ಮಕ್ಕಳಿಂದ ದಂಡಿ ಯಾತ್ರೆ ಸ್ಮರಣೆ

ಭಾನುವಾರ, ಮಾರ್ಚ್ 24, 2019
31 °C

ಮಕ್ಕಳಿಂದ ದಂಡಿ ಯಾತ್ರೆ ಸ್ಮರಣೆ

Published:
Updated:
Prajavani

ನೆಲಮಂಗಲ: ಮಹಾತ್ಮ ಗಾಂಧಿ ನೇತೃತ್ವದಲ್ಲಿ 1930ನೇ ಮಾರ್ಚ್ 12ರಂದು ನಡೆಸಿದ್ದ ದಂಡಿಯಾತ್ರೆಯ ಪ್ರದರ್ಶನವನ್ನು ತಾಲ್ಲೂಕಿನ ಮದಲಕೋಟೆಯ ಯೋಗಾನರಸಿಂಹ ಪ್ರೌಢಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟರು.

ರಾಜ್ಯ ಸರ್ವೋದಯ ಮಂಡಲದ ಸಹಯೋಗದಲ್ಲಿ ನಡೆದ ಅಣಕು ಪ್ರದರ್ಶನದಲ್ಲಿ ಯೋಗಾನರಸಿಂಹಸ್ವಾಮಿ ಪ್ರೌಢ
ಶಾಲೆಯ ಎಲ್ಲ ವಿದ್ಯಾರ್ಥಿಗಳು ಶ್ವೇತವಸ್ತ್ರಧಾರಿಗಳಾಗಿದ್ದರು. ಗಾಂಧಿ, ಕಸ್ತೂರಬಾ, ಮೈಲಾರ ಮಹದೇವಪ್ಪ, ಸರೋಜಿನಿ ನಾಯ್ಡು ವೇಷಧಾರಿಗಳು ಗಮನ ಸೆಳೆದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರದ ಘೋಷವಾಕ್ಯಗಳ ಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತ ಗ್ರಾಮದ ಪಂಚಾಯಿತಿ ಮುಂಭಾಗದಲ್ಲಿ ಉಪ್ಪಿನ ತೆರಿಗೆಯನ್ನು ವಿರೋಧಿಸಿ ಉಪ್ಪನ್ನು ಎಲ್ಲರಿಗೂ ಹಂಚುವ ಮೂಲಕ ದಂಡಿ ಯಾತ್ರೆಯ ದಿನವನ್ನು ಸ್ಮರಿಸಿದರು.
ರಾಜ್ಯ ಸರ್ವೋದಯ ಮಂಡಲದ ಅಧ್ಯಕ್ಷ ಎಲ್‌.ನರಸಿಂಹಯ್ಯ, ಕೋಶಾಧ್ಯಕ್ಷ ಡಾ.ಯು.ಚಿ.ದೊಡ್ಡಯ್ಯ, ಕಾರ್ಯದರ್ಶಿ ಡಾ.ಎಚ್‌.ಎಸ್‌.ಸುರೇಶ್‌ ದಂಡಿ ಯಾತ್ರೆಯ ಬಗ್ಗೆ ಮಾತನಾಡಿದರು. ಸಂಚಾಲಕ ಷಣ್ಮುಖಪ್ಪ, ಗ್ರಾ.ಪಂ.ಅಧ್ಯಕ್ಷ ಎಂ.ವಿ.ಗೋವಿಂದರಾಜು, ಸದಸ್ಯೆ ರೇಣುಕಮ್ಮ ವಿದ್ಯಾರ್ಥಿಗಳಿಗೆ ಗಾಂಧಿ ಸ್ಮರಣಿಕೆ ವಿತರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !