ಎಸ್‌ಸಿ, ಎಸ್‌ಟಿ ನೌಕರರಿಂದ ಪ್ರತಿಭಟನೆ

7
ರಾಜ್ಯ ಸರ್ಕಾರವು 2017ರಲ್ಲಿ ರೂಪಿಸಿರುವ ಕಾಯ್ದೆ ಜಾರಿಗೆ ಆಗ್ರಹ

ಎಸ್‌ಸಿ, ಎಸ್‌ಟಿ ನೌಕರರಿಂದ ಪ್ರತಿಭಟನೆ

Published:
Updated:
ಕಾಯ್ದೆ ಜಾರಿಗೆ ಆಗ್ರಹಿಸಿ ಪ್ರತಿಭಟನಾಕಾರರು ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು

ಚಾಮರಾಜನಗರ: ಮೀಸಲಾತಿ ಆಧಾರದ ಮೇಲೆ ಬಡ್ತಿ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಸರ್ಕಾರಿ ನೌಕರರಿಗೆ ಜ್ಯೇಷ್ಠತೆಯನ್ನು ವಿಸ್ತರಿಸುವ ಸಂಬಂಧ ರಾಜ್ಯ ಸರ್ಕಾರ 2017ರಲ್ಲಿ ರೂಪಿಸಿರುವ ಕಾಯ್ದೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿಯ ಪದಾಧಿಕಾರಿಗಳು ಇಲ್ಲಿನ ಜಿಲ್ಲಾಡಳಿತ ಭವನದ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು. 

ಬಿ.ಕೆ. ಪವಿತ್ರ ಪ್ರಕರಣದಲ್ಲಿ ನ್ಯಾಯಾಲಯ ಕೋರಿದ ಮಾಹಿತಿಯನ್ನು ರಾಜ್ಯ ಸರ್ಕಾರ ನೀಡಿರಲಿಲ್ಲ. ಇದರಿಂದಾಗಿ ಎಸ್‌ಸಿ, ಎಸ್‌ಟಿ ಅಧಿಕಾರಿಗಳು ಸಿಲುಕಿದ್ದರು. ಅವರ ಹಿತ ಕಾಯಲು, ಅವರಿಗೆ ನೀಡಲಾಗಿರುವ ಬಡ್ತಿ ಮತ್ತು ಜ್ಯೇಷ್ಠತೆಯನ್ನು ರಕ್ಷಿಸಲು ರಾಜ್ಯ ಸರ್ಕಾರ ರೂಪಿಸಿದ್ದ ಮಸೂದೆಗೆ ರಾಷ್ಟ್ರಪತಿ ಅವರು ಜೂನ್‌ 18ರಂದು ಸಹಿ ಹಾಕಿದ್ದಾರೆ. ಸರ್ಕಾರವು ಜೂನ್‌ 23ರಂದು ಈ ಸಂಬಂಧ ಗೆಜೆಟ್‌ ಅಧಿಸೂಚನೆಯನ್ನೂ ಹೊರಡಿಸಿದೆ. ಆದರೆ, ಈಗಿನ ಮೈತ್ರಿ ಸರ್ಕಾರವು, ನ್ಯಾಯಾಲಯದಲ್ಲಿ ನಿಂದನಾ ಅರ್ಜಿ ಬಾಕಿ ಇದೆ ಎಂದು ನೆಪವೊಡ್ಡಿ ದಲಿತ ವರ್ಗದ ಅಧಿಕಾರಿ ಮತ್ತು ನೌಕರರ ಬಗ್ಗೆ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ವೈ.ಕೆ. ಮೋಳೆಯ ಉರಿಲಿಂಗಿಪೆದ್ದಿ ಮಠರ ಉಪ ಶಾಖೆಯ ಮಹದೇವ ಸ್ವಾಮೀಜಿ, ಸಮನ್ವಯ ಸಮಿತಿ ಗೌರವ ಅಧ್ಯಕ್ಷ ಸಿ. ಮಹದೇವು, ಅಧ್ಯಕ್ಷ ಎ.ಶಿವಣ್ಣ, ಉಪಾಧ್ಯಕ್ಷ ಹೇಮಂತ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಸಿ.ಕೆ. ರಾಮಸ್ವಾಮಿ, ಕಾರ್ಯದರ್ಶಿ ಎ.ಎನ್. ಗಜೇಂದ್ರ, ಕೋಶಾಧ್ಯಕ್ಷ ರಾಜು, ಸರ್ಕಾರಿ ನೌಕರರ ಸಂಘದ ಗೌರವ ಅಧ್ಯಕ್ಷ ರಂಗಸ್ವಾಮಿ, ಚಂದ್ರು, ಶ್ರೀನಿವಾಸ, ದಲಿತಪರ ಸಂಘಟನೆಗಳ ಮುಖಂಡರಾದ ಸಿ.ಎಂ. ಕೃಷ್ಣಮೂರ್ತಿ, ಆಲೂರು ನಾಗೇಂದ್ರ, ಕೆ.ಎಂ. ನಾಗರಾಜು, ಶಿವಣ್ಣ, ಪರ್ವತ್‌ರಾಜ್, ಸಿದ್ದರಾಜು, ಪ್ರಕಾಶ್, ಬ್ಯಾಡಮೂಡ್ಲು ಬಸವಣ್ಣ, ಕಂದಹಳ್ಳಿ ನಾರಾಯಣ್, ಪಿ.ಸಂಘಸೇನಾ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !