ಮಂಗಳವಾರ, ಜೂನ್ 15, 2021
27 °C

ಕಾಂಗ್ರೆಸ್‌ ಭಾರತ ನಿರ್ಮಾಣ ಯಾತ್ರೆಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂದಗಿ: ಬ್ಲಾಕ್ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಪಟ್ಟಣದಿಂದ ಆಲಮೇಲದವರೆಗಿನ ಭಾರತ ನಿರ್ಮಾಣ ಯಾತ್ರಾ ಪಾದಯಾತ್ರೆಗೆ ಭಾನುವಾರ ಚಾಲನೆ ನೀಡಲಾಯಿತು.ಕೆಪಿಸಿಸಿ ವಕ್ತಾರ, ವಿಜಾಪುರ ಲೋಕಸಭಾ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ರಾಠೋಡ ಡೊಳ್ಳು ಬಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿ ಯುಪಿಎ ಸರ್ಕಾರದ ಸಾಧನೆಯನ್ನು ಮತದಾರರಿಗೆ ತಲುಪಿ­ಸುವುದೇ ಪಾದಯಾತ್ರೆಯ ಉದ್ದೇಶವಾಗಿದೆ.

ಕಾಂಗ್ರೆಸ್ ಭಾರತ ಅಭಿವೃದ್ಧಿಗಾಗಿ ಬದ್ಧವಾಗಿದ್ದು, ಎಲ್ಲರಿಗೂ ಅವಕಾಶ ಅಧಿಕಾರ ಇದು ಕಾಂಗ್ರೆಸ್ ಪಕ್ಷ ಸಿದ್ದಾಂತವಾಗಿದೆ.ವಿಜಾಪುರ ಲೋಕಸಭಾ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಸಂಸತ್‌ನಲ್ಲಿ ತಮ್ಮ ಅಧಿಕಾರದ ಅವಧಿಯಲ್ಲಿ ಜಿಲ್ಲೆಯ ಸಮಸ್ಯೆಗೆ ಸಂಬಂಧಿಸಿದಂತೆ ಕನಿಷ್ಠ ಒಂದು ಸಲವಾದರೂ ಕೂಡ ಎದ್ದು ನಿಂತು ಮಾತನಾಡಿಲ್ಲ  ಎಂದು ಆರೋಪಿಸಿದರು.ಅವರು ಬರೀ ಕಾಕಾ, ಮಾಮಾ, ಬಾಬಾ ಅಂತಾ ನಾಟಕದ ಮಾತುಗಳನ್ನು ಆಡುತ್ತ ಜನರನ್ನು ಮರಳು ಮಾಡಲು ಹೊರಟಿದ್ದಾರೆ. ಇವರ ನಾಟಕೀಯ ಮಾತಿಗೆ ಮತದಾರರು ಕಿವಿಗೊಡದೇ ದೇಶದ ಅಭಿವೃದ್ಧಿಗಾಗಿ ಸದಾ ಶ್ರಮಿಸುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮತಯಾಚನೆ ಮಾಡಿದರು.ಕಾಂಗ್ರೆಸ್ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಸುಣಗಾರ ಮಾತನಾಡಿ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಪಾದಯಾತ್ರೆ ಚಾಲನಾ ಸಮಾರಂಭ­ದಲ್ಲಿ ಕಾಂಗ್ರೆಸ್ ಧುರೀಣರಾದ ಚಂದ್ರಶೇಖರ ನಾಗೂರ, ಶರಣಪ್ಪ ವಾರದ, ಷಣ್ಮುಖಪ್ಪ ಸಂಗಮ, ಹಳ್ಳೆಪ್ಪ ಚೌಧರಿ, ಗುರಪ್ಪ ಯಂಕಂಚಿ, ಡಾ. ಗೌತಮ ಚೌಧರಿ, ಸಿದ್ದಣ್ಣ ಹಿರೇಕುರುಬರ, ಎಂ.ಎನ್.ಸಾಲಿ, ವಕೀಲ ಮಲ್ಲೂ  ಗತ್ತರಗಿ, ಎಂ.ಎ. ಖತೀಬ, ಸುಭಾಷ ಛಾಯಾಗೋಳ, ಮುನ್ನಾ ಭೈರಾಮಡಗಿ, ಹಣಮಂತ ಸುಣಗಾರ, ಜಿ.ಸಿ. ಮಾರ್ಸನಳ್ಳಿ, ಎಚ್.ಎಂ. ಉತ್ನಾಳ, ಸುರೇಶ ಹಳ್ಳೂರ, ಮಹಾಂತಗೌಡ ಬಿರಾದಾರ, ಶರಣಪ್ಪ ಯಕ್ಕುಂಡಿ, ಸುಜಾತಾ ಸಿಂಧೆ ಪಾಲ್ಗೊಂಡಿದ್ದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಮಲ್ಲೂ ಗತ್ತರಗಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.