ಬುಧವಾರ, ಜನವರಿ 22, 2020
28 °C

ಬೇಡಿಕೆಗಾಗಿ ಆಗ್ರಹಿಸಿ ಬ್ಯಾಂಕ್‌ ನೌಕರರ ಮುಷ್ಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಬ್ಯಾಂಕ್‌ ನೌಕರರ ಸಂಯುಕ್ತ ವೇದಿಕೆಯವರು ಬುಧವಾರ ಜಿಲ್ಲೆಯಲ್ಲಿ ಮುಷ್ಕರ ನಡೆಸಿ ದರು. ಹೀಗಾಗಿ ಬ್ಯಾಂಕ್‌ ವಹಿವಾಟು ನಡೆಯದೇ ಗ್ರಾಹಕರು ಪರದಾಡು ವಂತಾಯಿತು.ಇಲ್ಲಿಯ ಗುರುಕುಲ ರಸ್ತೆಯಲ್ಲಿರುವ ಸಿಂಡಿಕೇಟ್‌ ಬ್ಯಾಂಕ್‌ನ ಮುಖ್ಯ ಶಾಖೆಯ ಎದುರು ನೌಕರರು ಪ್ರತಿಭಟನೆ ನಡೆಸಿದರು.

‘ಬ್ಯಾಂಕ್‌ ನೌಕರರ ಸಂಯುಕ್ತ ವೇದಿಕೆ ಮತ್ತು ಭಾರತೀಯ ಬ್ಯಾಂಕ್‌ಗಳ ಸಂಘದ (ಐ.ಬಿ.ಐ.) ಜೊತೆ ನಡೆದ ದ್ವಿ ಪಕ್ಷೀಯ ಮಾತುಕತೆ ವಿಫಲವಾಗಿದ್ದ ರಿಂದ ಬ್ಯಾಂಕ್‌ ನೌಕರರು ಮತ್ತು ಅಧಿ ಕಾರಿಗಳು ದೇಶಾದ್ಯಂತ ಈ ಮುಷ್ಕರ ನಡೆಸಿದ್ದೇವೆ’ ಎಂದು ಮುಖಂಡರು ಹೇಳಿದರು.‘ಭಾರತೀಯ ಬ್ಯಾಂಕ್‌ಗಳ ಸಂಘದ ವಿಳಂಬ ನೀತಿ ಹಾಗೂ ಹಠಮಾರಿತನವೇ ಮುಷ್ಕರಕ್ಕೆ ಕಾರಣ. ಒಂಬತ್ತನೇ ವೇತನ ಒಪ್ಪಂದವು 31.12.2012ಕ್ಕೆ ಮುಗಿ ದಿದ್ದು, 10ನೇ ವೇತನ ಪರಿಷ್ಕರಣೆ ಆಗ ಬೇಕಿತ್ತು. ಆದರೂ, ಈ ವರೆಗೆ ಅದು ಆಗಿಲ್ಲ’ ಎಂದು ವೇದಿಕೆಯ ಜಿಲ್ಲಾ ಘಟಕದ ಸಂಚಾಲಕ ವಿಜಯ ಹೊಸೂರ ದೂರಿದರು.10ನೇ ವೇತನ ಪರಿಷ್ಕರಣೆ ಬೇಗ ಆಗಬೇಕು. ಬ್ಯಾಂಕಿಂಗ್‌ ವಲಯದ ಉದಾರೀಕರಣ ನಿಲ್ಲಬೇಕು ಎಂದು ಪ್ರತಿಭಟನಾ ನಿರತರು ಘೋಷಣೆ ಕೂಗಿ ದರು. ಬ್ಯಾಂಕ್‌ ನೌಕರರ ಸಂಯುಕ್ತ ವೇದಿಕೆಯ ಮುಖಂಡರಾದ ಜಿ.ಎಸ್‌. ಕುಲಕರ್ಣಿ, ಆಸಂಗಿ, ಜಿ.ಎಂ. ಗಾಂಧಿ, ಎಸ್‌.ಆರ್‌. ಪಟ್ಟಣಶೆಟ್ಟಿ, ಶಾಂತಪ್ಪ ಇಂಡಿ, ಅಶೋಕ ಉಪಾಧ್ಯಾಯ, ಅಜಯ್‌ ಚವ್ಹಾಣ, ಬಂಡಿವಡ್ಡರ, ಐ.ಎಸ್‌. ಚಿಮ್ಮಲಗಿ, ಚ್ಯಾಂದೋಡಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.ಬಸವನಬಾಗೇವಾಡಿ ವರದಿ

ವೇತನ ಪರಿಷ್ಕರಣೆಗೆ ಒತ್ತಾಯಿಸಿ ಬುಧವಾರ ರಾಷ್ಟ್ರವ್ಯಾಪಿ ಕರೆ ನೀಡಿದ್ದ ಬ್ಯಾಂಕ್ ನೌಕರರ ಮುಷ್ಕರದ ಹಿನ್ನೆಲೆ ಯಲ್ಲಿ ಪಟ್ಟಣದ ರಾಷ್ಟ್ರೀಕೖತ ಬ್ಯಾಂಕು ಗಳು ಮುಚ್ಚಿದ್ದವು.ಬ್ಯಾಂಕ್‌ ನೌಕರರು ಕರ್ತವ್ಯಕ್ಕೆ ಹಾಜ ರಾಗದೇ ಇರುವುದರಿಂದ ಬ್ಯಾಂಕುಗಳು ಕಾರ್ಯನಿರ್ವಹಿಸಲಿಲ್ಲ. ಇದರಿಂದಾಗಿ ಗ್ರಾಹಕರು ಪರದಾಡಿದರು. ಗ್ರಾಹಕರು ಹಣಕ್ಕಾಗಿ ಎಟಿಎಂಗಳಿಗೆ ಮೊರೆಹೋಗು ತ್ತಿರುವುದು ಕಂಡು ಬಂದಿತು.  ಎಟಿಎಂ ಇಲ್ಲದ ಗ್ರಾಹಕರು ಬ್ಯಾಂಕ್‌ ಮುಚ್ಚಿರು ವುದನ್ನು ಕಂಡು ಪರದಾಡಿದರು.ಸ್ಥಳೀಯ ರಾಷ್ಟ್ರೀಕೖತ ಬ್ಯಾಂಕ್‌ಗಳಾದ ಕೆನರಾ, ಎಸ್‌ಬಿಐ, ಸಿಂಡಿಕೇಟ್, ವೈಶ್ಯ ಬ್ಯಾಂಕ್‌ ಬಂದ್ ಮಾಡುವ ಮೂಲಕ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದವು.

ಪ್ರತಿಕ್ರಿಯಿಸಿ (+)