ರಸ್ತೆಗೆ ಉಳ್ಳಾಗಡ್ಡಿ; ಪ್ರತಿಭಟನೆ

7

ರಸ್ತೆಗೆ ಉಳ್ಳಾಗಡ್ಡಿ; ಪ್ರತಿಭಟನೆ

Published:
Updated:
ರಸ್ತೆಗೆ ಉಳ್ಳಾಗಡ್ಡಿ; ಪ್ರತಿಭಟನೆ

ವಿಜಯಪುರ: ಉಳ್ಳಾಗಡ್ಡಿಗೆ ₹ 2000 ಬೆಂಬಲ ಬೆಲೆ ಘೋಷಿಸಬೇಕು ಎಂದು ಆಗ್ರಹಿಸಿ ಈರುಳ್ಳಿ ಬೆಳೆಗಾರರು, ಜೆಡಿಎಸ್‌ ಮುಖಂಡರು ಮಂಗಳವಾರ ನಗರದ ಗಾಂಧಿಚೌಕ್‌ನಲ್ಲಿ ರಸ್ತೆಗೆ ಉಳ್ಳಾಗಡ್ಡಿ ಸುರಿದು ಪ್ರತಿಭಟಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮಾಜಿ ಸಚಿವ, ಜೆಡಿಎಸ್‌ ಮುಖಂಡ ಎಸ್‌.ಕೆ.ಬೆಳ್ಳುಬ್ಬಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಉಳ್ಳಾಗಡ್ಡಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಮೀನ–ಮೇಷ ಎಣಿಸದೆ ಕೇಂದ್ರ ಸರ್ಕಾರ ಕ್ವಿಂಟಲ್‌ಗೆ ₹ 1800 ಬೆಂಬಲ ಬೆಲೆ ನೀಡಿದರೆ, ರಾಜ್ಯ ಸರ್ಕಾರದ ಮನವೊಲಿಸಿ ನಾವೂ ಕ್ವಿಂಟಲ್‌ಗೆ ₹ 200 ಪ್ರೋತ್ಸಾಹ ಧನ ಕೊಡಿಸುತ್ತೇವೆ ಎಂದು ಹೇಳಿದರು.

ಪ್ರತಿಭಟನಾಕಾರರು ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತದ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು.

ಗಾಂಧಿಚೌಕ್‌ನಿಂದ ಪ್ರತಿಭಟನಾಕಾರರು ತೆರಳುತ್ತಿದ್ದಂತೆ, ರಸ್ತೆಗೆ ಚೆಲ್ಲಿದ್ದ ಉಳ್ಳಾಗಡ್ಡಿ ಆಯ್ದುಕೊಳ್ಳಲು ಸಾರ್ವಜನಿಕರು ಮುಗಿಬಿದ್ದ ಚಿತ್ರಣವೂ ಗೋಚರಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry