13ರಿಂದ ಜಿಲ್ಲಾ ದಸರಾ ಸಂಭ್ರಮ, ಯುವ ಜನರಲ್ಲಿ ಅರ್ಜುನ್‌ ಜನ್ಯ ರಸಸಂಜೆಯ ಗುಂಗು

7
ಸಾಂಸ್ಕೃತಿಕ ಕಾರ್ಯಕ್ರಮಗಳ ರಂಗು

13ರಿಂದ ಜಿಲ್ಲಾ ದಸರಾ ಸಂಭ್ರಮ, ಯುವ ಜನರಲ್ಲಿ ಅರ್ಜುನ್‌ ಜನ್ಯ ರಸಸಂಜೆಯ ಗುಂಗು

Published:
Updated:
Deccan Herald

ಚಾಮರಾಜನಗರ: ನಾಲ್ಕು ದಿನಗಳ ಕಾಲ ನಡೆಯಲಿರುವ ಜಿಲ್ಲಾ ದಸರಾ ಮಹೋತ್ಸವಕ್ಕೆ ಶನಿವಾರ ಚಾಲನೆ ಸಿಗಲಿದೆ.

ಚಾಮರಾಜೇಶ್ವರ ದೇವಾಲಯದಲ್ಲಿ ಬೆಳಿಗ್ಗೆ 10 ಗಂಟೆಗೆ ವಿಶೇಷ ಪೂಜಾ ಕಾರ್ಯದೊಂದಿಗೆ ದಸರಾ ಕಾರ್ಯಕ್ರಮ ಆರಂಭವಾಗಲಿದೆ. ಸಂಜೆ 5 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. 

ಸಕಲ ಸಿದ್ಧತೆ: 13ರಿಂದ 16ರವರೆಗೆ ನಡೆಯಲಿರುವ ಮಹೋತ್ಸವಕ್ಕಾಗಿ ಜಿಲ್ಲಾಡಳಿತ ಈಗಾಗಲೇ ಸಕಲ ಸಿದ್ಧತೆ ನಡೆಸಿದೆ. ಚಾಮರಾಜೇಶ್ವರ ದೇವಾಲಯದ ಸುತ್ತಮುತ್ತಲಿನ ರಸ್ತೆ, ಭುವನೇಶ್ವರಿ ವೃತ್ತ ಹಾಗೂ ಬಿ.ರಾಚಯ್ಯ ಜೋಡಿ ರಸ್ತೆಗಳನ್ನು ವಿದ್ಯುತ್‌ ದೀಪಗಳಿಂದ ಶೃಂಗರಿಸಲಾಗಿದೆ. 

ಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಸುಸಜ್ಜಿತ ವೇದಿಕೆಯನ್ನು ನಿರ್ಮಿಸಲಾಗಿದೆ. ಕಾರ್ಯಕ್ರಮ ವೀಕ್ಷಿಸಲು ಬರುವವರಿಗೆ ವ್ಯವಸ್ಥಿತವಾದ ಆಸನ ವ್ಯವಸ್ಥೆಯನ್ನೂ ಮಾಡಲಾಗಿದೆ. 

ಸಂಜೆ 4 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಿಂದ ಮೆರವಣಿಗೆ ನಡೆಯಲಿದೆ. ಇದರಲ್ಲಿ 16 ಕಲಾ ತಂಡಗಳು ಭಾಗವಹಿಸಲಿವೆ.

ಶನಿವಾರದಿಂದ ಅಕ್ಟೋಬರ್‌ 16ರವರೆಗೆ ಪ್ರತಿದಿನ ಸಂಜೆ 4.30ರಿಂದ ರಾತ್ರಿ 10.30 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಬ್ಬದ ಸಂಭ್ರಮಕ್ಕೆ ಕಳೆಕಟ್ಟಲಿವೆ.

ಅರ್ಜುನ್‌ ಜನ್ಯ ತಂಡದ ಕಾರ್ಯಕ್ರಮ: ಶನಿವಾರ ಸಂಜೆ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಹಾಗೂ ಅವರ ತಂಡ ಸಂಗೀತ ರಸಸಂಜೆ ಪ್ರದರ್ಶನ ನೀಡಲಿದ್ದು, ಯುವಜನತೆಯಲ್ಲಿ ನಿರೀಕ್ಷೆ ಗರಿಗೆದರಿದೆ.

13ರ ಕಾರ್ಯಕ್ರಮ

ಬೆಳಿಗ್ಗೆ 10: ಚಾಮರಾಜೇಶ್ವರ ದೇವಾಲಯದಲ್ಲಿ ಪೂಜಾ ಕಾರ್ಯ

ಬೆಳಿಗ್ಗೆ 10: ಭ್ರಮರಾಂಭ ಮತ್ತು ಸಿಂಹ ಮೂವಿ ಪ್ಯಾರಡೈಸ್‌ ಚಿತ್ರಮಂದಿರಗಳಲ್ಲಿ ಕನ್ನಡ ಚಲನಚಿತ್ರಗಳ ಪ್ರದರ್ಶನ

ಸಂಜೆ 4: ಕಲಾತಂಡಗಳ ಮೆರವಣಿಗೆ

ಸಂಜೆ 5: ದಸರಾ ಮಹೋತ್ಸವದ ಉದ್ಘಾಟನೆ

ಸಾಂಸ್ಕೃತಿಕ ಕಾರ್ಯಕ್ರಮಗಳು

ಸಂಜೆ 4.30‌: ಬನ್ನೂರು ಗ್ರಾಮದ ರಂಗಸ್ವಾಮಿ ತಂಡದಿಂದ ನಗಾರಿ

ಸಂಜೆ 4.50: ಗುಂಡ್ಲುಪೇಟೆಯ ಬಿ.ಸಿದ್ದನಗೌಡ ಅವರಿಂದ ಹಿಂದೂಸ್ಥಾನಿ ಸಂಗೀತ

ಸಂಜೆ 5.20: ಬಿಳಿಗಿರಿರಂಗನ ಬೆಟ್ಟದ ಪುಷ್ಪಮಾಲೆ ಕಲಾ ಸಂಘದವರಿಂದ ಸೋಲಿಗರ ಗೊರುಕನ ನೃತ್ಯ

ಸಂಜೆ 5.45: ವಿದ್ಯಾರ್ಥಿಗಳಿಂದ ಕಾಲೇಜು ಸಂಜೆ ಹೆಸರಿನಡಿ ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮ

ಸಂಜೆ 6.45ರಿಂದ 10.30: ಅರ್ಜುನ್‌ ಜನ್ಯ ಮತ್ತು ತಂಡದಿಂದ ಸಂಗೀತ ರಸಸಂಜೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !