ಬುಧವಾರ, ಆಗಸ್ಟ್ 21, 2019
22 °C

ನೇಪಾಳದ ಕಾಜಿನ್‌ ಸರಾ ವಿಶ್ವದ ಅತಿ ಎತ್ತರದ ಕೆರೆ?

Published:
Updated:
Prajavani

ಕಠ್ಮಂಡು (ಪಿಟಿಐ): ನೇಪಾಳದಲ್ಲಿ ಹೊಸದಾಗಿ ಗುರುತಿಸಲಾಗಿರುವ ಕೆರೆಯೊಂದು ವಿಶ್ವದ ಅತಿ ಎತ್ತರ ಪ್ರದೇಶದಲ್ಲಿದೆ ಎನ್ನುವ ಹಿರಿಮೆಗೆ ಪಾತ್ರವಾಗುವ ನಿರೀಕ್ಷೆ ಇದೆ. ಇದುವರೆಗೆ ಈ ಹಿರಿಮೆ ಸಮುದ್ರ ಮಟ್ಟದಿಂದ 4,919 ಮೀಟರ್‌ ಎತ್ತರದಲ್ಲಿರುವ ಟಿಲಿಕೊ ಕೆರೆಯದಾಗಿತ್ತು.

ನೇಪಾಳದ ಮನಂಗ್ ಜಿಲ್ಲೆಯ ಕಾಜಿನ್‌ ಸರಾ ಹೆಸರಿನ ಕೆರೆಯನ್ನು ಈಚೆಗೆ ಶಿಖರಗಾಮಿಗಳ ತಂಡವು ಗುರುತಿಸಿದೆ ಎಂದು ಸ್ಥಳೀಯ ಹಿಮಾಲಯನ್‌ ಟೈಮ್ಸ್‌ ವರದಿ ಮಾಡಿದೆ. ಇದು, ಸಿಂಗಾರ್‌ಖರ್ಕಾ ಪ್ರದೇಶದಲ್ಲಿದೆ.

‘ತಂಡ ಕೈಗೊಂಡ ಅಳತೆ ಪ್ರಕ್ರಿಯೆ ಅನುಸಾರ, ಉಲ್ಲೇಖಿತ ಕೆರೆಯು ಸಮುದ್ರ ಮಟ್ಟದಿಂದ 5,200 ಮೀಟರ್ ಎತ್ತರದಲ್ಲಿದೆ. ಆದರೆ, ಇದಕ್ಕೆ ಇನ್ನೂ ಅಧಿಕೃತ ಮಾನ್ಯತೆ ಸಿಗಬೇಕಿದೆ. ಕೆರೆಯು ಸುಮಾರು 1,500 ಮೀಟರ್‌ ಉದ್ದವಿದ್ದು, 600 ಮೀಟರ್ ಅಗಲವಿದೆ’ ಎಂದು ಚಾಮೆ ಗ್ರಾಮೀಣ ಮುನ್ಸಿಪಾಲಿಟಿ ಅಧ್ಯಕ್ಷ ಲೋಕೇಂದ್ರ ಘಲೆ ಹೇಳಿದರು.

ಗುರುತಿಸಲಾದ ಕೆರೆಯ ಎತ್ತರ ಬಹುಶಃ 5,000 ಮೀಟರ್‌ಗಳಿಗಿಂತಲೂ ಎತ್ತರವಿದ್ದರೆ ಖಂಡಿತವಾಗಿ ವಿಶ್ವದ ಅತಿ ಎತ್ತರ ಭಾಗದಲ್ಲಿರುವ ಕೆರೆ ಎಂಬ ಹಿರಿಮೆಗೆ ಪಾತ್ರವಾಗಲಿದೆ. ಇದನ್ನು ಅಧಿಕೃತವಾಗಿ ಗುರುತಿಸಬೇಕಿದೆ ಎಂದು ಹೇಳಿದರು.

ಪ್ರಸ್ತುತ ಅತಿ ಎತ್ತರದ ಕೆರೆ ಎಂಬ ಹಿರಿಮೆಯುಳ್ಳ ಟಿಲಿಕೊ ಸಮುದ್ರಮಟ್ಟದಿಂದ 4,919 ಮೀಟರ್‌ ಎತ್ತರವಿದೆ. 4 ಮೀಟರ್‌ ಉದ್ದವಿದ್ದು, 1.2 ಕಿ.ಮೀ ಅಗಲವಿದೆ. 200 ಮೀಟರ್‌ನಷ್ಟು ಆಳವಿದೆ.

Post Comments (+)