ಬಾವಿಯಲ್ಲಿ ಮುಳುಗಿ ಎನ್‌ಟಿಪಿಸಿ ಕಾರ್ಮಿಕ ಸಾವು

ಮಂಗಳವಾರ, ಏಪ್ರಿಲ್ 23, 2019
33 °C

ಬಾವಿಯಲ್ಲಿ ಮುಳುಗಿ ಎನ್‌ಟಿಪಿಸಿ ಕಾರ್ಮಿಕ ಸಾವು

Published:
Updated:
Prajavani

ಕೋಲಾರ: ಕೂಡಗಿ ಉಷ್ಣ ವಿದ್ಯುತ್‌ ಸ್ಥಾವರ ಘಟಕಕ್ಕೆ ನೀರು ಹರಿಸಲು ಮಸೂತಿ ಕೆರೆಯ ದಡದಲ್ಲಿ ನಿರ್ಮಿಸಲಾದ ಕೃತಕ ಬಾವಿಯಲ್ಲಿ ಕಾರ್ಮಿಕನೊಬ್ಬ ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.

ಬಸವನ ಬಾಗೇವಾಡಿ ತಾಲ್ಲೂಕಿನ ಟಕ್ಕಳಕಿ ಗ್ರಾಮದ ಯುವಕ ಬಸೀರ್‌ಅಹ್ಮದ್ ರಾಜೇಸಾಬ್ ಅಗಸಿಮನಿ (36) ಮೃತಪಟ್ಟ ಕಾರ್ಮಿಕ. ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬಾವಿ ಬಳಿ ಪೈಪ್‌ ತರಲು ತೆರಳಿದ ಸಂದರ್ಭ ಕಾಲುಜಾರಿ ಬಾವಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ.

25 ಗಂಟೆ ಕಾರ್ಯಾಚರಣೆ

ಕಾರ್ಮಿಕ ಬಾವಿಯಲ್ಲಿ ಬಿದ್ದ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಬಸವನಬಾಗೇವಾಡಿ ಅಗ್ನಿಶಾಮಕ ದಳ, ಸಿಐಎಸ್‌ಎಫ್‌ ಅಧಿಕಾರಿಗಳು ಅಧಿಕಾರಿಗಳು, ಎನ್‌ಟಿಪಿಸಿ ಕಾರ್ಮಿಕರು ಎರಡು ಕ್ರೇನ್‌, ಎರಡು ನೀರೆತ್ತುವ ಮೋಟರ್‌ ಪಂಪುಗಳಿಂದ ಭಾನುವಾರ ಸಂಜೆ 5 ರವರೆಗೆ ಸತತವಾಗಿ 25 ಗಂಟೆ ಶೋಧ ನಡೆಸಿದರೂ ಶವ ಪತ್ತೆಯಾಗಲಿಲ್ಲ. ಬೆಳಗಾವಿಯಿಂದ ಆಗಮಿಸಿದ ನೀರಲ್ಲಿ ಮುಳುಗುವ ಪರಿಣೀತರ ತಂಡ ರಾತ್ರಿ 8ಕ್ಕೆ ಶವ ತೆಗೆಯುವಲ್ಲಿ ಯಶಸ್ವಿಯಾಯಿತು. ಈ ಕುರಿತು ಕೂಡಗಿ ಎನ್‌ಟಿಪಿಸಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿವೈಎಸ್‌ಪಿ ಮಹೇಶ್ವರಗೌಡ, ಸಿಪಿಐ ಮಹಾದೇವ ಶಿರಹಟ್ಟಿ, ಕೂಡಗಿ ಠಾಣೆ, ಬಸವನಬಾಗೇವಾಡಿ ಠಾಣೆಯ ಪಿಎಸ್‌ಐ, ಸಿಐಎಸ್ಎಫ್ ಅಧಿಕಾರಿಗಳು, ಸಿಬ್ಬಂದಿ, ಎನ್‌ಟಿಪಿಸಿ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !