ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘದ ಮೂಲಕ ಉಳಿತಾಯ ಮನೋಭಾವ ವೃದ್ಧಿ

Last Updated 4 ಜುಲೈ 2012, 9:35 IST
ಅಕ್ಷರ ಗಾತ್ರ

ಶಿಕಾರಿಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಲ್ಲಿ ಸ್ವಸಹಾಯ ಸಂಘದ ಮೂಲಕ ಉಳಿತಾಯ ಮನೋಭಾವನೆ ವೃದ್ಧಿಸಿ ತಾಲ್ಲೂಕಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸರಿಸಮಾನವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶಿಕಾರಿಪುರ ಪುರಸಭಾ ಸದಸ್ಯ ಬಾಲಕೃಷ್ಣ ಜೋಯಿಸ್ ಮೆಚ್ಚುಗೆ ವ್ಯಕ್ತಪಡಿಸಿದರು

ಪಟ್ಟಣದ ಹುಚ್ಚರಾಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ನೂತನವಾಗಿ ಆರಂಭವಾದ ಮಾತಾ ಪ್ರಗತಿಬಂಧು ಸ್ವಸಹಾಯ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಉಳಿತಾಯ ಮನೋಭಾವನೆ ಹೆಚ್ಚಿದ್ದು, ಅದನ್ನು ಅಡಿಪಾಯವನ್ನಾಗಿಸಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಲ್ಲಿ ಒಗ್ಗಟ್ಟು, ಸಹಕಾರ ಮನೋಭಾವನೆಯನ್ನು ಬೆಳೆಸಿ ಸದೃಢ ಸಮಾಜ ನಿರ್ಮಾಣಕ್ಕೆ ಸ್ವಸಹಾಯ ಸಂಘದ ಮೂಲಕ ಕಾರ್ಯ ಪ್ರವೃತ್ತವಾಗಿದೆ.

ಮಹಿಳಾ ಸ್ವಸಹಾಯ ಸಂಘಗಳು ಕೇವಲ ಸಂಘವನ್ನು ಉಳಿತಾಯ ಹಾಗೂ ಆರ್ಥಿಕ ಪ್ರಗತಿಗಾಗಿ ಮಾತ್ರ ಸೀಮಿತವಾಗಿಸದೆ ಸಮಾಜಮುಖಿ ಕಾರ್ಯದತ್ತ ಚಿಂತಿಸಲು ಸಲಹೆ ನೀಡಿದರು.

ಪುರೋಹಿತ್ ಗಣಪತಿ ಭಟ್ ಹಾಗೂ ಯೋಜನೆಯ ಮೇಲ್ವಿಚಾರಕಿ ಶಾಂತಿ ಮಾತನಾಡಿದರು. ಯಶೋದಾ, ಶೇಷಾದ್ರಿ, ಗೋಪಿ ಚರ್ಕವರ್ತಿ, ಅನಂತಭಟ್ ಮತ್ತಿತರರು ಉಪಸ್ಥಿತರಿದ್ದರು.

ನಾಗರತ್ನಾ ಹೆಬ್ಬಾರ್ ಪ್ರಾರ್ಥಿಸಿದರು. ಸರೋಜಮ್ಮ ಸ್ವಾಗತಿಸಿದರು. ಗೌರಿ ಕಾರ್ಯಕ್ರಮ ನಿರೂಪಿಸಿದರು. ಅನ್ನಪೂರ್ಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT