ಪೊಲೀಸರ ವಶದಲ್ಲಿದ್ದಾಗಲೇ ಸರಗಳ್ಳರು ಎಸ್ಕೇಪ್

7
ಮಹಾರಾಷ್ಟ್ರಕ್ಕೆ ಕರೆದೊಯ್ದಿದ್ದಾಗ ಪರಾರಿಯಾದ ‘ಇರಾನಿ’ ಸದಸ್ಯರು

ಪೊಲೀಸರ ವಶದಲ್ಲಿದ್ದಾಗಲೇ ಸರಗಳ್ಳರು ಎಸ್ಕೇಪ್

Published:
Updated:

ಬೆಂಗಳೂರು: ಸರಗಳವು ಆರೋಪದಡಿ ವಶಕ್ಕೆ ಪಡೆದು ಚಿನ್ನಾಭರಣ ಜಪ್ತಿಗಾಗಿ ಮಹಾರಾಷ್ಟ್ರಕ್ಕೆ ಕರೆದೊಯ್ಯಲಾಗಿದ್ದ ಇರಾನಿ ಗ್ಯಾಂಗ್‌ನ ಸದಸ್ಯರಿಬ್ಬರು, ಪೊಲೀಸರ ವಶದಿಂದ ಎಸ್ಕೇಪ್ ಆಗಿದ್ದಾರೆ.

ಮೊಹಮ್ಮದ್ ಅಲಿ ಸರ್ಫರಾಜ್ (23) ಹಾಗೂ ಸಯ್ಯದ್ ಕರ ಫೈಜಾ ಅಲಿ ಹುಸೇನ್ (37) ಪರಾರಿಯಾಗಿರುವ ಆರೋಪಿಗಳು. ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗಷ್ಟೇ ಅವರಿಬ್ಬರನ್ನು ಈಶಾನ್ಯ ಪೊಲೀಸರು ವಶಕ್ಕೆ ಪಡೆದಿದ್ದರು. 

ಕದ್ದ ಚಿನ್ನಾಭರಣಗಳನ್ನು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕಲ್ಯಾಣ ನಗರದ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿರುವುದಾಗಿ ಆರೋಪಿಗಳು ಹೇಳಿಕೊಂಡಿದ್ದರು.

ಅದೇ ಕಾರಣಕ್ಕಾಗಿ ಪೊಲೀಸರು, ಅವರಿಬ್ಬರನ್ನು ಕಲ್ಯಾಣನಗರಕ್ಕೆ ಜ. 18ರಂದು ಕರೆದೊಯ್ದಿದ್ದರು. ಅದೇ ವೇಳೆಯಲ್ಲಿ ಆರೋಪಿಗಳು, ಪೊಲೀಸರ ಕಣ್ತಪ್ಪಿಸಿ ಪರಾರಿಯಾಗಿದ್ದಾರೆ. ಆ ಸಂಬಂಧ ಕಲ್ಯಾಣ ನಗರದ ಕಾನ್‌ಗಾಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಾಮೀನು ಮೇಲೆ ಹೊರಬಂದು ಕೃತ್ಯ: 2017ರ ಸೆಪ್ಟೆಂಬರ್‌ನಲ್ಲಿ ಕೊಡಿಗೇಹಳ್ಳಿ ಪೊಲೀಸರು, ಸರ್ಫರಾಜ್ ಹಾಗೂ ಹುಸೇನ್‌ನನ್ನು ಬಂಧಿಸಿದ್ದರು. ಅವರಿಬ್ಬರಿಂದ 18 ಚಿನ್ನದ ಸರ, 2 ಬೈಕ್‌ ಜಪ್ತಿ ಮಾಡಿದ್ದರು. ಜೈಲು ಸೇರಿದ್ದ ಆರೋಪಿಗಳು, ಜಾಮೀನು ಮೇಲೆ ಹೊರಬಂದು ಪುನಃ ಕೃತ್ಯ ಎಸಗುತ್ತಿದ್ದರು ಎನ್ನಲಾಗಿದೆ. 

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 2

  Sad
 • 1

  Frustrated
 • 7

  Angry

Comments:

0 comments

Write the first review for this !