ತೀರ್ಪಿಗೆ ತಲೆಬಾಗುತ್ತೇನೆ, ಪಕ್ಷ ಸಂಘಟನೆ ಮಾಡುತ್ತೇನೆ: ಪರಾಜಿತ ಧ್ರುವನಾರಾಯಣ

ಸೋಮವಾರ, ಜೂನ್ 17, 2019
28 °C
ಚಾಮರಾಜನಗರ

ತೀರ್ಪಿಗೆ ತಲೆಬಾಗುತ್ತೇನೆ, ಪಕ್ಷ ಸಂಘಟನೆ ಮಾಡುತ್ತೇನೆ: ಪರಾಜಿತ ಧ್ರುವನಾರಾಯಣ

Published:
Updated:
Prajavani

ಚಾಮರಾಜನಗರ: ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಧ್ರುವನಾರಾಯಣ ಅವರಿಗೆ ಈ ಲೋಕಸಭಾ ಚುನಾವಣೆಯಲ್ಲಿ ಅನಿರೀಕ್ಷಿತ ಸೋಲಾಗಿದೆ. ಕಾಂಗ್ರೆಸ್‌ ಪಕ್ಷದಲ್ಲಿ ತಮ್ಮ ಒಡನಾಡಿಯಾಗಿದ್ದ, ಈಗ ಬಿಜೆಪಿಯಲ್ಲಿರುವ ವಿ.ಶ್ರೀನಿವಾಸ ಪ್ರಸಾದ್‌ ಅವರ ಎದುರು 1,817 ಅಲ್ಪಮತಗಳ ಅಂತರದಲ್ಲಿ ಮಂಡಿಯೂರಿದ್ದಾರೆ. ಸೋಲಿನ ಬಗ್ಗೆ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

* ಈ ಅನಿರೀಕ್ಷಿತ ಸೋಲನ್ನು ಹೇಗೆ ವಿಶ್ಲೇಷಿಸುತ್ತೀರಿ?

: ಗೆಲ್ಲುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದೆ. ಆದರೆ, ಕಡಿಮೆ ಮತಗಳ ಅಂತರದಲ್ಲಿ ಸೋಲುಂಟಾಗಿದೆ. ರಾಜಕಾರಣದಲ್ಲಿ ಮತದಾರರ ತೀರ್ಪಿಗೆ ತಲೆ ಬಾಗಲೇಬೇಕು. ರಾಜಕೀಯ ಎಂದರೆ ಹಾಗೆಯೇ. ಒಂದೊಂದು ಬಾರಿ ಒಬ್ಬೊಬ್ಬರಿಗೆ ಅವಕಾಶ ಸಿಗುತ್ತದೆ.

* ನಿಮಗೆ ಯಾವ ಕ್ಷೇತ್ರಗಳಲ್ಲಿ ಮತಗಳ ಕೊರತೆ ಕಾಡಿತು?

ಉ: ಎಚ್‌.ಡಿ.ಕೋಟೆ, ವರುಣಾ, ತಿ.ನರಸೀಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಅಂತರದ ಮುನ್ನಡೆ ಬರಬಹುದು ಎಂದುಕೊಂಡಿದ್ದೆವು. ಸ್ವಲ್ಪ ಕಡಿಮೆ ಆಯಿತು. ಇನ್ನೂ ಹೆಚ್ಚು ಮುನ್ನಡೆ ಬಂದಿದ್ದರೆ ಚೆನ್ನಾಗಿರುತ್ತಿತ್ತು.

* ಕ್ಷೇತ್ರದಲ್ಲಿ ಮೈತ್ರಿ‌ಧರ್ಮ ಪಾಲನೆ ಆಗಿದೆ ಎಂದು ನಿಮಗೆ ಅನ್ನಿಸುತ್ತಿದೆಯೇ? 

ಉ: ಕೆಲವು ಕಡೆ ಆಗಿದೆ. ಬನ್ನೂರು ಸೇರಿದಂತೆ ಹಲವು ಕಡೆಗಳಲ್ಲಿ ಜೆಡಿಎಸ್‌ ಕಾರ್ಯಕರ್ತರು ಕೂಡ ನನ್ನನ್ನು ಬೆಂಬಲಿಸಿದ್ದಾರೆ. ಅದರ ಮುಖಂಡರು ಕೂಡ ಬೆಂಬಲ ವ್ಯಕ್ತಪಡಿಸಿದ್ದರು. ಕೆಲವು ಕಡೆಗಳಲ್ಲಿ ನಮ್ಮ ನಿರೀಕ್ಷೆಯಷ್ಟು ಪ್ರಮಾಣದ ಮತಗಳು ಬಿದ್ದಿಲ್ಲ. 

* ಪಕ್ಷದ ಒಳಗಡೆ ಏನಾದರೂ ಗೊಂದಲಗಳಿದ್ದವೇ?

ಉ: ಇಲ್ಲವೇ ಇಲ್ಲ. ಕ್ಷೇತ್ರವ್ಯಾಪ್ತಿಯ ಪಕ್ಷದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ನನ್ನ ಪರವಾಗಿ ಕೆಲಸ ಮಾಡಿದ್ದಾರೆ. 

* ಮುಂದಿನ ನಿಮ್ಮ ಯೋಜನೆಗಳೇನು?

ಉ: 15 ವರ್ಷಗಳಿಂದ ಜನಪ್ರತಿನಿಧಿಯಾಗಿದ್ದೆ. ಕ್ಷೇತ್ರಗಳ ಅಭಿವೃದ್ಧಿ ಕೆಲಸಗಳ ಜೊತೆ ಪಕ್ಷ ಸಂಘಟನೆಗೂ ಒತ್ತು ನೀಡಿದ್ದೆ. ಈಗ ನಾನು ಜನಪ್ರತಿನಿಧಿ ಅಲ್ಲ. ಪ‍ಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ. ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಕೆಲಸವನ್ನು ಮುಂದುವರಿಸುತ್ತೇನೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !