ಜ್ಯೂಸ್ ಕುಡಿಸಿ ಚುಂಬಿಸಿದ; ದೂರು

7

ಜ್ಯೂಸ್ ಕುಡಿಸಿ ಚುಂಬಿಸಿದ; ದೂರು

Published:
Updated:

ಬೆಂಗಳೂರು:‌‌‌ ‘ನೆರೆಮನೆಯ ಯುವಕ ನಿದ್ರೆ ಮಾತ್ರೆ ಬೆರೆಸಿದ ಜ್ಯೂಸ್ ಕುಡಿಸಿ ನನಗೆ ಚುಂಬಿಸಿದ್ದಾನೆ’ ಎಂದು ಆರೋಪಿಸಿ ಮಿಜೋರಾಂನ 21 ವರ್ಷದ ಯುವತಿಯೊಬ್ಬರು ಕೋರಮಂಗಲ ಠಾಣೆಗೆ ದೂರು ಕೊಟ್ಟಿದ್ದಾರೆ.

ಕೆಲಸ ಹುಡುಕಿಕೊಂಡು ಆ.8ರಂದು ನಗರಕ್ಕೆ ಬಂದಿದ್ದ ಯುವತಿ, ಜಕ್ಕಸಂದ್ರದ ಗೆಳತಿ ಮನೆಯಲ್ಲಿ ಉಳಿದುಕೊಂಡಿದ್ದರು. ‘ಆ.11ರ ಮಧ್ಯಾಹ್ನ 3.30ರ ಸುಮಾರಿಗೆ ಗೆಳತಿ ಕೆಲಸಕ್ಕೆ ಹೋಗಿದ್ದಳು. ಈ ವೇಳೆ ನೆರೆಮನೆಯ ಸಹದೇವ್ ಬಂದು, ‘ನನಗೂ ಸ್ವಲ್ಪ ಅಡುಗೆ ಮಾಡಿಕೊಡಿ’ ಎಂದ. ಅಂತೆಯೇ ಅಡುಗೆ ಸಿದ್ಧಪಡಿಸಿ ಕೊಟ್ಟಿದ್ದೆ’ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾರೆ.

‘ಆತ ಊಟ ಮಾಡಿದ ಬಳಿಕ, ಬಾಳೆಹಣ್ಣಿನ ಜ್ಯೂಸ್ ತಂದು ಕೊಟ್ಟ. ಅದನ್ನು ಕುಡಿದ ಸ್ವಲ್ಪ ಹೊತ್ತಿನಲ್ಲೇ ನನಗೆ ತಲೆ ತಿರುಗಿದಂತಾಯಿತು. ಈ ವೇಳೆ ನನ್ನನ್ನು ತಬ್ಬಿಕೊಂಡು ಚುಂಬಿಸಿದ. ನಾನು ಕಿರುಚಾಡುತ್ತಿದ್ದಂತೆಯೇ ಆತ ಹೊರಗೆ ಓಡಿದ. ಆ ನಂತರ ಜ್ಯೂಸ್ ಲೋಟ ನೋಡಿದಾಗ ಅದರಲ್ಲಿ ಮಾತ್ರೆಗಳಿದ್ದವು’ ಎಂದು ಆರೋಪಿಸಿದ್ದಾರೆ.

‘ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬಂದ ಗೆಳತಿಗೆ ವಿಷಯ ತಿಳಿಸಿದೆ. ಬಳಿಕ ಆಕೆಯ ಸೂಚನೆಯಂತೆ ಸಹದೇವ್ ವಿರುದ್ಧ ದೂರು ಕೊಡಲು ನಿರ್ಧರಿಸಿದೆ. ಆತನನ್ನು ಬಂಧಿಸಿ, ಶಿಸ್ತು ಕ್ರಮ ಜರುಗಿಸಬೇಕು’ ಎಂದು ಸಂತ್ರಸ್ತೆ ಮನವಿ ಮಾಡಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !