‘ಕಾಯಕವೇ ಧರ್ಮವಾಗಬೇಕು’

ಶನಿವಾರ, ಮಾರ್ಚ್ 23, 2019
24 °C

‘ಕಾಯಕವೇ ಧರ್ಮವಾಗಬೇಕು’

Published:
Updated:
Prajavani

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕಿನ ವನಕಲ್ಲು ಮಠದಲ್ಲಿ ದನಗಳ ಜಾತ್ರೆ, ಬ್ರಹ್ಮರಥೋತ್ಸವ, ರೈತರ ಸಮಾವೇಶ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಇತ್ತಿಚೆಗೆ ನಡೆಯಿತು.

’ಧರ್ಮ ರಕ್ಷಿಸಿದವರನ್ನು ಧರ್ಮ ರಕ್ಷಿಸುತ್ತದೆ. ನಾವು ಮಾಡುವ ಕಾಯಕವೇ ಧರ್ಮವಾಗಬೇಕು. ಸ್ವಾಮೀಜಿ ಅವರ ನೇತೃತ್ವದಲ್ಲಿ ಮಠದಲ್ಲಿ ನೂರಾರು ಬಡ, ನಿರ್ಗತಿಕ, ಅನಾಥ ಮಕ್ಕಳು ವಸತಿ ಸಹಿತ ಶಿಕ್ಷಣ ಪಡೆಯುತ್ತಿದ್ದಾರೆ. ವೃದ್ಧರು ನೆಮ್ಮದಿಯಿಂದ ಬದುಕುತ್ತಿರುವುದು ಕಂಡಾಗ ಸಂತೋಷವಾಗುತ್ತದೆ’ ಎಂದು ‘ವನಕಲ್ಲು ಶ್ರೀ’ ಪ್ರಶಸ್ತಿ ಸ್ವೀಕರಿಸಿ ಸಾಲುಮರದ ತಿಮ್ಮಕ್ಕ ಹೇಳಿದರು.

ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಕೆ.ಎಂ.ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ‘ವಿಶ್ವಜ್ಯೋತಿ ಪ್ರಶಸ್ತಿ’, ಡಾ.ಲಕ್ಷ್ಮೀನರಸಿಂಹಯ್ಯ ಅವರಿಗೆ ’ಜಗಜ್ಯೋತಿ ಬಸವೇಶ್ವರ ಪ್ರಶಸ್ತಿ’, ಬಮೂಲ್ ನಿರ್ದೇಶಕ ಎಂ.ಜಿ.ತಿಮ್ಮರಾಜು ಅವರಿಗೆ ‘ಬಾಲಗಂಗಾಧರನಾಥ ನಿರ್ಮಲ ಜ್ಯೋತಿ ಪ್ರಶಸ್ತಿ’ ನೀಡಿ ಶಾಸಕ ಡಾ.ಕೆ.ಶ್ರೀನಿವಾಸ ಮೂರ್ತಿ ಗೌರವಿಸಿದರು.

ಹಿರಿಯ ಪ್ರಾಥಮಿಕ ಪಾಠಶಾಲೆಯ ನೂತನ ಕಟ್ಟಡವನ್ನು ಕೃಷಿ ಸಚಿವ ಶಿವಶಂಕರ ರೆಡ್ಡಿ ಉದ್ಘಾಟಿಸಿ ಮಾತನಾಡಿ, ’ಗ್ರಾಮೀಣ ಭಾಗದ ಜನತೆಯ ಯಶಸ್ಸಿಗಾಗಿ ಹಲವು ರೀತಿಯ ಕಾರ್ಯಕ್ರಮಗಳನ್ನು ಮಠ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದರು.

ಸೀತಾರಾಂ ಜಿಂದಾಲ್ ಫೌಂಡೇಷನ್‌ನಿಂದ ನಿರ್ಮಿಸಿರುವ 32 ಶೌಚಾಲಯ ಹಾಗೂ ಸ್ನಾನಗೃಹಗಳನ್ನು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಉದ್ಘಾಟಿಸಿದರು.

ನಂದೀಶ್ವರ ನೂತನ ವಿಗ್ರಹವನ್ನು ಇದೇ ವೇಳೆ ಲೋಕಾರ್ಪಣೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !