ಡ್ಯಾನ್ಸ್‌ ಕ್ಲಾಸ್‌ನಲ್ಲೇ ತರಬೇತುದಾರ ಆತ್ಮಹತ್ಯೆ

ಬುಧವಾರ, ಏಪ್ರಿಲ್ 24, 2019
30 °C
ಗಂಡನ ಕೊನೆಯ ಕರೆ ನಿರ್ಲಕ್ಷ್ಯಿಸಿದ ಪತ್ನಿ * ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಡ್ಯಾನ್ಸ್‌ ಕ್ಲಾಸ್‌ನಲ್ಲೇ ತರಬೇತುದಾರ ಆತ್ಮಹತ್ಯೆ

Published:
Updated:
Prajavani

ಬೆಂಗಳೂರು: ನೃತ್ಯ ತರಬೇತುದಾರ ಸಂದೀಪ್ (38) ಎಂಬುವರು ಗೆದ್ದಲಹಳ್ಳಿ ಬಸ್ ನಿಲ್ದಾಣದ ಬಳಿ ಇರುವ ತಮ್ಮ ‘ಎಸ್‌.ಕೆ.ರಿದಮ್ ಡ್ಯಾನ್ಸ್ ಕ್ಲಾಸ್‌’ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರು ಭಾನುವಾರ ರಾತ್ರಿಯೇ ನೇಣು ಹಾಕಿಕೊಂಡಿರಬಹುದು. ಮಂಗಳವಾರ ಸಂಜೆ ‌ವಿದ್ಯಾರ್ಥಿಗಳು ತರಬೇತಿ ಕೇಂದ್ರಕ್ಕೆ ಬಂದಾಗ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕೂಡಲೇ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

‘ನಾವು ಉಡುಪಿ ಜಿಲ್ಲೆಯವರಾಗಿದ್ದು, 10 ವರ್ಷಗಳ ಹಿಂದೆಯೇ ಕುಟುಂಬ ಸಮೇತ ಬೆಂಗಳೂರಿಗೆ ಬಂದೆವು. ಮೆಜೆಸ್ಟಿಕ್‌ನಲ್ಲಿ ಬಟ್ಟೆ ವ್ಯಾಪಾರ ಮಾಡುವ ನಾನು, ಪತ್ನಿ ಜತೆ ರಾಜಾಜಿನಗರ ಸಮೀಪದ ಶಿವನಗರದಲ್ಲಿ ನೆಲೆಸಿದ್ದೇನೆ. ಮಗ ಸಂದೀಪ್ ಡ್ಯಾನ್ಸ್ ಕ್ಲಾಸ್ ನಡೆಸಿಕೊಂಡು, ಅಲ್ಲೇ ಉಳಿದುಕೊಳ್ಳುತ್ತಿದ್ದ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಆತ, ಸ್ನೇಹಿತರ ಬಳಿ ಸಾಕಷ್ಟು ಸಾಲ ಮಾಡಿದ್ದ. ಅದನ್ನು ತೀರಿಸಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು’ ಎಂದು ಮೃತರ ತಂದೆ ಕೆ.ಎನ್.ಅಚ್ಯುತ್ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ಪತ್ನಿಗೆ ಕೊನೆಯ ಕರೆ: ಸಂದೀಪ್, ತಮ್ಮೂರಿನವರೇ ಆದ ಸೌಮ್ಯಾ ಅವರನ್ನು ವಿವಾಹವಾಗಿದ್ದರು. ದಂಪತಿಗೆ ನಾಲ್ಕು ವರ್ಷದ ಮಗನಿದ್ದಾನೆ. ಈ ನಡುವೆ ದಾಂಪತ್ಯದಲ್ಲಿ ಒಡಕು ಉಂಟಾಗಿ ನಾಲ್ಕು ತಿಂಗಳ ಹಿಂದೆ ಸೌಮ್ಯಾ ಮಗನನ್ನು ಕರೆದುಕೊಂಡು ತವರು ಮನೆ ಸೇರಿದ್ದರು.

ಭಾನುವಾರ ಸಂಜೆ ಪತ್ನಿಗೆ ಕರೆ ಮಾಡಿದ್ದ ಸಂದೀಪ್, ‘ಇದು ನನ್ನ ಕೊನೆಯ ಕರೆ. ಇನ್ನು ಮುಂದೆ ಯಾರ ಕೈಗೂ ಸಿಗುವುದಿಲ್ಲ’ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದರು. ಪತಿ ಹೆದರಿಸಲು ಹಾಗೆ ಹೇಳುತ್ತಿದ್ದಾರೆ ಎಂದು ಭಾವಿಸಿ ಸೌಮ್ಯಾ ಸುಮ್ಮನಾಗಿದ್ದರು. ಆ ನಂತರ ಸಂದೀಪ್ ಮೊಬೈಲ್ ಸ್ವಿಚ್ಡ್ ಆಫ್ ಮಾಡಿ ನೇಣಿಗೆ ಕೊರಳೊಡ್ಡಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !