ಸಾರಿಗೆ ಇಲಾಖೆಯಿಂದ ‘ಸಾರಥಿ- –4’ ಆ್ಯಪ್

7

ಸಾರಿಗೆ ಇಲಾಖೆಯಿಂದ ‘ಸಾರಥಿ- –4’ ಆ್ಯಪ್

Published:
Updated:

ಶಿವಮೊಗ್ಗ: ಸಾರಿಗೆ ಇಲಾಖೆಯು 'ಸಾರಥಿ-4' ಎಂಬ ನೂತನ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದ್ದು, ಈ ಆಧುನಿಕ ತಂತ್ರಜ್ಞಾವನ್ನು ಬಳಸಿ ಸಾರ್ವಜನಿಕರು ಮನೆಯಿಂದಲೇ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಬಹುದು ಎಂದು ಉಪಸಾರಿಗೆ ಆಯುಕ್ತ ಶಿವರಾಜ್ ಬಿ.ಪಾಟೀಲ್ ಹೇಳಿದರು.

ಪ್ರಾದೇಶಿಕ ಸಾರಿಗೆ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲಾ ಮೋಟರ್ ವಾಹನ ಚಾಲನ ತರಬೇತಿ ಶಾಲೆಗಳ ಸಿಬ್ಬಂದಿಗೆ ಸಾರಥಿ-4 ತಂತ್ರಾಂಶ ಬಳಕೆಯ ವಿಧಾನಗಳ ಕುರಿತು ಶನಿವಾರ ಏರ್ಪಡಿಸಿದ್ದ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರಥಿ-4 ತಂತ್ರಾಂಶದಲ್ಲಿ ಕಲಿಕಾ ಪರವಾನಗಿ ಮತ್ತು ಪಕ್ಕಾ ಚಾಲನಾ ಪರವಾನಗಿ ಪಡೆಯಲು ಬಯಸುವ ಸಾರ್ವಜನಿಕರು ಮುಂದಿನ ದಿನಗಳಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದೇ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಹಿಂದೆ ಸಾರಥಿ-3 ಎಂಬ ತಂತ್ರಾಂಶವನ್ನು ಬಳಸಲಾಗುತ್ತಿತ್ತು. ಅದರಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದರೂ ದಾಖಲೆಗಳ ಪರಿಶೀಲನೆಗೆ ಕಚೇರಿಗೆ ಅಲೆಯಬೇಕಾಗಿತ್ತು. ಈಗ ಎಲ್ಲಾ ದಾಖಲೆಗಳನ್ನು ಆನ್‌ಲೈನ್‌ ಮುಖಾಂತರವೇ ಸಲ್ಲಿಸಿ, ನಂತರ ಅರ್ಜಿದಾರರು  ತಮಗೆ ಅನುಕೂಲವಾದ ದಿನಾಂಕ ಮತ್ತು ಸಮಯವನ್ನು ಇಲಾಖಾ ಪರೀಕ್ಷೆಗೆ ಕಾಯ್ದಿರಿಸಬಹುದು ಎಂದರು.

ಜೂ.1ರಿಂದಲೇ ಸಾರಥಿ-4 ತಂತ್ರಾಂಶದಡಿ ಅಭ್ಯರ್ಥಿಗಳಿಗೆ ಕಲಿಕಾ ಪರವಾನಗಿಗಾಗಿ ಜಿಲ್ಲೆಯ ಎಲ್ಲಾ ಚಾಲನಾ ತರಬೇತಿ ಶಾಲೆಗಳಿಂದ ಸದರಿ ಪದ್ಧತಿಯಲ್ಲಿಯೇ ಅರ್ಜಿ ಸಲ್ಲಿಸುವಂತೆ ಸೂಚಿಸಿದರು.

ಅಭ್ಯರ್ಥಿಗಳು ನೇರವಾಗಿ ತಮ್ಮ ಜನ್ಮ ಪ್ರಮಾಣ, ವಾಸಸ್ಥಳ ದೃಢೀಕರಣ, ಆಧಾರ್, ಮತದಾರರ ಗುರುತಿನ ಚೀಟಿ ಮುಂತಾದ ಮಾಹಿತಿಗಳೊಂದಿಗೆ ಇಲಾಖಾ ಕಚೇರಿಯಲ್ಲಿ ಪರಿಶೀಲನೆ ಮತ್ತು ಪರೀಕ್ಷೆ ದಿನಾಂಕ ನಿಗದಿಪಡಿಸಿಕೊಳ್ಳಬಹುದು ಎಂದರು.

http;/parivahan.gov.in ನಲ್ಲಿ ಅರ್ಜಿದಾರರು ಕಲಿಕಾ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸಿದ ದಿನಾಂಕದಿಂದ ಚಾಲನಾ ಪರವಾನಗಿ ಪಡೆಯುವವರೆಗೂ ಮೊಬೈಲ್ ಮೂಲಕವೇ ಮಾಹಿತಿ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಪ್ರದೇಶದ ನಾಗರಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು. ಕಚೇರಿ ಅಧೀಕ್ಷಕ ಪ್ರಸಾದ್, ತಿರುಮಲ, ಚಂದ್ರಶೇಖರ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry