ಸಾಲ್ಟ್ ಲ್ಯಾಂಪ್‌ನೊಂದಿಗೆ ದೀಪಾವಳಿ

7

ಸಾಲ್ಟ್ ಲ್ಯಾಂಪ್‌ನೊಂದಿಗೆ ದೀಪಾವಳಿ

Published:
Updated:
Deccan Herald

ದೀಪಗಳ ಹಬ್ಬವಾದ ದೀಪಾವಳಿ ಆಚರಣೆಗೆ ಹಲವು ಬಗೆಯ ದೀಪಗಳು ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮಣ್ಣಿನ ದೀಪಗಳು, ಗಾಜಿನ ದೀಪಗಳು, ಟೆರ್‍ರಕೋಟಾ ದೀಪಗಳು, ಮರ, ಕಲ್ಲು, ವಿವಿಧ ಲೋಹಗಳಲ್ಲಿ ತಯಾರಿಸಿದ ದೀಪಗಳು, ವಿದ್ಯುತ್‌ ದೀಪಗಳು ಸೇರಿದಂತೆ ಹಲವು ಬಗೆಯ ದೀಪಗಳು ಆಕರ್ಷಣೆ ಹೆಚ್ಚಿಸಿವೆ. ಇವುಗಳ ಜತೆಗೆ ‘ಹಿಮಾಲಯನ್‌ ಸಾಲ್ಟ್‌ ಲ್ಯಾಂಪ್‌’ಗಳು ಕೂಡ ಜನರನ್ನು ಸೆಳೆಯುತ್ತಿವೆ.

ನೈಸರ್ಗಿಕ ಗುಲಾಬಿ ಹೊಳಪನ್ನು ಹೊಂದಿರುವ ‘ಹಿಮಾಲಯನ್ ಸಾಲ್ಟ್ ಲ್ಯಾಂಪ್‌’ಗಳು ನಗರದ ಎಚ್‌ಎಸ್‌ಆರ್‌ ಬಡಾವಣೆಯ ‘ಸಾಲ್ಟ್‌ವರ್ಲ್ಡ್‌’ನಲ್ಲಿ ಲಭ್ಯವಿವೆ.

ನಮ್ಮ ಪೂರ್ವಿಕರಿಂದ ಈಗಿನವರೆಗೆ ‘ನೆಗಿಟಿವ್‌’ ಶಕ್ತಿಗಳನ್ನು ಹೊರಹಾಕಲು ದೃಷ್ಟಿ ತೆಗೆಯುವ ಸಂಪ್ರದಾಯ ನಡೆದುಕೊಂಡು ಬಂದಿದೆ. ದೃಷ್ಟಿ ತೆಗೆಯುವುದಕ್ಕೆ ಪ್ರಮುಖವಾಗಿ ಉಪ್ಪನ್ನು ಬಳಸಲಾಗುತ್ತದೆ. ‘ನೆಗಿಟಿವ್‌’ ಅಂಶಗಳನ್ನು ತೆಗೆದುಹಾಕುವುದರ ಜತೆಗೆ ‘ಪಾಸಿಟಿವ್‌’ ಶಕ್ತಿಯನ್ನು ತುಂಬುತ್ತದೆ ಎಂಬುದು ಹಿಂದಿನಿಂದಲೂ ಇರುವ ನಂಬಿಕೆ.

ಹಿಮಾಲಯನ್‌ ಸಾಲ್ಟ್‌ ‘ರಾಕ್‌ ಸಾಲ್ಟ್‌’ ಆಗಿದ್ದು, ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ಹೆಚ್ಚಾಗಿ ದೊರೆಯುತ್ತದೆ. ಅಲ್ಲಿಂದ ಭಾರತಕ್ಕೆ ಇದನ್ನು ತರಲಾಗುತ್ತದೆ. ಅದನ್ನು ಬಳಸಿ ದೀಪಗಳನ್ನು ದೇಶದ ವಿವಿಧೆಡೆ ತಯಾರಿಸಲಾಗುತ್ತಿದೆ.

ಈ ನೈಸರ್ಗಿಕ ಹಿಮಾಲಯನ್ ಉಪ್ಪಿನ ದೀಪಗಳು ತೇವಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಈ ದೀಪಗಳು ಮನೆಯೊಳಗಿನ ಗಾಳಿಯಲ್ಲಿರುವ ಬ್ಯಾಕ್ಟೀರಿಯಾ, ಅಲರ್ಜಿಕಾರಕ ಕಣಗಳನ್ನು ಹೀರಿಕೊಂಡು ಮಾಲಿನ್ಯವನ್ನು ಕಡಿಮೆ ಮಾಡುತ್ತವೆ. ಅಲ್ಲದೆ ಈ ದೀಪಗಳು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಸಾಧನಗಳಿಂದ ಹೊರಸೂಸುವ ಹಾನಿಕಾರಕ ಧನಾತ್ಮಕ ಅಯಾನುಗಳನ್ನು ಸಮತೋಲನಗೊಳಿಸುತ್ತವೆ ಎಂದು ಹೇಳುತ್ತಾರೆ ಸಾಲ್ಟ್‌ವರ್ಲ್ಡ್‌ನ ಮಾಲೀಕರಾದ ದೀಪ್ತಿ ಬಾಬು.

ಈ ದೀಪದ ಹೊಳಪು ವ್ಯಕ್ತಿಯ ಮೇಲೆ ಹಿತವಾದ ಪರಿಣಾಮ ಬೀರುತ್ತದೆ. ಇದನ್ನು ಕೋಣೆಯಲ್ಲಿ ಇರಿಸಿದಾಗ ವ್ಯಕ್ತಿಯ ಮನಸ್ಥಿತಿ ಸುಧಾರಿಸುತ್ತದೆ ಮತ್ತು ನಿದ್ರೆಯನ್ನು ಉತ್ತೇಜಿಸುತ್ತದೆ ಎನ್ನುತ್ತಾರೆ ಅವರು. ಹಿಮಾಲಯನ್‌ ಸಾಲ್ಟ್‌ ಲ್ಯಾಂಪ್‌ನ ಬೆಲೆ ₹1,800ರಿಂದ ಆರಂಭವಾಗುತ್ತದೆ.

ಮಾಹಿತಿಗೆ: 9880103741, 9986388677

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !