ಅರಣ್ಯ ಒತ್ತುವರಿ: ತಡೆಗೋಡೆ ತೆರವು

ಮಂಗಳವಾರ, ಜೂನ್ 25, 2019
23 °C

ಅರಣ್ಯ ಒತ್ತುವರಿ: ತಡೆಗೋಡೆ ತೆರವು

Published:
Updated:
Prajavani

ದಾಬಸ್‌ಪೇಟೆ: ‘ನೆಲಮಂಗಲ ತಾಲ್ಲೂಕಿನ ವೀರಸಾಗರ ಗ್ರಾಮದ ಅರಣ್ಯವನ್ನು ಒತ್ತುವರಿ ಮಾಡಿ ಆಂಜನೇಯ ದೇವಾಲಯದ ತಡೆಗೋಡೆ ಕಟ್ಟಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಡೆಗೋಡೆಯ ಒಂದು ಭಾಗವನ್ನು ತೆರವುಗೊಳಿಸಿದರು. 

‘ಹತ್ತಾರು ವರ್ಷಗಳಿಂದ ಇಲ್ಲಿ ದೇವಾಲಯವಿದೆ. ಇತ್ತೀಚೆಗೆ ಅದನ್ನು ಜೀರ್ಣೋದ್ಧಾರ ಮಾಡಲಾಗಿತ್ತು. ಮುನ್ಸೂಚನೆ ನೀಡದೆ ಅರಣ್ಯಾಧಿಕಾರಿಗಳು ಜೆಸಿಬಿ ತಂದು ತಡೆಗೋಡೆ ಕೆಡವಿದ್ದಾರೆ’ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದರು. 

‘₹ 2 ಲಕ್ಷ ವೆಚ್ಚದಲ್ಲಿ ದೇವಾಲಯಕ್ಕೆ ತಡೆಗೋಡೆ ನಿರ್ಮಿಸಲಾಗಿತ್ತು. ಈಗ ಅದನ್ನು ಕೆಡವಿದ್ದಾರೆ. ಇದರ ಹಿಂದೆ ದುರುದ್ದೇಶವಿದೆ’ ಎಂದು ಗ್ರಾಮದ ಭಾನುಪ್ರಕಾಶ್ ಆರೋಪಿಸಿದರು.

‘ಸಾಕಷ್ಟು ಮಂದಿ ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಅದನ್ನೆಲ್ಲಾ ತೆರವುಗೊಳಿಸದೇ, ದೇವಾಲಯದ ತಡೆಗೋಡೆ ಕೆಡವಿದ್ದಾರೆ’ ಎಂದು ದೂರಿದರು. 

ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಚೇತನ್, ‘ಅರಣ್ಯದ ಎರಡು ಅಡಿಗಳಷ್ಟು ಜಾಗವನ್ನು ಒತ್ತುವರಿ ಮಾಡಿಕೊಂಡು ದೇವಾಲಯದ ಹಿಂಭಾಗದಲ್ಲಿ ಕಾಂಪೌಂಡ್ ನಿರ್ಮಿಸಲಾಗಿತ್ತು. ಅದನ್ನು ತೆರವುಗೊಳಿಸುವಂತೆ ಸಂಬಂಧಿಸಿದವರಿಗೆ ಹಲವು ಬಾರಿ ಹೇಳಲಾಗಿತ್ತು’ ಎಂದರು.

‘ಇತ್ತೀಚೆಗೆ ಹಿರಿಯ ಅಧಿಕಾರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಈ ಸ್ಥಳ ಪರಿಶೀಲಿಸಿದ್ದರು. ಮುಂದೆ ತೊಂದರೆಯಾಗವುದು ಬೇಡ ಎಂದು ಅರಣ್ಯದ ಜಾಗದಲ್ಲಿರುವ ಕಾಂಪೌಂಡ್ ತೆರವು ಗೊಳಿಸಲು ಸೂಚಿಸಿದ್ದರು. ಅದರಂತೆ ನಾವು ತೆರವು ಕಾರ್ಯ ಮಾಡಿದ್ದೇವೆ’ ಎಂದು ತಿಳಿಸಿದರು. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !