ಲಾಲ್‌ಬಾಗ್‌ಗೆ ಕಂಪು ಬೀರುವ ಸಸ್ಯಗಳು

ಶುಕ್ರವಾರ, ಏಪ್ರಿಲ್ 26, 2019
35 °C

ಲಾಲ್‌ಬಾಗ್‌ಗೆ ಕಂಪು ಬೀರುವ ಸಸ್ಯಗಳು

Published:
Updated:
Prajavani

ಬೆಂಗಳೂರು:  ಸಸ್ಯಕಾಶಿ ಲಾಲ್‌ಬಾಗ್‌ ನಲ್ಲಿ 1,300 ಸುಗಂಧ ಭರಿತ ಸಸ್ಯಗಳನ್ನು ಬೆಳೆಸಲು ತೋಟಗಾರಿಕಾ ಇಲಾಖೆ ಸಿದ್ಧತೆ ನಡೆಸಿದೆ.

2018ರ ನವೆಂಬರ್‌ನಲ್ಲಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಆಯೋಜಿಸಿದ್ದ ’ಜನಸ್ಪಂದನ‘ ಕಾರ್ಯಕ್ರಮದಲ್ಲಿ ಲಾಲ್‌ ಬಾಗ್‌ ತೋಟದಲ್ಲಿ ಮೆಟ್ರೊ ನಿಲ್ದಾಣದ ಹಿಂಭಾಗದ ಪ್ರದೇಶ ಕಳೆಯಿಂದ ತುಂಬಿರುವ ಬಗ್ಗೆ ಸಾರ್ವಜನಿಕರು ದನಿ ಎತ್ತಿದ್ದರು. ಬಳಿಕ ಎಚ್ಚೆತ್ತುಕೊಂಡಿದ್ದ  ತೋಟಗಾರಿಕಾ ಇಲಾಖೆ ಈ ಪ್ರದೇಶವನ್ನು ಸ್ವಚ್ಛಗೊಳಿಸಿದೆ. ವಿವಿಧ ಬಗೆಯ ಸುವಾಸನೆ ಭರಿತ  ಸಸ್ಯಗಳನ್ನು ಇಲ್ಲಿ ಬೆಳೆಸುವುದಕ್ಕೆ ಮುಂದಾಗಿದೆ.

‘ಇಲ್ಲಿ ವಾಯುವಿಹಾರ ಮಾರ್ಗ ನಿರ್ಮಿಸುತ್ತೇವೆ. ಅದರ ಇಕ್ಕೆಲಗಳಲ್ಲೂ ಸಸಿಗಳನ್ನು ನೆಡಲು ಈಗಾಗಲೇ ಗುಂಡಿ ತೆಗೆಯಲಾಗಿದೆ. ಮೇ ತಿಂಗಳ ಒಳಗೆ ಸುವಾಸನೆ ಭರಿತ ಸಸ್ಯಗಳು ಉದ್ಯಾನಕ್ಕೆ ಬರುವವರನ್ನು ಸ್ವಾಗತಿಸಲಿವೆ’ ಎಂದು ಲಾಲ್‌ಬಾಗ್‌ ಉದ್ಯಾನದ ಉಪನಿರ್ದೇಶಕ ಚಂದ್ರಶೇಖರ್‌.ಎಂ.ಆರ್ ತಿಳಿಸಿದರು.

‘ಇಲ್ಲಿ ಮರದ ಕೆಳಗಿನ ಜಾಗದಲ್ಲಿ ವಿವಿಧ ಬಣ್ಣಗಳ 5–6 ಜಾತಿಯ ಕಣಗಲೆ ಸಸ್ಯಗಳನ್ನು ನೆಡಲಾಗುವುದು. ಅದಲ್ಲದೇ ನೆರಳಿಗಾಗಿ ಕೆಲವು ಮರಗಳನ್ನು ಬೆಳೆಸಲಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !