ಬುಡಕಟ್ಟು ಭಾಷೆ ಕಲಿಯಲಿದ್ದಾರೆ ಸಿಆರ್‌ಪಿಎಫ್ ಸಿಬ್ಬಂದಿ

7
ನಕ್ಸಲರ ವಿರುದ್ಧ ಗುಪ್ತಚರ ಜಾಲ ಬಲಪಡಿಸುವ ಉದ್ದೇಶ

ಬುಡಕಟ್ಟು ಭಾಷೆ ಕಲಿಯಲಿದ್ದಾರೆ ಸಿಆರ್‌ಪಿಎಫ್ ಸಿಬ್ಬಂದಿ

Published:
Updated:

ನವದೆಹಲಿ: ಜಾರ್ಖಂಡ್‌ನಲ್ಲಿ ನಕ್ಸಲರ ವಿರುದ್ಧ ಗುಪ್ತಚರ ಜಾಲವನ್ನು ಬಲಪಡಿಸುವ ಉದ್ದೇಶದಿಂದ ತನ್ನ ಸಿಬ್ಬಂದಿಗೆ ಸ್ಥಳೀಯ ಭಾಷೆ ಹಾಗೂ ಸಾಂಸ್ಕೃತಿಕ ಕೋರ್ಸ್ ಕಲಿಸಲು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಮುಂದಾಗಿದೆ.

ಇದೇ ಮೊದಲ ಬಾರಿಗೆ ಇಂತಹ ಯತ್ನಕ್ಕೆ ಹೈಹಾಕಿರುವ ಸಿಆರ್‌ಪಿಎಫ್, ಜಾರ್ಖಂಡ್‌ನ ಸ್ಥಳೀಯರು, ಬುಡಕಟ್ಟು ಜನರು ಹಾಗೂ ನಕ್ಸಲರು ಬಳಸುವ ಭಾಷೆ, ಉಪಭಾಷೆ ಮತ್ತು ಅವರ ಸಂಪ್ರದಾಯಗಳ ಬಗ್ಗೆ ತರಬೇತಿ ನೀಡಲು ಆರಂಭಿಸಿದೆ.

ನಕ್ಸಲರ ಬಗ್ಗೆ ಹೆಚ್ಚೆಚ್ಚು ಮಾಹಿತಿ ಸಂಗ್ರಹಿಸುವುದು ಹಾಗೂ ಸ್ಥಳೀಯರ ಜೊತೆ ನಿಕಟಸ್ನೇಹ ಗಳಿಸುವುದು ಈ ವಿಶೇಷ ತರಬೇತಿಯ ಪ್ರಮುಖ ಉದ್ದೇಶ.

ಪ್ರತಿವಾರ ನಡೆಯುವ ಆಚರಣೆಗಳು ಹಾಗೂ ಸಾಂಸ್ಕೃತಿಕ ಕಾ‌ರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಲು ಕುಗ್ರಾಮಗಳಿಗೆ ಈ ತಂಡಗಳು ಭೇಟಿ ನೀಡುತ್ತವೆ. 

ಬುಡಕಟ್ಟು ಜನರು ಮಾತನಾಡುವ ಹೊ, ಸಂತಾಲಿ, ನಾಗ್ಪುರಿ, ಕುರುಖ್, ಸಾದ್ರಿ, ಭೋಜ್‌ಪುರ ಮೊದಲಾದ ಭಾಷೆಗಳನ್ನು ಪ್ರತಿ ಬೆಟಾಲೊಯನ್‌ನ ಕನಿಷ್ಠ 60 ಮಂದಿಗೆ ಕಲಿಸುವ ಉದ್ದೇಶವಿದೆ ಎಂದು ಜಾರ್ಖಂಡ್‌ನ ಸಿಆರ್‌ಪಿಎಫ್ ಐಜಿ ಸಂಜಯ್ ಲಾತ್‌ಕರ್ ಹೇಳಿದ್ದಾರೆ. 

ಇವರು ಉಳಿದ ಸಿಬ್ಬಂದಿಗೆ ತರಬೇತಿ ನೀಡಲಿದ್ದಾರೆ. ಇದು ಮುಂದುವರಿಯಲಿದ್ದು, ಸ್ಥಳೀಯರು ಹಾಗೂ ಸಿಬ್ಬಂದಿ ಮಧ್ಯೆ ಗಾಢ ನಂಟು ಬೆಳೆಯಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !