ಬಡವರಿಗೆ ವರವಾದ ಸಿಟಿ ಸ್ಕ್ಯಾನ್‌, ಎಂಆರ್‌ಐ ಸ್ಕ್ಯಾನ್‌

ಮಂಗಳವಾರ, ಜೂನ್ 18, 2019
26 °C
ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಕ್ಯಾನ್‌ಗಾಗಿ ನಿತ್ಯವೂ ಸರತಿ ಸಾಲು

ಬಡವರಿಗೆ ವರವಾದ ಸಿಟಿ ಸ್ಕ್ಯಾನ್‌, ಎಂಆರ್‌ಐ ಸ್ಕ್ಯಾನ್‌

Published:
Updated:
Prajavani

ವಿಜಯಪುರ: ಸರ್ಕಾರಿ ಆಸ್ಪತ್ರೆ ಎಂದಾಕ್ಷಣ ಮೂಗು ಮುರಿಯುತ್ತಿದ್ದ ಜನರೇ ಇದೀಗ, ಎಂ.ಆರ್.ಐ, ಸಿಟಿ ಸ್ಕ್ಯಾನ್‌ಗಾಗಿ ಸರತಿ ಸಾಲಿನಲ್ಲಿ ನಿಲ್ಲುವುದು ಗೋಚರಿಸುತ್ತಿದೆ. ಒಂಭತ್ತು ತಿಂಗಳ ಅವಧಿಯಲ್ಲಿ 7100 ಜನರು ಇವೆರೆಡರ ಲಾಭ ಪಡೆದಿದ್ದಾರೆ.

ಈ ಸಾಧನೆಯ ಚಿತ್ರಣ ಗೋಚರಿಸುವುದು ವಿಜಯಪುರ ನಗರದಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ.

ದುಬಾರಿಯ ಎಂಆರ್‌ಐ ಸ್ಕ್ಯಾನ್‌ ಆರಂಭಗೊಂಡ ನಾಲ್ಕು ತಿಂಗಳಲ್ಲೇ 2773 ಜನರು, 9 ತಿಂಗಳಲ್ಲಿ 4368 ಜನರು ಸಿಟಿ ಸ್ಕ್ಯಾನ್‌ ಸೇವೆ ಪಡೆದುಕೊಂಡಿರುವುದು ಬಡ ರೋಗಿಗಳ ಪಾಲಿಗೆ ಒಳ್ಳೆಯ ಬೆಳವಣಿಗೆ. ಈ ಎರಡೂ ಸ್ಕ್ಯಾನ್‌ ಸೆಂಟರ್‌ಗಳ ಆರಂಭದ ಹಿಂದೆ ಆರೋಗ್ಯ ಸಚಿವ ಶಿವಾನಂದ ಪಾಟೀಲ ಶ್ರಮವಿದೆ.

‘ಕೈ, ಕಾಲು, ಸೊಂಟ, ಬೆನ್ನು ನೋವಿಗಾಗಿ ಚಿಕಿತ್ಸೆ ಪಡೆಯಲು ಖಾಸಗಿ ಆಸ್ಪತ್ರೆಗಳಿಗೆ ತೆರಳಿದರೆ ಸಿಟಿ ಸ್ಕ್ಯಾನ್‌, ಎಂ.ಆರ್.ಐ ಸ್ಕ್ಯಾನ್‌ ಮಾಡಿಸಲು ಹೇಳುತ್ತಾರೆ. ಅದಕ್ಕೆ ₹ 5000ದಿಂದ ₹ 6000 ಖರ್ಚಾಗುತ್ತದೆ. ಅದನ್ನು ಮಾಡಿಸದಿದ್ದರೆ ಸಮಸ್ಯೆ ತಿಳಿಯುವುದಿಲ್ಲ. ಅನಿವಾರ್ಯವಾಗಿ ಬಡವರು, ಶ್ರೀಮಂತರು ಯಾರೇ ಇರಲಿ ಮಾಡಿಸಲೇಬೇಕು. ಇದೀಗ ಸರ್ಕಾರಿ ಆಸ್ಪತ್ರೆಯಲ್ಲಿ ಈ ಸೇವೆ ದೊರೆಯುತ್ತಿರುವುದರಿಂದ ಬಡವರಿಗೆ ತುಂಬಾ ಅನುಕೂಲವಾಗಿದೆ. ನಮ್ಮ ತಾತನಿಗೂ ಇಲ್ಲಿಯೇ ಸ್ಕ್ಯಾನ್‌ ಮಾಡಿಸಿರುವುದಾಗಿ’ ಸಿಂದಗಿ ತಾಲ್ಲೂಕಿನ ಕೋರವಾರದ ಗುರುರಾಜ ಹುಣಚಗಿ ತಿಳಿಸಿದರು.

‘ನಮ್ಮಂಥಹ ದುಡಿದು ತಿನ್ನುವ ಬಡವರಿಗೆ ಆರೋಗ್ಯ ಸಮಸ್ಯೆಯಾಗಿ, ಚಿಕಿತ್ಸೆಗೆ ಆಸ್ಪತ್ರೆ ಬಿಲ್‌ ಒಂದೆರೆಡು ಸಾವಿರ ಆದರೂ ಕಷ್ಟ ಆಗುತ್ತದೆ. ಅಂಥಹದರಲ್ಲಿ ಎಂ.ಆರ್.ಐ ಸ್ಕ್ಯಾನ್‌ ಮಾಡಿಸಲು ಐದಾರು ಸಾವಿರ ಖರ್ಚು ಮಾಡುವುದು ಆಗದ ಕೆಲಸ. ಬಡವರ ಅನುಕೂಲಕ್ಕಾಗಿ ಸರ್ಕಾರ ಜಿಲ್ಲಾ ಆಸ್ಪತ್ರೆಯಲ್ಲಿ ಈ ಸೇವೆ ಕಲ್ಪಿಸಿದ್ದರಿಂದ ನನ್ನ ಗಂಡನಿಗೆ ಎಂಆರ್ಐ ಸ್ಕ್ಯಾನ್‌ ಹೊರೆ ಆಗಲಿಲ್ಲ. ಆಧಾರ್ ಕಾರ್ಡ್‌ ನೀಡಿ ಉಚಿತವಾಗಿ ಮಾಡಿಸಿದೆ’ ಎನ್ನುತ್ತಾರೆ ಹೂವಿನ ಹಿಪ್ಪರಗಿಯ ನಿರ್ಮಲಾ ಬೀಳಗಿ.

‘2019ರ ಜನವರಿಯಲ್ಲಿ ಎಂಆರ್‌ಐ ಸ್ಕ್ಯಾನ್‌ ಸೇವೆ ಆರಂಭಗೊಂಡಿತು. ಜನವರಿ 445, ಫೆಬ್ರುವರಿ 604, ಮಾರ್ಚ್‌ 589, ಏಪ್ರಿಲ್‌ 619, ಮೇ 516 ಸೇರಿ ಕೇವಲ ನಾಲ್ಕು ತಿಂಗಳಲ್ಲಿ 2773 ಜನರು ಈ ಸೇವೆ ಪಡೆದುಕೊಂಡಿದ್ದಾರೆ.

2018ರ ಸೆಪ್ಟೆಂಬರ್‌ನಲ್ಲಿ ಆರಂಭಗೊಂಡ ಸಿಟಿ ಸ್ಕ್ಯಾನ್‌ ಬಳಕೆಯನ್ನು ಸೆಪ್ಟೆಂಬರ್‌ ತಿಂಗಳಲ್ಲಿ 147, ಅಕ್ಟೋಬರ್ 457, ನವೆಂಬರ್‌ 460, ಡಿಸೆಂಬರ್ 493, ಜನವರಿ 583, ಫೆಬ್ರುವರಿ 631, ಮಾರ್ಚ್ 585, ಏಪ್ರಿಲ್‌ 610, ಮೇ ಮಾಹೆಯಲ್ಲಿ 402 ಜನರು ಇದರ ಲಾಭ ಪಡೆದುಕೊಂಡಿದ್ದಾರೆ’ ಎಂದು ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಶರಣಪ್ಪ ಕಟ್ಟಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !