ಸಾಂಪ್ರದಾಯಿಕ ಉಡುಗೆ ತೊಟ್ಟು ಗಮನ ಸೆಳೆದರು..!

ಭಾನುವಾರ, ಏಪ್ರಿಲ್ 21, 2019
32 °C

ಸಾಂಪ್ರದಾಯಿಕ ಉಡುಗೆ ತೊಟ್ಟು ಗಮನ ಸೆಳೆದರು..!

Published:
Updated:
Prajavani

ನಿಡಗುಂದಿ: ಬೆಳ್ಳಂ ಬೆಳಿಗ್ಗೆ ಇಲ್ಲಿಯ ಪ್ರಮುಖ ಕಾಲೇಜು ರಸ್ತೆಯಲ್ಲಿ ರೇಷ್ಮೆ ಸೀರೆ ತೊಟ್ಟು, ಹಳ್ಳಿ ಆಭರಣ ಹಾಕಿಕೊಂಡ ಯುವತಿಯರು, ಇನ್ನೊಂದೆಡೆ ಧೋತರ, ಲುಂಗಿ, ನೆಹರೂ ಶರ್ಟ್‌ ಧರಿಸಿ ಮೇಲೆ ರೇಷ್ಮೆ ಪಟಗಾ ಸುತ್ತಿಕೊಂಡ ಯುವಕರ ಸಂಭ್ರಮ ಮುಗಿಲುಮುಟ್ಟಿತ್ತು.

ಪಟ್ಟಣದ ಎಂ.ವಿ.ನಾಗಠಾಣ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ರಾಷ್ಟ್ರೀಯ ದೇಸಿ ಉಡುಪು ದಿನಾಚರಣೆ’ ಸಂದರ್ಭದಲ್ಲಿ ಕಂಡ ನೋಟವಿದು.

ಯುವಕರಲ್ಲಿ ಕೆಲವರು ಧೋತರ ತೊಟ್ಟು ಗಾಂಧಿ ಟೋಪಿ ಹಾಕಿಕೊಂಡರೆ, ಇನ್ನೂ ಕೆಲವರು ಲುಂಗಿ ಸುತ್ತಿಕೊಂಡು ನೆಹರೂ ಶರ್ಟ್‌, ಹೆಗಲ ಮೇಲೆ ಟವೆಲ್‌ ಹಾಕಿಕೊಂಡು ಗಮನಸೆಳೆದರು.

ಸೆಲ್ಫಿ ಸಂಭ್ರಮ: ಸಾಂಪ್ರದಾಯಿಕ ಉಡುಗೆ ತೊಟ್ಟ ಯುವಕರು, ಯುವತಿಯರು ತಮ್ಮ ಮಿತ್ರರ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. 

ಜಿವಿವಿಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಜಿ. ನಾಗಠಾಣ, ಕಾಲೇಜು ಪ್ರಾಚಾರ್ಯ ಡಾ ಎಂ.ಎಲ್‌ ಉಗಲವಾಟ, ಎನ್‌.ಎಸ್. ಕೂಚಬಾಳ, ಐ.ಎಸ್. ಲಷ್ಕರಿ, ಎಸ್‌.ಆರ್. ಬಿರಾದಾರ, ಎಸ್.ಬಿ. ಶೇರೇಖಾನೆ, ಎಂ.ಬಿ. ಪಾಟೀಲ ಕಾರ್ಯಕ್ರಮದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !