ಪತ್ನಿ ಕೊಂದು ಅತ್ತೆ, ನಾದಿನಿಗೂ ಇರಿದ

7

ಪತ್ನಿ ಕೊಂದು ಅತ್ತೆ, ನಾದಿನಿಗೂ ಇರಿದ

Published:
Updated:
Deccan Herald

ಬೆಂಗಳೂರು:‌ ಶೀಲ ಶಂಕಿಸಿ ಪತ್ನಿಯನ್ನು ಕೊಲೆಗೈದ ಕೂಲಿ ಕಾರ್ಮಿಕನೊಬ್ಬ, ನಂತರ ಪತ್ನಿಯ ತವರು ಮನೆಗೆ ಹೋಗಿ ಅತ್ತೆ ಹಾಗೂ ನಾದಿನಿಗೂ ಚಾಕುವಿನಿಂದ ಇರಿದಿದ್ದಾನೆ.

ಹುಳಿಮಾವು ಸಮೀಪದ ನ್ಯಾನಪ್ಪನಹಳ್ಳಿಯಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿ ಅಬ್ದುಲ್‌ ಹನಾನ್‌ನನ್ನು ಬಂಧಿಸಿದ್ದಾರೆ.

ತ್ರಿಪುರದ ಅಬ್ದುಲ್, ವರ್ಷದ ಹಿಂದೆ ಶಾಜಿನಾ ಬೇಗಂ (20) ಎಂಬುವರನ್ನು ವಿವಾಹವಾಗಿದ್ದ. ದಂಪತಿ ನ್ಯಾನಪ್ಪನಹಳ್ಳಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಪಕ್ಕದ ರಸ್ತೆಯಲ್ಲೇ ಬೇಗಂ ಪೋಷಕರು ವಾಸವಿದ್ದಾರೆ.

ಇತ್ತೀಚೆಗೆ ಪತ್ನಿಯ ನಡತೆ ಮೇಲೆ ಸಂಶಯಪಟ್ಟಿದ್ದ ಆರೋಪಿ, ಅದೇ ವಿಚಾರವಾಗಿ ನಿತ್ಯವೂ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ. ಬೆಳಿಗ್ಗೆ  8.30ರ ಸುಮಾರಿಗೆ ದಂಪತಿ ನಡುವೆ ವಾಗ್ವಾದ ನಡೆದಿದ್ದು, ಆರೋಪಿ ಚಾಕುವಿನಿಂದ ಹೊಟ್ಟೆ ಹಾಗೂ ಎದೆಗೆ ಎಂಟು ಬಾರಿ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ಹೇಳಿದರು.

ನಂತರ ಹೊರಗಿನಿಂದ ಬಾಗಿಲು ಹಾಕಿಕೊಂಡು ಪತ್ನಿಯ ತವರು ಮನೆಗೆ ಹೋದ ಆರೋಪಿ, ‘ಶಾಜೀನಾ ಅನೈತಿಕ ಸಂಬಂಧ ಹೊಂದಿದ್ದ ವಿಷಯ ಮುಚ್ಚಿಟ್ಟಿದ್ದೀರಾ’ ಎಂದು ಅತ್ತೆ ಅಮೀನಾ ಬೇಗಂ ಅವರಿಗೆ ಚುಚ್ಚಿದ್ದ. ಈ ವೇಳೆ ತಾಯಿಯ ರಕ್ಷಣೆಗೆ ಬಂದ ನಾದಿನಿ ಶಬಾನಾ ಬೇಗಂ ಅವರಿಗೂ ಇರಿದು ಅಲ್ಲಿಂದ ಪರಾರಿಯಾಗಿದ್ದ.

ಸ್ಥಳೀಯರು ತಾಯಿ–ಮಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಪೊಲೀಸರು ಅಬ್ದುಲ್‌ನನ್ನು ಹುಡುಕಿಕೊಂಡು ಆತನ ಮನೆಗೆ ಹೋದಾಗ, ಅಲ್ಲಿ ಶಾಜಿನಾ ಸತ್ತು ಬಿದ್ದಿದ್ದರು. ಸುತ್ತಮುತ್ತಲ ರಸ್ತೆಗಳಲ್ಲಿ ಶೋಧ ನಡೆಸಿದಾಗ, ಹತ್ತಿರದ ಸಂಬಂಧಿಕರ ಮನೆಯಲ್ಲೇ ಆರೋಪಿ ಸಿಕ್ಕಿಬಿದ್ದಿದ್ದಾನೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !