‘ವಿಜಯಪುರಕ್ಕೆ ಸಿಆರ್‌ಪಿಎಫ್‌ ತುಕಡಿ ನಿಯೋಜಿಸಿ’

ಬುಧವಾರ, ಏಪ್ರಿಲ್ 24, 2019
23 °C
ವಿಜಯಪುರ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವರುದ್ರ ಬಾಗಲಕೋಟ ಆಗ್ರಹ

‘ವಿಜಯಪುರಕ್ಕೆ ಸಿಆರ್‌ಪಿಎಫ್‌ ತುಕಡಿ ನಿಯೋಜಿಸಿ’

Published:
Updated:

ವಿಜಯಪುರ: ‘ವಿಜಯಪುರದಲ್ಲಿ ದೌರ್ಜನ್ಯ, ಒತ್ತಾಯಪೂರ್ವಕವಾಗಿ ಮತ ಹಾಕಿಸುವುದನ್ನು ತಡೆಗಟ್ಟಲಿಕ್ಕಾಗಿಯೇ, ಚುನಾವಣಾ ಆಯೋಗ ಕೇಂದ್ರದ ಸಿಆರ್‌ಪಿಎಫ್ ತುಕಡಿ ನಿಯೋಜಿಸಬೇಕು’ ಎಂದು ವಿಜಯಪುರ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವರುದ್ರ ಬಾಗಲಕೋಟ ಆಗ್ರಹಿಸಿದರು.

‘ವಿಜಯಪುರ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 41 ಮತಗಟ್ಟೆಗಳನ್ನು ಅತಿ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಲಾಗಿದ್ದು, ಇಲ್ಲಿ ಸಿ.ಸಿ.ಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಮತದಾನ ನಡೆಸಬೇಕು’ ಎಂದು ಸೋಮವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿಧಾನಸಭಾ ಚುನಾವಣೆಯಲ್ಲಿದ್ದ ಮತದಾರರ ಸಂಖ್ಯೆಗೂ, ಈಗಿನ ಸಂಖ್ಯೆಗೂ 6022 ಮತದಾರರು ಕಡಿಮೆಯಾಗಿದ್ದಾರೆ. ಆಯೋಗ ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಬೇಕು’ ಎಂದು ಶಿವರುದ್ರ ಆಗ್ರಹಿಸಿದರು.

‘ಮೈತ್ರಿಕೂಟದ ಅಭ್ಯರ್ಥಿ ಪತಿ ದೇವಾನಂದ ಚವ್ಹಾಣ ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ (ಶಿಕ್ಷಣ ಇಲಾಖೆ) ಇದ್ದಾರೆ. ತಮ್ಮ ಪ್ರಭಾವವನ್ನು ಶಿಕ್ಷಕ ಸಮೂಹದ ಮೇಲೆ ಬಳಸುತ್ತಿದ್ದಾರೆ ಎಂಬುದು ಗೊತ್ತಾಗಿದೆ. ತಮ್ಮ ಶಿಕ್ಷಣ ಸಂಸ್ಥೆಯ ಸಿಬ್ಬಂದಿಯನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ. ಆಯೋಗ ಈ ನಿಟ್ಟಿನಲ್ಲೂ ಕ್ರಮ ಜರುಗಿಸಬೇಕು’ ಎಂದು ಬಾಗಲಕೋಟ ಒತ್ತಾಯಿಸಿದರು.

ಮಂಡಲ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ರಜನಿ ಸಂಬಣ್ಣಿ, ರಾಕೇಶ ಕುಲಕರ್ಣಿ, ಸಿದ್ದು ಬಿರಾದಾರ, ಉಮೇಶ ವೀರಕರ, ಮಹೇಶ ಒಡೆಯರ ಪತ್ರಿಕಾಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !