ಕ್ರಿಮಿನಾಶಕ ಸೇವಿಸಿ ಯುವತಿ ಆತ್ಮಹತ್ಯೆ

ಶುಕ್ರವಾರ, ಏಪ್ರಿಲ್ 26, 2019
21 °C

ಕ್ರಿಮಿನಾಶಕ ಸೇವಿಸಿ ಯುವತಿ ಆತ್ಮಹತ್ಯೆ

Published:
Updated:

ಚಾಮರಾಜನಗರ: ತಾಲ್ಲೂಕಿನ ಪುಟ್ಟೇಗೌಡನಹುಂಡಿಯಲ್ಲಿ ಯುವತಿಯೊಬ್ಬರು ಕ್ರಿಮಿನಾಶಕ ಸೇವಿಸಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಗ್ರಾಮದ ಶೇಖರಪ್ಪ ಎಂಬುವವರ ಪುತ್ರಿ ಸಂಗೀತಾ (18) ಆತ್ಮಹತ್ಯೆ ಮಾಡಿಕೊಂಡವರು.

ಬೆಳೆಗೆ ಸಿಂಪಡಿಸುವುದಕ್ಕಾಗಿ ಇಟ್ಟಿದ್ದ ಕ್ರಿಮಿನಾಶಕವನ್ನು ಸೇವಿಸಿದ್ದ ಸಂಗೀತಾ ತೀವ್ರ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯುವಾಗ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. 

ತಲೆನೋವಿನಿಂದ ಬಳಲುತ್ತಿದ್ದ ಸಂಗೀತಾ ಒಂದು ವರ್ಷದಿಂದ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕುದೇರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !