ಭಾನುವಾರ, ಸೆಪ್ಟೆಂಬರ್ 22, 2019
23 °C

17ಕ್ಕೆ ರಾಜ್ಯದಾದ್ಯಂತ ‘ಕಾರ್ಮೋಡ ಸರಿದು’ ಚಿತ್ರ ತೆರೆಗೆ

Published:
Updated:

ಶಿವಮೊಗ್ಗ: ಕುದುರೆ ಮುಖ ಟಾಕೀಸ್ ನಿರ್ಮಾಣದ ‘ಕಾರ್ಮೋಡ ಸರಿದು’ ಚಿತ್ರ ಮೇ 17ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ. 

ಮಜಾ ಭಾರತ ಖ್ಯಾತಿಯ ದಿವ್ಯಾ, ಶ್ರೀಧರ್, ಅಶೋಕ್, ಹೇಮಂತ್ ತಾರಾಗಣದಲ್ಲಿದ್ದು, ಅದ್ವಿತಿ ಶೆಟ್ಟಿ ನಾಯಕಿಯಾಗಿದ್ದಾರೆ. ಸತೀಶ್ ಸಂಗೀತ ಸಂಯೋಜಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ ಉದಯ್‌ಕುಮಾರ್ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಯುವ ಸಮೂಹ ಈಚೆಗೆ ದಿಕ್ಕು ತಪ್ಪುತ್ತಿದೆ. ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾಗುವ ಮನಸ್ಥಿತಿ ಇದೆ. ಅದನ್ನು ಬದಲಾಯಿಸುವ ಸಂದೇಶ ಚಿತ್ರದಲ್ಲಿದೆ. ತಂದೆ-ತಾಯಿ ಮತ್ತಿತರ ಸಂಬಂಧಗಳಿಗೆ ಬೆಲೆ ಇಲ್ಲದ ಈ ಯಾಂತ್ರಿಕ ಜಗತ್ತಿನ ನಡುವಿನ ಬದುಕು, ಮನುಷ್ಯನ ಭಾವನೆಗಳು ಕಾಣೆಯಾದಾಗ ಕರುಣೆ-ಪ್ರೀತಿಯೇ ಮಾಯವಾದಾಗ ಬದುಕು ಹೇಗೆ ನಡೆಯುತ್ತದೆ ಎಂಬುದೇ ಚಿತ್ರದ ಮೂಲ ಉದ್ದೇಶ ಎಂದರು.

ನಾಯಕ ನಟ ಮಂಜು ಮಾತನಾಡಿ, ‘ಚನ್ನಗಿರಿಯ ಮಾಚನಾಯಕನಹಳ್ಳಿ ನನ್ನ ಊರು, ನನಗೆ ಈ ಚಿತ್ರದಲ್ಲಿ ಉತ್ತಮ ಅವಕಾಶ ಸಿಕ್ಕಿದೆ. ಈ ಚಿತ್ರವನ್ನು ಕುದುರೆ ಮುಖ, ಕಳಸ ಸುತ್ತ-ಮುತ್ತಲಿನ ಮಲೆನಾಡು ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ’ ಎಂದರು. 

ಚಿತ್ರದ ನಾಯಕಿ ಅದ್ವಿತಿ ಶೆಟ್ಟಿ ಇದ್ದರು.

Post Comments (+)