದ್ದಳು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ, ಕಾನ್‌ಸ್ಟೆಬಲ್ ಕಾಂತಮ್ಮ ಅವರನ್ನು ಗ್ರಾಹಕಿಯ ಸೋಗಿನಲ್ಲಿ ಆಕೆ ಬಳಿ ಕಳುಹಿಸಿದ್ದೆವು’ ಎಂದು ಪೊಲೀಸರು ಕಾರ್ಯಾಚರಣೆಯನ್ನು ವಿವರಿಸಿದರು.

‘ಗಾಂಜಾ ಪುಡಿಯನ್ನು ಸಣ್ಣ ಸಣ್ಣ ಪ್ಯಾಕೆಟ್‌ಗಳಲ್ಲಿ ಹಾಕಿಕೊಂಡು ಬಂದಿದ್ದ ರಮ್ಯಾ, ಒಂದು ಪ್ಯಾಕೆಟ್‌ಗೆ ₹ 500 ಕೊಡುವಂತೆ ಕೇಳಿದಳು. ಹೆಚ್ಚಿನ ಮಾಲು ಬೇಕೆಂದು ಕಾಂತಮ್ಮ ಕೇಳಿದಾಗ, ಅನುಮಾನ ಬಂದು ಆಕೆ ಅಲ್ಲಿಂದ ಹೊರಡಲು ಮುಂದಾದಳು. ಆಗ ಅಲ್ಲೇ ಮಫ್ತಿಯಲ್ಲಿದ್ದ ಇತರೆ ಸಿಬ್ಬಂದಿ ರಮ್ಯಾಳನ್ನು ವಶಕ್ಕೆ ಪಡೆದರು’ ಎಂದು ಮಾಹಿತಿ ನೀಡಿದರು.

‘ಇತ್ತೀಚೆಗೆ ಹೊಸೂರು ರಸ್ತೆಯಲ್ಲಿ ತಮಿಳುನಾಡಿನ ವ್ಯಕ್ತಿಯೊಬ್ಬನ ಪರಿಚಯವಾಯಿತು. ಆತ ತಂದು ಕೊಡುತ್ತಿದ್ದ ಗಾಂಜಾವನ್ನು ನಗರದಲ್ಲಿ ಮಾರಾಟ ಮಾಡಿ, ಕಮಿಷನ್ ಪಡೆಯುತ್ತಿದ್ದೆ’ ಎಂದು ರಮ್ಯಾ ಹೇಳಿಕೆ ಕೊಟ್ಟಿದ್ದಾಳೆ. ಆದರೆ, ಆ ವ್ಯಕ್ತಿಯ ಪೂರ್ವಾಪರದ ಬಗ್ಗೆ ಸಂಪೂರ್ಣ ಮಾಹಿತಿ ಕೊಡುತ್ತಿಲ್ಲ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !