ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಸುದ್ದಿಗಳು: ಲಂಕಾದಲ್ಲಿ ನಿಲ್ಲದ ದಾಳಿ, ನಿಖಿಲ್‌ಗೆ ಹಿನ್ನಡೆ, ಮತ್ತಷ್ಟು..

Last Updated 28 ಏಪ್ರಿಲ್ 2019, 4:16 IST
ಅಕ್ಷರ ಗಾತ್ರ

ಮಾರಿಕೊಂಡವರ ಕತೆ ಗೊತ್ತೆ? ನಿಖಿಲ್‌ ಗೆಲುವು ಕಷ್ಟ ಎಂದು ಸಿಎಂ ಆತಂಕ, ದಸರಾ ಆನೆ ಇನ್ನಿಲ್ಲ, ಡಿಕೆಶಿ ಆಸ್ತಿ ಜಪ್ತಿ, ಜಾತಿರಾಜಕಾರಣಕ್ಕೆ ಎಳೆಯಬೇಡಿ ಎಂದು ಮೋದಿ ಕೈ ಮುಗಿದದ್ದು ಯಾರಿಗೆ? ತಂಪೆರೆದು ಪ್ರಾಣ ಹೊತ್ತೊಯ್ದ ಮಳೆರಾಯ, ಗೆದ್ದು ಬೀಗಿದ ರಾಯಲ್ಸ್‌, ಬಿಬಿಎಂಪಿ ಆಸ್ಪತ್ರೆಗಳ ಅವ್ಯವಸ್ಥೆ, ಭಾರತ ಜೊತೆಗಿನ ಸಂಬಂಧವೇ ಪಾಕ್‌ಗೆ ಸಮಸ್ಯೆಯಂತೆ, ‘ಕೆಜಿಎಫ್‌’ ಗಡ್ಡಧಾರಿಗಳ ಜಾತ್ರೆ!

ಇವು ಈ ದಿನದ ಪ್ರಮುಖ ಸುದ್ದಿಗಳು. ಇವುಗಳ ಜೊತೆಗೆ ಸಂಪಾದಕೀಯ, ವಿಶ್ಲೇಷಣೆ, ಅಂಕಣಗಳನ್ನು ಓದಲು, ರಾಜಕೀಯ ಬೆಳವಣಿಗೆ, ಅಂತರರಾಷ್ಟ್ರೀಯ ವಿದ್ಯಮಾನಗಳ ಬಗ್ಗೆ ತಿಳಿಯಲು ಕೆಳಗಿನ ಲಿಂಕ್‌ಗಳನ್ನು ಕ್ಲಿಕ್ಕಿಸಿ.

ಮಾರುಕಟ್ಟೆ ಎಂಬ ನೇಣುಗಂಬ
ಅರಳಿ ಮರದ ಕೆಳಗೆ ಕೊಬ್ಬರಿಯ ಬೆಲೆ ನಿಗದಿಯಾಗುತ್ತದೆ. ಬೆಳೆಗಾರರು ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಕೆ.ಜಿ.ಗಟ್ಟಲೆ ರೇಷ್ಮೆಗೂಡುಗಳು ಮಂಗಮಾಯ. ದಲ್ಲಾಳಿಗಳಿಂದಾಗಿ ರೈತರ ಪಾಲಿಗೆ ಬ್ಯಾಡಗಿ ಮೆಣಸಿನಕಾಯಿ ಮತ್ತಷ್ಟು ಖಾರವಾಗಿದೆ!

ಅಂಬಾರಿ ಆನೆ ‘ದ್ರೋಣ’ ಇನ್ನಿಲ್ಲ
ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದ ಆನೆ ‘ದ್ರೋಣ’ನ ಸಾವಿಗೆ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಯಿತೇ ಎಂಬ ದೂರುಗಳು ಈಗ ಕೇಳಿಬರುತ್ತಿವೆ.

ಶ್ರೀಲಂಕಾದಲ್ಲಿ ನಿಲ್ಲದ ದಾಳಿ: 6 ಮಕ್ಕಳು ಸೇರಿ 16 ಸಾವು
ಕಲ್ಮುನೈ ಪಟ್ಟಣದಲ್ಲಿ ಶುಕ್ರವಾರ ರಾತ್ರಿ ಶ್ರೀಲಂಕಾದ ಭದ್ರತಾಪಡೆ ಹಾಗೂ ಉಗ್ರರ ಮಧ್ಯೆ ನಡೆದ ಗುಂಡಿನ ಚಕಮಕಿ ಮತ್ತು ಆನಂತರ ನಡೆದ ಸ್ಫೋಟದಲ್ಲಿ ಆರು ಮಕ್ಕಳೂ ಸೇರಿ ಒಟ್ಟು 16 ಮಂದಿ ಸಾವಿಗೀಡಾಗಿದ್ದಾರೆ.

ಡಿಕೆಶಿ 500 ಕೋಟಿ ಬೇನಾಮಿ ಆಸ್ತಿ ಜಪ್ತಿ
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅವರಿಗೆ ಸೇರಿದ ₹ 500 ಕೋಟಿ ಮೌಲ್ಯದ ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಜಪ್ತಿ ಮಾಡಿದೆ.

ನನ್ನನ್ನು ಜಾತಿ ರಾಜಕಾರಣಕ್ಕೆ ಎಳೆಯಬೇಡಿ
‘ಎಸ್‌ಪಿ ಮತ್ತು ಬಿಎಸ್‌ಪಿಗಳು ಜಾತಿ ರಾಜಕಾರಣ ಮಾಡುತ್ತಿವೆ. ಅಧಿಕಾರಕ್ಕೆ ಬಂದರೆ ಜನರ ಸಂಪತ್ತು ಕೊಳ್ಳೆ ಹೊಡೆಯಲಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ.

ರಾಜ್ಯದ ವಿವಿಧೆಡೆ ಮಳೆ: ಸಿಡಿಲಿಗೆ ರೈತ ಬಲಿ
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನ ನೇರಲಗ ಗ್ರಾಮದಲ್ಲಿ ಶನಿವಾರ ಸಂಜೆ ಸಿಡಿಲು ಬಡಿದು ರೈತ ನರಸಪ್ಪ ಜಯವಂತ ಕದಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ರಾಜಸ್ಥಾನ್ ರಾಯಲ್ಸ್‌ಗೆ ಜಯ
ರಾಜಸ್ಥಾನ್ ರಾಯಲ್ಸ್ ತಂಡದ ಬೌಲರ್‌ಗಳು ಶ್ರಮವು ವ್ಯರ್ಥವಾಗದಂತೆ ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತು ಸಂಜು ಸ್ಯಾಮ್ಸನ್ ನೋಡಿಕೊಂಡರು.

ಬತ್ತಿದ ಕೊಳವೆಬಾವಿ, ತಳ ಸೇರಿದ ಕೆರೆ, ಕಟ್ಟೆಗಳು
ಬಹುಗ್ರಾಮ ನೀರಾವರಿ ಯೋಜನೆಗಳು ಸಮರ್ಪಕವಾಗಿ ಜಾರಿಗೊಳ್ಳದ ಕಾರಣ ಹೇಮಾವತಿ ನದಿಯಂಚಿನ ಗ್ರಾಮಗಳು ಸೇರಿ ತಾಲ್ಲೂಕಿನ ಬಹುತೇಕ ಹಳ್ಳಿಗಳು ಕುಡಿಯುವ ನೀರಿಗಾಗಿ ಕೊಳವೆಬಾವಿಗಳನ್ನೇ ಅವಲಂಬಿಸಿವೆ

ಆಯುಕ್ತರೇ, ನೀವೂ ಇಲ್ಲಿ ಟ್ರೀಟ್‌ಮೆಂಟ್‌ ತಗೋತೀರಾ?
ಇಳಿವಯಸ್ಸಿನ ವೈದ್ಯರನ್ನು ಗುತ್ತಿಗೆ ಆಧಾರದ ಮೇಲೆ ತಂದು ಕೂರಿಸಿ, ನಿವೃತ್ತ ಸರ್ಜನ್‌ಗಳನ್ನು ಕರೆಸಿ, ಆಯುಷ್‌ ವೈದ್ಯರಿಗೊಂದು ಕೆಲಸ ಕೊಟ್ಟು ಆರೋಗ್ಯ ಕೇಂದ್ರಗಳನ್ನು ಮುನ್ನಡೆಸುವ ಜವಾಬ್ದಾರಿ ಹೊರೆಸಲಾಗಿದೆ.

ಭಾರತದ ಜತೆಗಿನ ಸಂಬಂಧವೇ ಮುಖ್ಯ ಸಮಸ್ಯೆಯಾಗಿದೆ: ಇಮ್ರಾನ್‌
‘ಭಾರತದ ಜತೆಗಿನ ಸಂಬಂಧವೇ ಮುಖ್ಯ ಸಮಸ್ಯೆಯಾಗಿದೆ. ಲೋಕಸಭಾ ಚುನಾವಣೆ ನಂತರ ಸಂಬಂಧ ವೃದ್ಧಿಗೊಳ್ಳಬಹುದು ಎಂಬ ಭರವಸೆ ಇದೆ’ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅಭಿಪ್ರಾಯಪಟ್ಟರು.

ಮಂಡ್ಯ: ಗುಪ್ತಚರ, ಜೆಡಿಎಸ್‌ ಸಮೀಕ್ಷೆಯಲ್ಲಿ ನಿಖಿಲ್‌ಗೆ ಹಿನ್ನಡೆ; ಸಿಎಂ ಗರಂ?
ಗುಪ್ತಚರ ಇಲಾಖೆ ಹಾಗೂ ಜೆಡಿಎಸ್‌ ಆಂತರಿಕ ಸಮೀಕ್ಷೆಯಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ನಿಖಿಲ್‌ ಅವರಿಗೆ ಹಿನ್ನಡೆಯಾಗುವ ವರದಿ ಬಂದಿದ್ದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಶಾಸಕರ ಮೇಲೆ ಅಸಮಾಧಾನಗೊಂಡಿದ್ದಾರೆ ಎಂಬ ವಿಷಯ ಬೆಳಕಿಗೆ ಬಂದಿದೆ.

ಬತ್ತಿರುವ ತೊರೆ, ಕೆರೆಗಳು; ಜನ, ಜಾನುವಾರುಗಳ ಪರದಾಟ
ಕೃಷ್ಣಾ ಮತ್ತು ದೂಧಗಂಗಾ ಸೇರಿದಂತೆ ಪಂಚನದಿಗಳು ಹರಿಯುವ ಚಿಕ್ಕೋಡಿ ತಾಲ್ಲೂಕಿನಲ್ಲಿಯೇ ಈಗ ಹನಿಹನಿ ನೀರಿಗೂ ಪರದಾಡುವ ಸ್ಥಿತಿ ಬಂದೊದಗಿದೆ.

‘ಕೆಜಿಎಫ್‌’ ಗಡ್ಡದ ಹವಾ ‘ರಾಕಿ ಭಾಯ್‌’ ಗುಂಗು
ಮಲ್ಲೇಶ್ವರದ ಎಂಟನೇ ಕ್ರಾಸ್‌ನಲ್ಲಿ ಶುಕ್ರವಾರ ಗಡ್ಡಗಳದ್ದೇ ಹಾವಳಿ. ಅದರಲ್ಲೂ ಅಲ್ಲಿನ ಜಿ.ಎಂ. ರಿಜಾಯ್ಸ್‌ ಹೋಟೆಲ್‌ ಎದುರು ಬೆಳಗಿನ ಜಾವದಿಂದಲೇ ಗಡ್ಡಧಾರಿಗಳ ದೊಡ್ಡ ಜಾತ್ರೆಯೇ ನೆರೆದಿತ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT