ಧರ್ಮಸ್ಥಳಕ್ಕೆ 1 ಲಕ್ಷ ಲೀಟರ್‌ ನೀರು ರವಾನೆ

ಬುಧವಾರ, ಜೂನ್ 19, 2019
31 °C
ಧಾರ್ಮಿಕ ಕ್ಷೇತ್ರದ ನೀರಿನ ಅಭಾವ ನೀಗಿಸಲು ಪಾಲಿಕೆ ನೌಕರರ ನೆರವು

ಧರ್ಮಸ್ಥಳಕ್ಕೆ 1 ಲಕ್ಷ ಲೀಟರ್‌ ನೀರು ರವಾನೆ

Published:
Updated:
Prajavani

ಬೆಂಗಳೂರು: ಧರ್ಮಸ್ಥಳದಲ್ಲಿ ನೀರಿನ ಅಭಾವ ನೀಗಿಸುವ ಸಲುವಾಗಿ ಬಿಬಿಎಂಪಿಯ ನೌಕರರು ಹಾಗೂ ಅಧಿಕಾರಿಗಳು ಕೈಜೋಡಿಸಿದ್ದಾರೆ. ಶುದ್ಧೀಕರಿಸಿದ ನೀರು ತುಂಬಿರುವ ನೂರಾರು ಕ್ಯಾನ್‌ಗಳನ್ನು ಮಂಗಳವಾರ ರವಾನಿಸಿದ್ದಾರೆ. ಅದರಲ್ಲಿ 1 ಲಕ್ಷಕ್ಕೂ ಹೆಚ್ಚು ಲೀಟರ್‌ ನೀರು ಇತ್ತು.

ಈ ಧಾರ್ಮಿಕ ಕ್ಷೇತ್ರದಲ್ಲಿ ತಲೆದೋರಿರುವ ನೀರಿನ ಸಮಸ್ಯೆಯು ಮಾಧ್ಯಮಗಳಲ್ಲಿ ಬಿತ್ತರವಾದ ವರದಿಗಳ ಮಾಹಿತಿಯನ್ನು ಕೆಲವರು ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವಾಟ್ಸ್‌ ಆ್ಯಪ್‌ ಗುಂಪಿನಲ್ಲಿ ಹಂಚಿಕೊಂಡರು. ಕೈಲಾದಷ್ಟು ಸಹಾಯ ಮಾಡುವ ಬಗ್ಗೆ ಸಂಘದ ಸದಸ್ಯರೇ ಸೇರಿ ನಿರ್ಣಯ ಕೈಗೊಂಡರು.

‘ಅಧಿಕಾರಿಗಳು ಮತ್ತು ನೌಕರರು ಸ್ವ–ಇಚ್ಛೆಯಿಂದ ನೀರು ತುಂಬಿದ ಕ್ಯಾನ್‌ಗಳನ್ನು ಖರೀದಿಸಿ ಕೊಟ್ಟಿದ್ದಾರೆ. ಕೆಲವರು  5 ಕ್ಯಾನ್‌ಗಳವರೆಗೂ ನೀಡಿದ್ದಾರೆ. ಪಾಲಿಕೆಯ ನೌಕಕರ ಮಾನವೀಯ ಗುಣದಿಂದಾಗಿ  1 ಲಕ್ಷ ಲೀಟರ್‌ಗಿಂತಲೂ ಹೆಚ್ಚು ನೀರು ಮಂಗಳವಾರ ಧರ್ಮಸ್ಥಳಕ್ಕೆ ರವಾನೆಯಾಯಿತು’ ಎಂದು ಸಂಘದ ಅಧ್ಯಕ್ಷ ಎ.ಅಮೃತ್‌ ರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮೇಯರ್‌ ಗಂಗಾಬಿಕೆ, ‘ನೀರನ್ನು ರವಾನಿಸುತ್ತಿರುವುದು ಉತ್ತಮ ಕೆಲಸ. ಧರ್ಮಸ್ಥಳಕ್ಕೆ ಭೇಟಿ ನೀಡುವ ಭಕ್ತರಿಗೆ ಮತ್ತು ಅಡುಗೆಗೆ ಈ ನೀರು ಬಳಕೆಯಾಗಲಿದೆ’ ಎಂದು ತಿಳಿಸಿದರು.  

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !