ಮಡಿಕೇರಿ ದಸರಾಕ್ಕೂ ಚಾಲನೆ

7
ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವ ಆರಂಭ

ಮಡಿಕೇರಿ ದಸರಾಕ್ಕೂ ಚಾಲನೆ

Published:
Updated:
Deccan Herald

ಮಡಿಕೇರಿ: ಪ್ರಸಿದ್ಧ ಮಡಿಕೇರಿ ದಸರಾಕ್ಕೆ ಬುಧವಾರ ಸಂಜೆ ಚಾಲನೆ ದೊರೆಯಿತು.

ಮಹದೇವಪೇಟೆಯ ಪಂ‍ಪಿನಕೆರೆಯ ಬಳಿ ನಾಲ್ಕು ಶಕ್ತಿ ದೇವತೆಗಳಾದ ಕಂಚಿಕಾಮಾಕ್ಷಿಯಮ್ಮ, ಕೋಟೆ ಮಾರಿಯಮ್ಮ, ಕುಂದೂರು ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮನ ಕರಗಕ್ಕೆ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಮಹೋತ್ಸವವು ವಿಧ್ಯುಕ್ತವಾಗಿ ಆರಂಭಗೊಂಡಿತು.

ಜನೋತ್ಸವದ ಹೆಸರಿನಲ್ಲಿ ಬಹಳ ವರ್ಷಗಳಿಂದ ನಡೆಯುತ್ತಿದ್ದ ದಸರಾವು 9 ದಿನಗಳು ರಂಗು ಪಡೆದುಕೊಳ್ಳುತ್ತಿತ್ತು. ಆದರೆ, ಈ ಬಾರಿ ಮಡಿಕೇರಿ ದಸರಾಕ್ಕೆ ಮಂಕು ಕವಿದಿದೆ. ಭೂಕುಸಿತದ ಬಳಿಕ ಜಿಲ್ಲೆಯತ್ತ ಬರುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗಿದೆ.

‘ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೊಡಗಿನಲ್ಲಿ ದಸರಾ ಸಂಭ್ರಮಿಸುವ ಮನಸ್ಸು ಯಾರಲ್ಲೂ ಇಲ್ಲ. ಜಿಲ್ಲೆಯಲ್ಲಿ ಜನರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಮೊದಲು ಸ್ಪಂದಿಸಬೇಕು. ವಿಜಯದಶಮಿ ದಿವಸ ನಡೆಯುವ ಶೋಭಾಯಾತ್ರೆ ಹೊರತುಪಡಿಸಿ ಉಳಿದ ಎಲ್ಲ ಕಾರ್ಯಕ್ರಮಗಳು ಸರಳವಾಗಿ ನಡೆಸಲು ನಿರ್ಧರಿಸಲಾಗಿದೆ’ ಎಂದು ದಸರಾ ಸಮಿತಿ ಸದಸ್ಯರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !