ಗುರುವಾರ , ಡಿಸೆಂಬರ್ 12, 2019
26 °C

ಪುರುಷರ ‍ಫ್ಯಾಷನ್‌ನಲ್ಲಿ ಪುಷ್ಪಾಲಂಕಾರ!

ಮನೋವಿರಾಜ್‌ ಖೋಸ್ಲಾ Updated:

ಅಕ್ಷರ ಗಾತ್ರ : | |

ಈ ಚಳಿಗಾಲದಲ್ಲಿ ಪುರುಷರ ವಸ್ತ್ರ ಲೋಕ ಸ್ವಲ್ಪ ವಿಭಿನ್ನವಾಗಿ ಕಾಣಿಸಿಕೊಳ್ಳಲಿದೆ. ಎಂದಿನ ಬಣ್ಣ, ಆಕಾರ ಮತ್ತು ವಿನ್ಯಾಸಗಳನ್ನು ಬದಿಗಿಟ್ಟು ಹೊಸತನಕ್ಕೆ ತೆರೆದುಕೊಳ್ಳಲಿದೆ. ಜಗತ್ತಿನೆಲ್ಲೆಡೆಯ ವಸ್ತ್ರವಿನ್ಯಾಸಕರು ಹೊಸ ಹೊಸ ಪ್ರಯೋಗಗಳಲ್ಲಿ ತೊಡಗಿದ್ದಾರೆ.

ಬಣ್ಣ, ಕಸೂತಿಯಲ್ಲಿ ಹೂವು, ಪ್ರಕೃತಿಯ ವೈವಿಧ್ಯಮಯ ನೋಟವನ್ನು ರ‍್ಯಾಂಪ್‌ಗಳಲ್ಲಿ ಪರಿಚಯಿಸುವ ಪ್ರಯತ್ನದಲ್ಲಿದ್ದಾರೆ. ಈ ಬಾರಿಯ ಚಳಿಗಾಲಕ್ಕೆ ನಾನು ಮಾಡಲಿರುವ ಪ್ರಯೋಗಗಳೇನು ಗೊತ್ತೇ?

ಹೂವುಗಳೇ ಈ ಬಾರಿಯ ಥೀಮ್‌: ಬಂಧಿ, ಬಂದ್‌ಗಾಲಾ, ಸ್ಟೋಲ್‌, ಶೆರ್ವಾನಿ, ಲುಂಗಿ ಮತ್ತು ಲೆದರ್‌ ಜಾಕೆಟ್‌ಗಳು... ಸಮಕಾಲೀನ ಟ್ರೆಂಡ್‌ನಲ್ಲಿ ಮುಂಚೂಣಿಯಲ್ಲಿರುವ ಯಾವುದೇ ಉಡುಗೆ ತೊಡುಗೆಯಲ್ಲಿ ಹೂವಿನ ಚಿತ್ತಾರಗಳೇ ಮೇಲುಗೈ ಸಾಧಿಸಲಿವೆ. ಈ ಬಾರಿ ಕಪ್ಪು ಬಣ್ಣದ ಜಾಗದಲ್ಲಿ ಹಸಿರು ಬಣ್ಣ ಕಾಣಿಸಿಕೊಳ್ಳಲಿದೆ.

ಬ್ರೊಕೇಡ್‌ ವಿನ್ಯಾಸ: ಹೌದು, ಈ ಚಳಿಗಾಲದಲ್ಲಿ ಬ್ರೊಕೇಡ್‌ ವಿನ್ಯಾಸಕ್ಕೆ ಹೆಚ್ಚು ಮಹತ್ವ ಕೊಡಲಾಗುತ್ತದೆ. ಕಪ್ಪು ಮತ್ತು ಬಿಳಿ ಬಣ್ಣಗಳು ಬಂಗಾರದ ಬಣ್ಣದ ಕಾಂಬಿನೇಷನ್‌ನಲ್ಲಿ ಬ್ರೊಕೇಡ್‌ ವಿನ್ಯಾಸಗಳಲ್ಲಿ ಬಳಕೆಯಾಗಲಿದೆ. ಕಪ್ಪು–ಬಂಗಾರ, ಬಿಳಿ– ಬಂಗಾರ, ಮಿಶ್ರ ಬಣ್ಣ–ಬಂಗಾರ ಹೀಗೆ ಬಂಗಾರದ ಬಣ್ಣದ ದಾರಗಳು ಬ್ರೊಕೇಡ್‌ನಲ್ಲಿ ಮಿಂಚಲಿವೆ. ಜೊತೆಗೆ ಹೂವಿನ ಚಿತ್ತಾರ ಮತ್ತು ಪರ್ಷಿಯಾ ಮೂಲದ ‘ಶಿ’ ಅಕ್ಷರವನ್ನು ಹೋಲುವ ಪೈಸ್ಲಿ ವಿನ್ಯಾಸವೂ ನನಗೂ ನೆಚ್ಚಿನ ಆಯ್ಕೆಯಾಗಲಿದೆ. 

ಪ್ರಸ್ತುತ ಟ್ರೆಂಡ್‌ಗೆ ಅಪ್‌ಡೇಟ್‌ ಆಗಬೇಕಿದ್ದರೆ ನಿಮ್ಮ ವಾರ್ಡ್‌ರೋಬ್‌ನಲ್ಲಿ ಬ್ರೊಕೇಡ್‌ ಜಾಕೆಟ್‌ ಸೇರ್ಪಡೆಯಾಗಲೇಬೇಕು. ಹೊಚ್ಚ ಹೊಸ ‘ಬಾಂಬರ್‌ ಜಾಕೆಟ್‌’ನ್ನು ಸ್ಟೈಲಿಶ್‌ ಕುರ್ತಾ ಮತ್ತು ಜೋಧ್‌ಪುರಿ ಪ್ಯಾಂಟ್‌ ಜೊತೆಗೆ ಧರಿಸಿದರೆ ನಿಮ್ಮ ನೋಟ ಅತ್ಯಾಕರ್ಷಕವಾಗಿರುತ್ತದೆ. ಮಂಡಿ ಮೇಲಿನ ಅಥವಾ ಕೆಳಗಿನವರೆಗೂ ಇಳಿದ ಶೆರ್ವಾನಿ, ಬಂದ್‌ಗಾಲಾ, ಟುಸೆಡೊ ಜೊತೆ ಈ ಬ್ರೊಕೇಡ್‌ ಜಾಕೆಟ್‌ ಅಸಾಮಾನ್ಯವಾಗಿರುತ್ತದೆ.

ಪ್ರಿಂಟ್ಸ್‌: ವಸ್ತ್ರವಿನ್ಯಾಸ ಮತ್ತು ಫ್ಯಾಷನ್‌ ಜಗತ್ತಿನಲ್ಲಿ ನನ್ನದೇ ಆದ ಛಾಪು ಮೂಡಿಸಬೇಕು ಎಂದುಕೊಂಡಾಗಲೆಲ್ಲ ನಾನು ವಿವಿಧ ಬಗೆಯ ಪ್ರಿಂಟೆಡ್‌ ವಿನ್ಯಾಸಗಳ ಮೊರೆಹೋಗುತ್ತೇನೆ. ಇಲ್ಲಿಯೂ ಫ್ಲೋರಲ್‌ ವಿನ್ಯಾಸಗಳನ್ನು ಮರೆಯುವುದಿಲ್ಲ. ಈ ಬಾರಿಯಂತೂ ಕೆಲವು ಹೊಸ ಪ್ರಯೋಗಗಳನ್ನು ಮಾಡಿದ್ದೇನೆ. ಮೆಟಾಲಿಕ್‌ ಪ್ರಿಂಟ್‌, ಡಿಜಿಟಲ್‌, ಸ್ಕ್ರೀನ್‌ ಪ್ರಿಂಟ್‌ ಮತ್ತು ಫಾಯಿಲ್‌ ಪ್ರಿಂಟ್‌ಗಳು ಅದ್ಭುತವಾಗಿ ಮೂಡಿಬಂದಿವೆ.

ಬೇರೆ ಬೇರೆ ಬಣ್ಣ, ಪ್ರಿಂಟ್‌ ಮತ್ತು ಚಿತ್ರಗಳಿರುವ ಪ್ರಿಂಟೆಡ್‌ ಶೆರ್ವಾನಿ ಮತ್ತು ಬಂದ್‌ಗಾಲಾ ವಿನ್ಯಾಸಗಳು ಮನಸೂರೆಗೊಳ್ಳುವಂತಿವೆ. ಮತ್ತೊಂದು ಪ್ರಯೋಗವೆಂದರೆ ಪುರುಷರ ಶೂ ಮತ್ತು ಇತರ ಬಗೆಯ ಪಾದರಕ್ಷೆಗಳಿಗೆ ಪ್ರಿಂಟೆಡ್‌ ವಿನ್ಯಾಸಗಳನ್ನು ಅಳವಡಿಸಿರುವುದು. ವೆಲ್ವೆಟ್‌ ಫ್ಯಾಬ್ರಿಕ್‌ನಲ್ಲಿ ಬಂಗಾರದ ಬಣ್ಣದ ವಿನ್ಯಾಸಗಳಿರುವ ಶೂಗಳು ಮದುವೆಯಂತಹ ಮಹತ್ವದ ಸಮಾರಂಭಗಳು ಮತ್ತು ಪಾರ್ಟಿಗಳಿಗೆ ಹೇಳಿಮಾಡಿಸಿದಂತಿರುತ್ತವೆ. ‌ಗಮನಾರ್ಹ ಅಂಶವೆಂದರೆ ಈ ಶೂ ಅಥವಾ ಪಾದರಕ್ಷೆಗಳು ಜೀನ್ಸ್‌ ಪ್ಯಾಂಟ್‌ ಜೊತೆಗೂ ಚೆನ್ನಾಗಿ ಹೊಂದುತ್ತವೆ.

ಲೇಸರ್‌ ಕಟ್‌ ತಂತ್ರಗಳ ಬಳಕೆ: ಇದು ನನ್ನ ಸಾರ್ವಕಾಲಿಕ ಇಷ್ಟದ ವಿನ್ಯಾಸ. ಅಂದರೆ, ವಿವಿಧ ಫ್ಯಾಬ್ರಿಕ್‌ಗಳ ಮೇಲೆ ಲೇಸರ್‌ ಕಟ್‌ ಟೆಕ್ನಿಕ್‌ಗಳನ್ನು ವಿಭಿನ್ನ ಆಕಾರ ಮತ್ತು ವಿನ್ಯಾಸದಲ್ಲಿ ಬಳಸುವುದು ಯಾವತ್ತೂ ನನಗೆ ಇಷ್ಟ. ನೆರಿಗೆ, ಮಡಿಕೆಗಳಲ್ಲಿ ಈ ತಂತ್ರ ವಿಶಿಷ್ಟ ಸ್ಪರ್ಶ ನೀಡುತ್ತದೆ. ಜಾಕೆಟ್‌ ಮತ್ತು ಶರ್ಟ್‌ಗಳಿಗೆ ಇದು ಹೆಚ್ಚು ಹೊಂದುತ್ತದೆ.

ಶೂಗಳಲ್ಲಿ: ಪ್ರಿಂಟ್‌, ಸ್ಪೈಕ್‌, ಕಸೂತಿಯ ವಿನ್ಯಾಸಗಳು ಕ್ಲಾಸಿಕ್‌ ಲೆದರ್ ಮತ್ತು ಕ್ರಶ್ಡ್‌ ವೆಲ್ವೆಟ್‌ ಶೂಗಳಿಗೆ ವಿಭಿನ್ನ ನೋಟ ನೀಡುತ್ತವೆ. ಕ್ರಶ್ಡ್‌ ವೆಲ್ವೆಟ್‌ ಶೂಗಳು ಶೆರ್ವಾನಿಗೂ, ಜೀನ್ಸ್‌ ಉಡುಪಿಗೂ ಅತ್ಯುತ್ತಮವಾಗಿ ಹೊಂದುತ್ತದೆ.

ಪ್ರತಿಕ್ರಿಯಿಸಿ (+)