ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಮನೆಯಿಂದ ಹೊರಟ ಜಂಬೂ ಸವಾರಿಗೆ ಸಿಎಂ ಪುಷ್ಪಾರ್ಚನೆ, ಅರ್ಜುನನ ಗಾಂಭೀರ್ಯದ ಹೆಜ್ಜೆ

Last Updated 19 ಅಕ್ಟೋಬರ್ 2018, 11:27 IST
ಅಕ್ಷರ ಗಾತ್ರ

ಮೈಸೂರು:ವಿಶ್ವವಿಖ್ಯಾತ ಮೈಸೂರು ದಸರೆಯ ಜಂಬೂ ಸವಾರಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಅರಮನೆ ಆರವಣದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಮಧ್ಯಾಹ್ನ 4.15ಕ್ಕೆ ಅಂಬಾರಿ ಹೊತ್ತ ಅರ್ಜುನಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಹೊರ ಬಂದ. ವೇದಿಕೆ ಮೇಲಿದ್ದ ಸಿಎಂ ಹಾಗೂ ಇತರ ಗಣ್ಯರು ಅಂಬಾರಿಯಲ್ಲಿ ಆಲಂಕೃತ ಚಾಮುಂಡೇಶ್ವರಿಗೆ ಪುಷ್ಟ ಸಮರ್ಪಿಸಿದರು.

750 ಕೆ.ಜಿ ತೂಕದ ಚಿನ್ನದಅಂಬಾರಿ ಹೊತ್ತ ಅರ್ಜುನ ಅರಮನೆ ಆವರಣದಿಂದ ಹೊರ ಬರುತ್ತಿದ್ದಂತೆ ನೆರೆದಿದ್ದ ಸಹಸ್ರಾರು ಜನ ಹರ್ಷೋದ್ಘಾರ ವ್ಯಕ್ತಪಡಿಸುವ ಮೂಲಕ ಸ್ವಾಗತಿಸಿದರು. ಅರಮನೆ ಆವರಣದಿಂದ ಹೊರ ಬಂದ ಜಂಬೂ ಸವಾರಿ ಬನ್ನಿಮಂಟಪದ ಕಡೆ ಸಾಗುತ್ತಿದೆ. ಸಂಜೆ ವೇಳೆಗೆ ಮೆರವಣಿಗೆ ಬನ್ನಿಮಂಟಪದಲ್ಲಿ ಕೊನೆಗೊಳ್ಳಲಿದೆ.

ಮುಂದೆ ಸ್ತಬ್ಧ ಚಿತ್ರಗಳು ಸಾಗುತ್ತಿವೆ. ಅದರ ಮಧ್ಯೆ ಕಲಾ ತಂಡಗಳು ಹಿಂದೆ ಅಶ್ವಪಡೆ, ಪೊಲೀಸ್‌ ಕವಾಯತು ತಂಡ ಸಾಗುತ್ತಿವೆ. ಮೆರವಣಿಗೆ ರಂಗು ಪಡೆದಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ದಸರಾ ಸಂಭ್ರಮವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ಅಂಬಾರಿಯಲ್ಲಿ ಚಾಮುಂಡೇಶ್ವರಿ
ಅಂಬಾರಿಯಲ್ಲಿ ಚಾಮುಂಡೇಶ್ವರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT