ನಿಫಾ ಶಂಕೆ: ಕೋಳಿ ವ್ಯಾಪಾರಕ್ಕೆ ಕುತ್ತು

7
ಕೋಳಿ ಖರೀದಿಗೆ ಗ್ರಾಹಕರು ಹಿಂದೇಟು: ಸಾಕಣೆದಾರರಿಗೆ ಆತಂಕ

ನಿಫಾ ಶಂಕೆ: ಕೋಳಿ ವ್ಯಾಪಾರಕ್ಕೆ ಕುತ್ತು

Published:
Updated:
ನಿಫಾ ಶಂಕೆ: ಕೋಳಿ ವ್ಯಾಪಾರಕ್ಕೆ ಕುತ್ತು

ಮುದ್ದೇಬಿಹಾಳ: ದೇಶದ ವಿವಿಧೆಡೆ ಕಂಡುಬಂದಿರುವ ನಿಫಾ ರೋಗದ ಭೀತಿ ಇಲ್ಲಿನ ಕೋಳಿ ಮಾರಾಟಕ್ಕೂ ತಟ್ಟಿದೆ. ಇದರಿಂದ ಹಬ್ಬದಲ್ಲೂ ಅವುಗಳ ವ್ಯಾಪಾರ ಇಳಿಕೆಯಾಗಿದೆ.

‘ಈ ಸಲ ಕೋಳಿ ವ್ಯಾಪಾರ ಬಾಳ ಡಲ್ ಆಗೈದರಿ’ ಎಂದು ಪಟ್ಟಣದ ಸಂತೆ ಮಾರುಕಟ್ಟೆ ಇಪ್ಪತ್ತು ಕೋಳಿಗಳನ್ನು ಮಾರಲು ಕುಳಿತಿದ್ದ ಲಕಮಣ್ಣನ ಹೇಳಿದರು.

‘ಈ ಸಲ ಬಾಳ ಕೋಳಿ ಬಂದಾವರಿ. ಆದ್ರ ಯಾವದಾ ನಿಫಾ ರೋಗ ಬಂದದ ಅಂತ ಜನಾ ಕೋಳಿ ತೊಗೊಳ್ಳುರು. ವ್ಯಾಪಾರ ಕಡಿಮ್ಯಾಗದ್’ ಎಂದರು ಪಟ್ಟಣದ ಸಯ್ಯದ ಕುಮಸಿ.

‘ಜೂನ್ ಸಾಥ್’ ಬಂತು ಎಂದರೆ ಸಾಕು ಕೆಲವು ಜನರಿಗೆ ವಿಪರೀತ ಕುತೂಹಲ. ಅದು ಇನ್ನೂ ವಾರ ಇರುವಾಗಲೇ ಇವರ ’ಜೂನ್ ಸಾಥ್’ ಊಟದ ತಯಾರಿ ಶುರುವಾಗುತ್ತದೆ. ಯಾರು ಕೋಳಿ ತರಬೇಕು, ಯಾರು ಮೀನು, ತತ್ತಿ, ಮಟನ್ ಎಂಬ ಲೆಕ್ಕಾಚಾರ ಚರ್ಚೆಯಾಗುತ್ತದೆ. ಮನೆಯಲ್ಲಿ ಯಾವುದೇ ಮಾಂಸಾಹಾರ ತಿನ್ನದವರೂ ಸಹ ಹೊರಗಡೆ ಜೂನ್ ಸಾಥ್‌ನಂದು ತಿನ್ನಲು ಬಯಸುತ್ತಾರೆ.

ಹಿಂದೂ ಪಂಚಾಂಗದ ಪ್ರಕಾರ ಜೂನ್ 7ರಂದು ಮೃಗಶಿರಾ (ಈ ಸಲ ಇದು ಜೂನ್ 8) ಮಳೆ ಕೂಡುತ್ತದೆ. ಮಾಂಸಾಹಾರ ತಿನ್ನದ ಶುದ್ಧ ಶಾಖಾಹಾರಿಗಳು ಸಹ ಬೆಲ್ಲದ ಉಂಡೆ ಮಾಡಿ, ಅದರಲ್ಲಿ ಹಿಂಗು (ಇಂಗು) ಇಟ್ಟು ಗುಳುಮ್ಮನೇ ನುಂಗಿ ಬಿಡುತ್ತಾರೆ. ಕೆಲವರು ಶುಂಠಿಯನ್ನು ಸಣ್ಣಗೆ ಕುಟ್ಟಿ ಅದನ್ನು ಬೆಲ್ಲದಲ್ಲಿ ಸೇರಿಸಿ ತಿನ್ನುತ್ತಾರೆ. ಇದೆಲ್ಲ ಬೇಸಿಗೆ ಕಳೆದು ತಂಪು ವಾತಾವರಣಕ್ಕೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನಂಬಿಕೆ.

ಆದರೆ ಈಚೆಗೆ ಶಕ್ತಿ ಬರಲು ಕೋಳಿ ತಿನ್ನಬೇಕು ಎಂದು ಯುವಕರು ನಂಬಿರುವುದರಿಂದ ಕೋಳಿ (ಅಥವಾ ನಾನ್ ವೆಜ್) ತಿಂದರೆ ಮಾತ್ರ ಹವಾ ಮಾನಕ್ಕೆ ಹೊಂದಿಕೊಳ್ಳಲು ಸಾಧ್ಯ ಎಂಬ ವಿಷಯ ವೈರಲ್‌ ಆಗಿಬಿಟ್ಟಿದೆ. ಹೀಗಾಗಿ ಒಂದೊಂದು ತಂಡವಾಗಿ ‘ಜೂನ್ ಸಾಥ್’ ಆಚರಣೆ ಹೋಟೆಲ್ಲುಗಳಲ್ಲಿ, ಕೆಲ ವರು ತೋಟಗಳಲ್ಲಿ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ ಎಣ್ಣೆ ಸಮಾರಾಧನೆಯೂ ಸಾಮಾನ್ಯ. ಅಂದರೆ ಮಾತ್ರ ಜೂನ್ ಸಾಥ್‌ಗೆ ಕಿಕ್ ಏರಲು ಸಾಧ್ಯ ಎನ್ನುತ್ತಾನೆ ಹೆಸರು ಹೇಳಲು ಇಚ್ಛಿಸದ ಯುವಕ.

‘ಹಳ್ಳ್ಯಾಗ್ ಸಿಗೂ ನಾಟಿ ಕೋಳಿ ರುಚಿ ಬಾಳ ಚೋಲೋರಿ, ಅದನ್ನು ತಿಂದು ಗೊತ್ತಿದ್ದವರಿಗೇ ಮಾತ್ರ ಟೇಸ್ಟು ಗೊತ್ತಾಗ್ತದ, ಪಟ್ಟಣ ದವರಿಗೆ ಫಾರಂ ಕೋಳಿ ತಿಂದ ರೂಢೀ ಇರ್ತದರಿ ಎಂದವ ಜಮ್ಮಲದಿನ್ನಿಯ ರಹಿಮಾನಸಾ ನಧಾಫ. ಈ ಸಲ ಕೋಳಿ ರೇಟ್ ಇಳದದರಿ, ನಾಟಿ ಕೋಳಿ ನಾಲ್ಕು ನೂರು ದಿಂದ ಹಿಡಿದು ₹1.200 ತನಕ ವ್ಯಾಪಾರ ಆಗ್ಯಾವ, ಐದು ನೂರಕ್ಕೂ ಹೆಚ್ಚು ಕೋಳಿ, ಹುಂಜ ಮಾರಾಟವಾದವು ಎಂದು ಪ್ರತಿ ವಾರ ಕೋಳಿ ವ್ಯಾಪಾರ ಮಾಡುವ ಬಾಬು ಸಾತಿಹಾಳ ಹೇಳಿದ. ನಿಫಾ ವೈರಸ್ ಗದ್ದಲದ ನಡುವೆ ಜೋರಾಗಿಯೇ ನಡೆಯಿತು.

ಮ.ಶಿ.ಗಡೇದ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry