ಭಾನುವಾರ, ನವೆಂಬರ್ 17, 2019
21 °C
‘ಫಾರ್‌ ದ ರೆಕಾರ್ಡ್‌’ ಕೃತಿಯಲ್ಲಿ ಬ್ರಿಟನ್‌ ಮಾಜಿ ಪ್ರಧಾನಿ ಡೇವಿಡ್‌ ಕ್ಯಾಮರೂನ್ ಉಲ್ಲೇಖ

ಪಾಕ್‌ ವಿರುದ್ಧ ಸೇನೆ ಕಾರ್ಯಾಚರಣೆಗೆ ಮುಂದಾಗಿದ್ದ ಮನಮೋಹನ್‌ ಸಿಂಗ್‌

Published:
Updated:

ಲಂಡನ್‌: ‘ಮುಂಬೈ ಮಾದರಿಯ ಭಯೋತ್ಪಾದಕ ದಾಳಿ ಮತ್ತೊಮ್ಮೆ ನಡೆದರೆ ಪಾಕಿಸ್ತಾನದ ವಿರುದ್ಧ ಭಾರತ ಸೇನಾ ಕಾರ್ಯಾಚರಣೆ ಕೈಗೊಳ್ಳಲಿದೆ’ ಎಂದು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ ತಮಗೆ ತಿಳಿಸಿದ್ದರು’ ಎಂದು ಬ್ರಿಟನ್‌ ಮಾಜಿ ಪ್ರಧಾನಿ ಡೇವಿಡ್‌ ಕ್ಯಾಮರೂನ್ ಹೇಳಿದ್ದಾರೆ.

ತಮ್ಮ ವೈಯಕ್ತಿಕ, ವೃತ್ತಿ ಮತ್ತು ಆಡಳಿತದ ವಿವಿಧ ಅನುಭವಗಳನ್ನು ಒಳಗೊಂಡ ‘ಫಾರ್‌ ದ ರೆಕಾರ್ಡ್‌’ ಕೃತಿಯಲ್ಲಿ 52 ವರ್ಷ ವಯಸ್ಸಿನ ಕ್ಯಾಮರೂನ್ ಅವರು ಈ ಸಂಗತಿ ದಾಖಲಿಸಿದ್ದಾರೆ.

ಮುಖ್ಯವಾಗಿ 2010ರಿಂದ 2016 ರವರೆಗಿನ ಸಂಗತಿಗಳಿಗೆ ಸಂಬಂಧಿಸಿದ ಅಂಶಗಳನ್ನು ಈ ಕೃತಿ ಒಳಗೊಂಡಿದೆ. ಈ ಅವಧಿಯಲ್ಲಿ ಕ್ಯಾಮರೂನ್‌ ಅವರು ಮನಮೋಹನ್‌ ಸಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ಇಬ್ಬರ ಜತೆಗೂ ಕಾರ್ಯನಿರ್ವಹಿಸಿದ್ದಾರೆ. ಭಾರತ ಭೇಟಿಯ ಹಲವು ಸಂದರ್ಭಗಳನ್ನು ಅವರು ದಾಖಲಿಸಿದ್ದಾರೆ.

ಪ್ರತಿಕ್ರಿಯಿಸಿ (+)