ಶುಕ್ರವಾರ, ಜನವರಿ 24, 2020
18 °C

ತೆಲಗುಂದ್ಲಿ: ಬಾವಿಗೆ ತಳ್ಳಿ ಗರ್ಭಿಣಿ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊರಬ: ತಾಲ್ಲೂಕಿನ ತೆಲಗುಂದ್ಲಿ ಗ್ರಾಮದಲ್ಲಿ ಭಾನುವಾರ 4 ತಿಂಗಳ ಗರ್ಭಿಣಿಯನ್ನು ಬಾವಿಗೆ ತಳ್ಳಿ ಕೊಲೆ ಮಾಡಲಾಗಿದೆ.

ಲತಾ (22) ಕೊಲೆಯಾದವರು. ‘ಮದುವೆ ಆದ ದಿನದಿಂದಲೂ ಪತಿ ಹರಿಶ್ಚಂದ್ರ ಹಾಗೂ ಅವರ ತಂದೆ-ತಾಯಿ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಭಾನುವಾರ ಅತ್ತೆ–ಮಾವ ತವರು ಮನೆಗೆ ಹೋಗಿ ವರದಕ್ಷಿಣೆ ತರುವಂತೆ ಒತ್ತಾಯಿಸಿದಾಗ ಆಕೆ ನಿರಾಕರಿಸಿದರು. ಆಗ ಅವರನ್ನು ಮನೆಯ ಹಿತ್ತಲಿನ ಬಾವಿಗೆ ತಳ್ಳಿ ಕೊಲೆ ಮಾಡಿದ್ದಾರೆ’ ಎಂದು ಮಹಿಳೆಯ ತಾಯಿ ವಿನೋದಮ್ಮ ಅವರು ಸೊರಬ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರಿನ ಮೇರೆಗೆ ಪತಿ ಹರಿಶ್ಚಂದ್ರ, ಮಾವ ಲೋಕಪ್ಪ, ಅತ್ತೆ ಮಾಸ್ತ್ಯಮ್ಮ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ. ಲತಾ ಅವರಿಗೆ 2 ವರ್ಷದ ಗಂಡುಮಗು ಇದ್ದು, ಈಗ ನಾಲ್ಕು ತಿಂಗಳ ಗರ್ಭಿಣಿ ಇದ್ದರು ಎಂದು ತಿಳಿದುಬಂದಿದೆ.

ಪ್ರತಿಕ್ರಿಯಿಸಿ (+)