₹2ಲಕ್ಷ ಬೆಳೆ ನಷ್ಟವಾದರೆ ₹600 ಪರಿಹಾರ !

7
ಶ್ಯಾನುಭೋಗನಹಳ್ಳಿ : ಕಾಡಾನೆಗಳ ದಾಳಿ – ಬೆಳೆ ನಾಶ

₹2ಲಕ್ಷ ಬೆಳೆ ನಷ್ಟವಾದರೆ ₹600 ಪರಿಹಾರ !

Published:
Updated:
Deccan Herald

ಚನ್ನಪಟ್ಟಣ: ತಾಲ್ಲೂಕಿನ ಶ್ಯಾನುಭೋಗನಹಳ್ಳಿ ಗ್ರಾಮದಲ್ಲಿ ಎಂಟು ಕಾಡಾನೆಗಳ ಹಿಂಡು ಮೂರು ದಿನಗಳಿಂದ ಸತತ ದಾಳಿ ನಡೆಸಿ ರೈತರ ಭತ್ತ, ರಾಗಿ, ತೆಂಗು, ಮಾವು ಬೆಳೆ ನಾಶಪಡಿಸಿವೆ.

ಗ್ರಾಮದ ರೈತರಾದ ಪುಟ್ಟೇಗೌಡ, ನವೀನ, ಹೊಂಬಾಳಮ್ಮ, ಬೋರಮ್ಮ, ನಿಂಗೇಗೌಡ, ದ್ಯಾವೇಗೌಡ, ಶಿವಲಿಂಗಮ್ಮ, ಚಿಕ್ಕೋಳಮ್ಮ ಅವರ ಭತ್ತ, ರಾಗಿ, ತೆಂಗು, ಮಾವು ಬೆಳೆಗಳನ್ನು ಆನೆಗಳು ಧ್ವಂಸ ಮಾಡಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಗ್ರಾಮದ ಪಕ್ಕದಲ್ಲಿರುವ ಬೆಟ್ಟಗಳಲ್ಲಿ ಹಲವು ವರ್ಷಗಳಿಂದ ಬೀಡುಬಿಟ್ಟಿರುವ ಆನೆಗಳು ರಾತ್ರಿ ವೇಳೆಯಲ್ಲಿ ಸತತವಾಗಿ ದಾಳಿ ನಡೆಸುತ್ತಿದ್ದು, ಇದರಿಂದ ರೈತರು ಕಂಗೆಟ್ಟಿದ್ದಾರೆ. ಕಷ್ಟಪಟ್ಟು ದುಡಿದ ಬೆಳೆ ಆನೆ ದಾಳಿಯಿಂದಾಗಿ ಕಳೆದುಕೊಳ್ಳುವಂತಾಗಿದೆ ಎಂದು ರೈತರು ದೂರಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಮುತ್ತುನಾಯಕ್, ಅರಣ್ಯ ರಕ್ಷಕ ಕಾಂತರಾಜು ಭೇಟಿ ನೀಡಿದರು.

ಪರಿಹಾರ ಇಲ್ಲ: ಐದು ವರ್ಷಗಳಿಂದ ಕಾಡಾನೆಗಳ ದಾಳಿಯಿಂದ ಬೆಳೆ ಕಳೆದುಕೊಂಡ ರೈತರಿಗೆ ಸರ್ಕಾರದ ವತಿಯಿಂದ ಪರಿಹಾರ ಬಂದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಯಾವುದೇ ಸಮರ್ಪಕ ಉತ್ತರ ಸಿಗುತ್ತಿಲ್ಲ. ಒಂದಿಬ್ಬರು ರೈತರಿಗೆ ಪರಿಹಾರದ ಹಣ ಬಂದಿದೆ. ₹2 ಲಕ್ಷ ಮೌಲ್ಯದ ಬೆಳೆ ಕಳೆದುಕೊಂಡವರಿಗೆ ಕೇವಲ ₹600 ಪರಿಹಾರ ನೀಡಲಾಗಿದೆ. ಇದರಿಂದ ರೈತರಿಗೆ ಯಾವುದೇ ಪರಿಹಾರ ಸಿಕ್ಕಂತೆ ಆಗಿಲ್ಲ. ಪರಿಹಾರದ ವಿಚಾರದಲ್ಲಿ ಹೆಚ್ಚು ಹಣ ನೀಡಿ ರೈತರ ನೆರವಿಗೆ ಬರಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !