'ಮಹಾನ್‌ ಪುರುಷರು ನುಡಿದಂತೆ ನಡೆದರು'

7

'ಮಹಾನ್‌ ಪುರುಷರು ನುಡಿದಂತೆ ನಡೆದರು'

Published:
Updated:
Prajavani

ವಿಜಯಪುರ: ’ಯಾರೊಬ್ಬರ ಕುಲವನ್ನು ಪ್ರಶ್ನಿಸದೇ, ಎಲ್ಲರನ್ನು ನಮ್ಮ ಮನೆಯ ಮಕ್ಕಳೆಂದಾಗ ಜೀವನದಲ್ಲಿ ಸಾರ್ಥಕತೆಯ ಭಾವ ಮೂಡುವುದು’ ಎಂದು ಉಪನ್ಯಾಸಕ ಬಸವರಾಜ ಕುಂಬಾರ ಅಭಿಪ್ರಾಯಪಟ್ಟರು.

ನಗರದ ದರ್ಗಾ ರಸ್ತೆಯಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಬಂಧಿಗಳ ಮನ ಪರಿವರ್ತನಾ ನಿಮಿತ್ತ ದತ್ತಿಗಳ ಸ್ಮರಣಾರ್ಥ ಹಮ್ಮಿಕೊಂಡಿದ್ದ ವಿಶೇಷ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸೂಫಿ ಸಂತರ ಹಾಗೂ ಶರಣರ ನುಡಿಗಳಲ್ಲಿ ಮನಪರಿವರ್ತನೆಯ ಹಾದಿ ವಿಷಯ ಕುರಿತು ಮಾತನಾಡಿದರು.

’ದೇವರು ನಮ್ಮೊಳಗಿದ್ದಾನೆ. ಹೀಗಾಗಿ ಸತ್ಯ, ಶುದ್ಧ ಕಾಯಕದಿಂದ ದೇವರಂತಾಗಬೇಕು. ಸೂಫಿಗಳ, ಸಂತರ, ಶರಣರ ನಡೆ ನುಡಿಗಳು ಒಂದೇ ಆಗಿದ್ದವು. ತಮ್ಮ ಜೀವನದುದ್ದಕ್ಕೂ ನುಡಿದಂತೆ, ನಡೆದುಕೊಂಡಿದ್ದಾರೆ. ಸಿದ್ಧಗಂಗಾ ಶ್ರೀಗಳು, ಸಿದ್ಧೇಶ್ವರ ಶ್ರೀಗಳು ಇದಕ್ಕೆ ಜೀವಂತ ಸಾಕ್ಷಿಯಾಗಿದ್ದಾರೆ’ ಎಂದರು.

ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ’ಇಲ್ಲಿನ ಬಂಧಿಗಳು ಆಕಸ್ಮಿಕವಾಗಿ ಅಪರಾಧಿಗಳಾಗಿರಬಹುದು. ಆದರ್ಶರಾಗಬೇಕಾದರೆ ಮೊದಲು ನಿಮ್ಮ ಬದುಕಿನಲ್ಲಿ ಮಹಾತ್ಮರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದ ಅವರು, ಬಂಧಿಗಳ ಮನಪರಿವರ್ತನೆಗಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತೇವೆ’ ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ತಾಲ್ಲೂಕು ಘಟಕದ ಅಧ್ಯಕ್ಷ ಪ್ರೊ.ಯು.ಎನ್.ಕುಂಟೋಜಿ ಮಾತನಾಡಿದರು. ಕಾರಾಗೃಹದ ಜೈಲರ್‌ಗಳಾದ ಅಂಬರೀಶ ಪೂಜಾರಿ, ಎಸ್.ಡಿ.ಸೋದಗಾರ, ಪ್ರಧಾನ ವೀಕ್ಷಕರಾದ ಎ.ಎನ್.ವರ್ಣೇಕರ, ಎ.ಎಂ.ಹೊನವಾಡ, ಉಪನ್ಯಾಸಕರಾದ ರಾಜೇಂದ್ರಕುಮಾರ ಬಿರಾದಾರ, ಶರಣಗೌಡ ಪಾಟೀಲ, ಗಾಯಕ ಸೋಮಶೇಖರ ಕುರ್ಲೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !