ಬುಧವಾರ, ಜನವರಿ 22, 2020
21 °C

ನಾಳೆ 252ನೇ ಶರಣ ಸಂಗಮ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕುವೆಂಪು ರಂಗಮಂದಿರದಲ್ಲಿ ಡಿ.20ರ ಸಂಜೆ 6ಕ್ಕೆ ಬಸವ ಕೇಂದ್ರದ 252ನೇ ಶರಣ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 

ಹುಣಸಘಟ್ಟದ ಎಚ್.ಎಂ.ಮಲ್ಲಿಕಾರ್ಜುನಪ್ಪ, ಲಿಂಗಮ್ಮ ಮಲ್ಲಿಕಾರ್ಜುನಪ್ಪ, ಶಾರದಾ ಎಚ್.ಎಂ.ಚಂದ್ರಶೇಖರಪ್ಪ ದತ್ತಿ ನೆರವಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬಸವಕೇಂದ್ರದ ಬಸವ ಮರುಳಸಿದ್ದ ಸ್ವಾಮೀಜಿ ಸಾನಿಧ್ಯ ವಹಿಸುವರು. 
ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಉಪನ್ಯಾಸ ನೀಡುವರು ಎಂದು ಬಸವ ಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರ ಪುತ್ರಿ, ಇಸ್ರೋ ವಿಜ್ಞಾನಿ ಕೆ.ಎಲ್.ಶಿವಾನಿ, ಬೆಳಗಾವಿ ಡಿವೈಎಸ್ಪಿ ಪ್ರಿಯದರ್ಶಿನಿ ಈಶ್ವರ್, ಅಂತರರಾಷ್ಟ್ರೀಯ ವೇಟ್‌ಲಿಫ್ಟರ್ ಸಿ.ಸುಲೋಚನಾ, ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೇ ಪ್ರಥಮ ಸ್ಥಾನ ಪಡೆದ ಕೆ.ಆರ್.ನಂದಿನಿ ಅವರನ್ನು ಸನ್ಮಾನಿಸಲಾಗುವುದು. 
ಕಾರ್ಯಕ್ರಮದ ನಂತರ ಅಕ್ಕನ ಬಳಗ ವಚನಗಾಯನ ನಡೆಸಿಕೊಡಲಿದೆ ಎಂದರು.

ಹುಣಸಘಟ್ಟದ ಸಾಹುಕಾರ ಮಲ್ಲಪ್ಪನವರ ವಂಶಸ್ಥರು ಕಾರ್ಯಕ್ರಮಕ್ಕೆ ನೆರವು ನೀಡುವರು. ಸಾಧಕರು ತಮ್ಮ ಅನುಭವಗಳನ್ನು ಹಂಚಿಕೊಂಡರೆ ಮುಂದಿನ ಪೀಳಿಗೆಗೆ ಅನುಕೂಲವಾಗಲಿದೆ ಎಂಬ ಕಾರಣಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ.ಮಹೇಂದ್ರ, ಎಚ್.ಸಿ.ಯೋಗೇಶ್, ಚಂದ್ರಪ್ಪ, ಎಸ್.ಬಿ.ಅಶೋಕ್‌ಕುಮಾರ್, ದೇವಣ್ಣ, ಇಕ್ಬಾಲ್ ನೇತಾಜಿ, ಎಚ್.ಎಂ.ಮಧು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು