ಗುರುವಾರ , ನವೆಂಬರ್ 21, 2019
20 °C

ರಾಜ್‌ ಶಾಂಡಿಲ್ಯ ಚಿತ್ರಕ್ಕೆ ದಿಶಾ ಪಟಾನಿ ನಾಯಕಿ

Published:
Updated:
Prajavani

ರಾಜ್‌ ಶಾಂಡಿಲ್ಯ ಅವರ ‘ಡ್ರೀಮ್‌ ಗರ್ಲ್‌’ ಚಿತ್ರವು ಇತ್ತೀಚೆಗೆ ಭಾರಿ ಯಶಸ್ಸು ಗಳಿಸಿತ್ತು. ಈಗ ಅವರು ತಮ್ಮ ಮುಂದಿನ ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರದಲ್ಲಿ ನಾಯಕಿಯಾಗಿ ದಿಶಾ ಪಟಾನಿ ನಟಿಸಿದ್ದಾರೆ. ಈ ಚಿತ್ರಕ್ಕೆ ಟೈಟಲ್‌ ಇನ್ನೂ ಅಂತಿಮವಾಗಿಲ್ಲ. ಏಕ್ತಾ ಕಪೂರ್‌ ಈ ಚಿತ್ರ ನಿರ್ಮಾಣ ಮಾಡಲಿದ್ದಾರೆ.

‘ಭಾರತ್‌’ ಸಿನಿಮಾದಲ್ಲಿ ಅತಿಥಿ, ಸಣ್ಣ ಪಾತ್ರದಲ್ಲಿ ನಟಿಸಿದ್ದರೂ, ದಿಶಾ ಪಟಾನಿ ಲಕ್ಷಾಂತರ ಜನರ ಹೃದಯ ಗೆದ್ದಿದ್ದರು. ರಾಜ್‌ ಶಾಂಡಿಲ್ಯ ಅವರ ಚಿತ್ರದಲ್ಲಿ ಸಣ್ಣ ಪಟ್ಟಣದ ಪಂಜಾಬಿ ಯುವತಿ ಪಾತ್ರವನ್ನು ದಿಶಾನಿ ನಿರ್ವಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ಅವರು ಪಂಜಾಬಿ ಯುವತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ದಿಶಾ ಪಟಾನಿ ‘ಮಲಂಗ್‌’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅನಿಲ್‌ ಕಪೂರ್‌, ಆದಿತ್ಯ ರಾಯ್‌ ಕಪೂರ್‌ ಹಾಗೂ ಕುನಾಲ್‌ ಕೇಮು ನಟಿಸುತ್ತಿದ್ದಾರೆ. ಈ ಚಿತ್ರವನ್ನು ಮೋಹಿತ್‌ ಸೂರಿ ನಿರ್ದೇಶಿಸುತ್ತಿದ್ದು, 2020ರ ಪ್ರೇಮಿಗಳ ದಿನ ಫೆಬ್ರುವರಿ 14ರಂದು ತೆರೆ ಕಾಣಲಿದೆ.

ಇದನ್ನೂ ಓದಿ: ನಗೆ ಬರಹಗಾರ ರಾಜ್ ಶಾಂಡಿಲ್ಯನ ಬದುಕು ಸಾಗಿದ ಬಗೆ

ಪ್ರತಿಕ್ರಿಯಿಸಿ (+)