ಮಹೇಶ್ವರನಾಥ ಶ್ರೀಗೆ ಧರ್ಮಾಧಿಕಾರ ದೀಕ್ಷೆ

ಮಂಗಳವಾರ, ಜೂನ್ 25, 2019
22 °C

ಮಹೇಶ್ವರನಾಥ ಶ್ರೀಗೆ ಧರ್ಮಾಧಿಕಾರ ದೀಕ್ಷೆ

Published:
Updated:
Prajavani

ವಿಜಯಪುರ: ‘ಈ ವರ್ಷ ಚೆನ್ನಾಗಿ ಮಳೆಯಾಗಿ, ರೈತರು ಬೆಳೆಯುವ ಬೆಳೆಗೆ ಸರಿಯಾದ ಬೆಲೆ ಸಿಗಲಿ, ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಲಾಭವಾಗಲಿ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ದೊರೆತು ಅವರ ಎಲ್ಲ ಆಸೆಗಳು ಈಡೇರಲಿ’ ಎಂದು ಉಜ್ಜಯಿನಿಯ ಸಿದ್ಧಲಿಂಗ ಶ್ರೀಗಳು ಹಾರೈಸಿದರು.

ಇಲ್ಲಿಯ ಕರ್ಪೂರ ಮಠದಲ್ಲಿ ಈಚೆಗೆ ಏರ್ಪಡಿಸಿದ್ದ ಶ್ರೀಮಠದ ಡಾ.ಮಹೇಶ್ವನಾಥ ಸ್ವಾಮೀಜಿ ಧರ್ಮಾಧಿಕಾರ ದೀಕ್ಷಾ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.

‘ಮಗು ಜನಿಸುವ ಮುಂಚೆಯೇ ಅದಕ್ಕೆ ಸಂಸ್ಕಾರ ನೀಡುವ ಪದ್ಧತಿ ಇರುವ ವಿಶ್ವದ ಏಕೈಕ ಧರ್ಮ ವೀರಶೈವ ಲಿಂಗಾಯತ ಧರ್ಮ. ತಾಯಿಯ ಗರ್ಭಕ್ಕೆ ಲಿಂಗ ಧಾರಣೆ ಮಾಡಿ ಮಗು ಜನಿಸುವ ಮುಂಚೆಯೇ ಅದಕ್ಕೆ ಸಂಸ್ಕಾರ ನೀಡುವ ಪದ್ಧತಿ ಈ ಧರ್ಮದಲ್ಲಿದೆ’ ಎಂದರು.

ಕಡಗಂಚಿ ಶ್ರೀಮಠದ ವೀರಭದ್ರ ಶಿವಾಚಾರ್ಯರು ಡಾ.ಮಹೇಶ್ವರನಾಥ ಸ್ವಾಮೀಜಿಗೆ ಧರ್ಮಾಧಿಕಾರ ದೀಕ್ಷೆಯನ್ನು ನೀಡಿದರು.

ದೀಕ್ಷೆ ಸ್ವೀಕರಿಸಿ ಮಾತನಾಡಿದ ಡಾ.ಮಹೇಶ್ವರನಾಥ ಸ್ವಾಮೀಜಿ, ‘ಕರ್ಪೂರಮಠವು ಉಜ್ಜಯಿನಿ ಪರಂಪರೆಯ ಮಠವಾಗಿದ್ದು, ಶ್ರೀಮಠದ ಪರಂಪರೆಯಂತೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಕಾರ್ಯಕ್ರಮ ಕೈಗೊಳ್ಳಲಾಗುವುದು’ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಈಶ್ವರಚಂದ್ರ ಚಿಂತಾಮಣಿ ಒಳಗೊಂಡು ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ತಡವಲಗಾ ಹಿರೇಮಠದ ಅಭಿನವ ರಾಚೋಟೇಶ್ವರ ಸ್ವಾಮೀಜಿ, ಚಡಚಣ ವಿರಕ್ತಮಠದ ಷಡಕ್ಷರಿ ಶಿವಯೋಗಿ, ನಾಗಠಾಣ ಉದಯೇಶ್ವರ ಮಠದ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ, ಬಸವನಬಾಗೇವಾಡಿಯ ಶಿವಪ್ರಕಾಶ ಸ್ವಾಮೀಜಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಶಾಂತಪ್ಪ ಜತ್ತಿ, ಜಗನು ಮಹಾರಾಜರು, ಡಾ.ಚಂದ್ರಶೇಖರ ನಾಗರಾಳಮಠ ವೇದಿಕೆಯಲ್ಲಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !