ಗುರುವಾರ , ಸೆಪ್ಟೆಂಬರ್ 19, 2019
22 °C

ಅತ್ಯಾಚಾರ ಆರೋಪಿಗೆ 10 ವರ್ಷ ಶಿಕ್ಷೆ

Published:
Updated:

ಶಿವಮೊಗ್ಗ: ಬಾಲಕಿ ಮೇಲೆ ಅತ್ಯಾಚಾರಎಸಗಿದ್ದ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ, ₹35 ಸಾವಿರ ದಂಡ ವಿಧಿಸಿ ಈಚೆಗೆ 1ನೇ ಹೆಚ್ಚುವರಿ ವಿಶೇಷ (ಪೋಕ್ಸೊ) ಸೆಷನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ. ಶಿಕಾರಿಪುರ ತಾಲ್ಲೂಕಿನ ವಡ್ಡಿಗೆರೆ ತಾಂಡಾದ ಆರೋಪಿ ಯುವರಾಜ ನಾಯ್ಕ ಶಿಕ್ಷೆಗೊಳಗಾದವನು.

ನ್ಯಾಯಾಧೀಶ ಕೆ.ಬಿ.ಶಿವಪ್ರಸಾದ್ ತೀರ್ಪು ನೀಡಿದ್ದಾರೆ. ಎಸ್.ಕೆ.ಮೂರ್ತಿ ರಾವ್ ಸರ್ಕಾರದ ಪರ ವಾದ ಮಂಡಿಸಿದ್ದರು.

Post Comments (+)