₹1 ಲಕ್ಷ ಕೋಟಿ ಬ್ಯಾಂಕಿಂಗ್‌ ವ್ಯವಹಾರ

7
ವೈಶ್ಯ ವಿವಿಧೋದ್ದೇಶ ಪತ್ತಿನ ಸೌಹಾರ್ದ ಸಹಕಾರ ಸದಸ್ಯರ ಸಭೆ

₹1 ಲಕ್ಷ ಕೋಟಿ ಬ್ಯಾಂಕಿಂಗ್‌ ವ್ಯವಹಾರ

Published:
Updated:
Deccan Herald

ಮಾಗಡಿ: ರಾಜ್ಯದಲ್ಲಿ ಆರ್ಯ ವೈಶ್ಯ ಸಮುದಾಯದ ವರ್ತಕರು ವಾರ್ಷಿಕವಾಗಿ ₹ 1 ಲಕ್ಷ ಕೋಟಿ ಬ್ಯಾಂಕಿಂಗ್‌ ವ್ಯವಹಾರ ಮಾಡುತ್ತಿದ್ದೇವೆ ಎಂದು ಅಧ್ಯಕ್ಷ ಎಸ್‌. ಶಿವಕುಮಾರ್‌ ತಿಳಿಸಿದರು.

ಭಾನುವಾರ ಕನ್ನಿಕಾ ಮಹಲ್‌ ನಲ್ಲಿ ನಡೆದ ವೈಶ್ಯ ವಿವಿಧೋದ್ದೇಶ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತದ ಸರ್ವಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘1929 ರಲ್ಲಿ ಅರಕಲಗೂಡು ನರಸಿಂಹ ಶೆಟ್ಟರು ಆರಂಭಿಸಿದ್ದ ಸಹಕಾರಿ ಚಳವಳಿಯ ಸಂಕೇತವಾಗಿ ಮಾಗಡಿಯಲ್ಲಿ ನಮ್ಮ ಸಹಕಾರಿ ನಿಯಮಿತ ಆರಂಭವಾಗಿದೆ. ಸರ್ವರಿಗೆ ಸಮ ಬಾಳು, ಸರ್ವರಿಗೆ ಸಮಪಾಲು ಎಂಬ ಸಹಕಾರಿ ಆದರ್ಶವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕಿದೆ’ ಎಂದರು.

ಷೇರುದಾರರಿಗೆ ಶೇ 18ರಷ್ಟು ಡಿವಿಡೆಂಡ್‌ ನೀಡಲಾಗುವುದು. ಷೇರುದಾರರ ಸಹಕಾರವೇ ನಿಯಮಿತದ ಬೆಳವಣಿಗೆಗೆ ಪ್ರೇರಣೆಯಾಗಿದೆ ಎಂದು ಅವರು ತಿಳಿಸಿದರು.

ಪುರಸಭೆ ಸದಸ್ಯ ಕೆ.ವಿ. ಬಾಲರಘು ಮಾತನಾಡಿ, ‘ಸಂಘದ ಷೇರುದಾರರಿಗೆ ಮನೆ ಕಟ್ಟಲು ಮತ್ತು ಮಕ್ಕಳ ಶಿಕ್ಷಣಕ್ಕೆ ಸಾಲ ನೀಡಬೇಕು. ನಮ್ಮ ವಾರ್ಡಿನಲ್ಲಿ ಪಡಿತರ ಚೀಟಿ ಇಲ್ಲದವರು ಅರ್ಜಿ ಸಲ್ಲಿಸಿದರೆ ಬಿಪಿಎಲ್‌ ಮತ್ತು ಎಪಿಎಲ್‌ ಪಡಿತರ ಚೀಟಿ ಕೊಡಿಸಲಾಗುವುದು’ ಎಂದರು.

ಉಪಾಧ್ಯಕ್ಷೆ ಗೀತಾ ನಾಗೇಶ್‌, ನಿರ್ದೇಶಕರಾದ ಬಿ.ಎನ್‌. ಸತೀಶ್‌, ಆಂಜನೇಯ ಗುಪ್ತ, ಎಸ್‌.ಜಿ. ಕೃಷ್ಣಮೂರ್ತಿ, ಬಿ.ಎ.ರಂಗನಾಥ್‌, ಬಿ.ಆರ್‌. ಜೀವನ್‌, ಆರ್‌.ಎನ್‌. ನಳಿನಿ ಮಾತನಾಡಿದರು.

ಕಾರ್ಯದರ್ಶಿ ಎಂ.ಎಸ್‌. ಕೃಷ್ಣಮೂರ್ತಿ ವರದಿ ಓದಿದರು. ಆರ್ಯವೈಶ್ಯ ಮಂಡಳಿ ಕಾರ್ಯದರ್ಶಿ ನಾಗರಾಜು, ಮಹೇಶ್‌, ಪದ್ಮಶ್ರೀ ಗೋಪಾಲಕೃಷ್ಣ, ಪ್ರಭಾವತಮ್ಮ ಸತ್ಯನಾರಾಯಣ ಶೆಟ್ಟಿ, ಮೀರಾ ಶಿವಕುಮಾರ್‌, ಸಂಗೀತಾ ಪ್ರಸನ್ನ, ಸ್ಮಿತಾ ಎಸ್‌.ಸುನಿಲ್‌, ಸಿದ್ದಾರ್ಥ, ಶ್ರುತಿ, ಸಮನ್ವಿತ ಉಪಸ್ಥಿತರಿದ್ದರು.

ಆರ್ಯವೈಶ್ಯ ಮಂಡಳಿ, ಮಹಿಳಾ ಮಂಡಳಿ, ವಾಸವಿ ಯುವಜನ ಸಂಘದ ಪದಾಧಿಕಾರಿಗಳು ಮತ್ತು ಕೋಟೆ ಹಾಗೂ ಪೇಟೆಯ ವರ್ತಕರು ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !