ಥಾಯ್ಲೆಂಡ್‌: ಗುಹೆಯಲ್ಲಿಸಿಲುಕಿದ ಫುಟ್‌ಬಾಲ್‌ ತಂಡ

7
ಶೋಧ ಕಾರ್ಯ ಚುರುಕು, ಬದುಕಿ ಬರಲೆಂದು ಪ್ರಾರ್ಥನೆ

ಥಾಯ್ಲೆಂಡ್‌: ಗುಹೆಯಲ್ಲಿಸಿಲುಕಿದ ಫುಟ್‌ಬಾಲ್‌ ತಂಡ

Published:
Updated:
ಗುಹೆಯ ಹೊರಗೆ ಸೇರಿದ್ದ ಪೋಷಕರು ಮತ್ತು ರಕ್ಷಣಾ ತಂಡ ಎಎಫ್‌ಪಿ ಚಿತ್ರ

ಮೆ ಸಾಯ್‌ (26) (ಎಎಫ್‌ಪಿ): ಉತ್ತರ ಥಾಯ್ಲೆಂಡ್‌ನ ಥಾಮ್ ಲುವಾಂಗ್ ಗುಹೆಯಲ್ಲಿ ಶನಿವಾರದಿಂದ ಸಿಲುಕಿರುವ ಫುಟ್‌ಬಾಲ್‌ ತಂಡವೊಂದರ 12 ಸದಸ್ಯರು ಮತ್ತು ತರಬೇತುದಾರ ಸುರಕ್ಷಿತವಾಗಿ ಬದುಕಿ ಬರಲಿ ಎಂದು ಅವರ ಪೋಷಕರು ಹಾಗೂ ನೂರಾರು ಸಂಬಂಧಿಕರು ಪ್ರಾರ್ಥನೆ ಸಲ್ಲಿಸುತ್ತಿ
ದ್ದಾರೆ. ಈ ಆಟಗಾರರೆಲ್ಲರೂ 11ರಿಂದ 16 ವರ್ಷದ ಒಳಗಿನವರು.

ಪ್ರಸಿದ್ಧ ಪ್ರವಾಸಿ ತಾಣವಾದ ಗುಹೆಯ ಒಳಗೆ ತಂಡ ಹೋಗಿದ್ದಾಗ, ಭಾರಿ ಮಳೆ ಸುರಿದಿದ್ದರಿಂದ ಪ್ರವೇಶದ್ವಾರದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದೆ. ಮ್ಯಾನ್ಮಾರ್‌ ಮತ್ತು ಲಾವೋಸ್‌ ಗಡಿಯ ಸಮೀಪದಲ್ಲಿರುವ ಗುಹೆಯ ಹೊರ
ಭಾಗದಲ್ಲಿ, ಸುರಿಯುತ್ತಿದ್ದ ಮಳೆಯ ನಡುವೆಯೇ ನೂರಾರು ಸಂಖ್ಯೆಯಲ್ಲಿ ಬಂಧುಬಾಂಧವರು ಜಮಾಯಿಸಿದ್ದರು.

ಹಲವಾರು ಕಿಲೊ ಮೀಟರ್‌ ಉದ್ದ ಇರುವ ಪ್ರವಾಹ ‍ಪೀಡಿತ ಗುಹೆಯಲ್ಲಿ ನೌಕಾಪಡೆಯ ಯೋಧರನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ. ಮುಳುಗುತಜ್ಞರು ಆಮ್ಲಜನಕದ ಟ್ಯಾಂಕ್‌ ಮತ್ತು ಆಹಾರ ಸಾಮಗ್ರಿಯೊಂದಿಗೆ ಮಂಗಳವಾರ ಮುಂಜಾನೆಯಿಂದ ಶೋಧ ಆರಂಭಿಸಿದ್ದಾರೆ. ಗುಹೆಯ ವೈಮಾನಿಕ ಚಿತ್ರಗಳನ್ನು ಸೆರೆಹಿಡಿಯಲು ತಂಡವನ್ನು ನಿಯೋಜಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !