ಮಂಗಳೂರು ದಸರಾ ಉತ್ಸವಕ್ಕೆ ಚಾಲನೆ

7

ಮಂಗಳೂರು ದಸರಾ ಉತ್ಸವಕ್ಕೆ ಚಾಲನೆ

Published:
Updated:

ಮಂಗಳೂರು: ಇಲ್ಲಿನ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಬುಧವಾರ ಬೆಳಿಗ್ಗೆ 11.30ಕ್ಕೆ ಸರಿಯಾಗಿ ಶಾರದೆ ಮತ್ತು ನವ ದುರ್ಗೆಯರ ವಿಗ್ರಹಗಳ ಪ್ರತಿಷ್ಠಾಪನೆಯೊಂದಿಗೆ ಮಂಗಳೂರು ದಸರಾ-2018ಕ್ಕೆ ಚಾಲನೆ ದೊರೆಯಿತು.

ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಸದಸ್ಯರ ನೇತೃತ್ವದಲ್ಲಿ ಅದ್ದೂರಿ ಮೆರವಣಿಗೆಯಲ್ಲಿ ದೇವಿಯರ ವಿಗ್ರಹಗಳನ್ನು ತರಲಾಯಿತು. ಹುಲಿ ಕುಣಿತ, ಚಂಡೆ , ಮದ್ದಳೆ, ವಾದ್ಯ ಘೋಷಣೆಗಳೊಂದಿಗೆ ಸಂಭ್ರಮದಲ್ಲಿ ದಸರಾ ಉತ್ಸವವನ್ನು ಆರಂಭಿಸಲಾಯಿತು.

ಇಲ್ಲಿ ಹತ್ತು ದಿನಗಳ ಕಾಲ ಸಂಭ್ರಮದಿಂದ ದಸರಾ ಉತ್ಸವ ಆಚರಿಸಲಾಗುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಅಧಿಕೃತವಾಗಿ ಮಂಗಳೂರು ದಸರಾ ಉದ್ಘಾಟಿಸುವರು.

ವಿಜಯ ದಶಮಿಯ ದಿನ ಇಡೀ ರಾತ್ರಿ ಮಂಗಳೂರು ನಗರದ ವಿವಿಧೆಡೆ ವೈಭವದ ಮೆರವಣಿಗೆ ನಡೆಸಿ ಮರುದಿನ ಬೆಳಿಗ್ಗೆ ಶಾರದೆ ಮತ್ತು ನವ ದುರ್ಗೆಯರ ವಿಗ್ರಹಗಳನ್ನು ದೇವಾಲಯದ ಆವರಣದಲ್ಲಿರುವ ಕಲ್ಯಾಣಿಯಲ್ಲಿ ವಿಸರ್ಜಿಸುವುದರೊಂದಿಗೆ ಉತ್ಸವಕ್ಕೆ ತೆರೆ ಬೀಳಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !