ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನಿಂಗ್ಸ್ ಸೋಲಿನಿಂದ ಪಾರಾದ ಇಂಗ್ಲೆಂಡ್‌

Last Updated 26 ಮೇ 2018, 20:08 IST
ಅಕ್ಷರ ಗಾತ್ರ

ಲಂಡನ್‌: ಏಳನೇ ಕ್ರಮಾಂಕದ ಜೋಸ್ ಬಟ್ಲರ್ ಮತ್ತು ಎಂಟನೇ ಕ್ರಮಾಂಕದ ಡೊಮಿನಿಕ್‌ ಬೆಸ್ ಅವರ ಅಮೋಘ ಆಟದ ಬಲ ದಿಂದ ಇಂಗ್ಲೆಂಡ್ ತಂಡ ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಸೋಲಿನಿಂದ ಪಾರಾಯಿತು.

ಮೂರನೇ ದಿನದಾಟದ ಮುಕ್ತಾಯಕ್ಕೆ ಇಂಗ್ಲೆಂಡ್‌ 56 ರನ್‌ಗಳ ಮುನ್ನಡೆ ಗಳಿಸಿದ್ದು ನಾಲ್ಕು ವಿಕೆಟ್‌ಗಳು ಉಳಿದು ಕೊಂಡಿವೆ.

179 ರನ್‌ಗಳ ಹಿನ್ನಡೆಯೊಂದಿಗೆ ಶನಿವಾರ ಎರಡನೇ ಇನಿಂಗ್ಸ್‌ ಆರಂಭಿ ಸಿದ ಆತಿಥೇಯರು 110 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಇವರಿಬ್ಬರು ಜೊತೆಗೂಡಿ 125 ರನ್‌ಗಳನ್ನು ಸೇರಿಸಿದರು.

ಬಟ್ಲರ್‌ (66; 130 ಎ, 6 ಬೌಂ) ಹಾಗೂ ಬೆಸ್‌ (55; 101 ಎ, 8 ಬೌಂ) ಕ್ರೀಸ್‌ನಲ್ಲಿದ್ದಾರೆ. ಇದಕ್ಕೂ ಮೊದಲು ನಾಯಕ ಜೋ ರೂಟ್‌ (68; 120 ಎ, 8 ಬೌಂ) ಅರ್ಧಶತಕ ಗಳಿಸಿ ಮಿಂಚಿದ್ದರು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌, ಮೊದಲ ಇನಿಂಗ್ಸ್‌: 184; ಪಾಕಿಸ್ತಾನ, ಮೊದಲ ಇನಿಂಗ್ಸ್‌: 363; ಇಂಗ್ಲೆಂಡ್‌, ಎರಡನೇ ಇನಿಂಗ್ಸ್‌: 78 ಓವರ್‌ಗಳಲ್ಲಿ 6ಕ್ಕೆ 235 (ಜೋ ರೂಟ್‌ 68, ಜೋಸ್ ಬಟ್ಲರ್‌ 66, ಬೆಸ್‌ 55; ಮೊಹಮ್ಮದ್ ಅಮೀರ್‌ 35ಕ್ಕೆ2, ಮೊಹಮ್ಮದ್‌ ಅಬ್ಬಾಸ್‌ 36ಕ್ಕೆ2, ಶಾದಾಬ್ ಖಾನ್‌ 63ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT