‘ಕರಾಟೆಯಿಂದ ದೈಹಿಕ, ಮಾನಸಿಕ ಸದೃಢತೆ’

7

‘ಕರಾಟೆಯಿಂದ ದೈಹಿಕ, ಮಾನಸಿಕ ಸದೃಢತೆ’

Published:
Updated:

ಸಾಗರ: ವಿದ್ಯಾರ್ಥಿಗಳು ತಮ್ಮ ಓದಿನ ಜೊತೆಗೆ ಕರಾಟೆಯಂತಹ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡರೆ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ನೆರವಾಗುತ್ತದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದರು.

ಇಲ್ಲಿನ ಪವಿತ್ರ ರೆಸಿಡೆನ್ಸಿ ಸಭಾಂಗಣದಲ್ಲಿ ಶಿವಮೊಗ್ಗದ ಮಲ್ನಾಡು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರಾಟೆ ಕ್ರೀಡೆಯಲ್ಲಿ ಸಾಧನೆ ಮಾಡಿರುವವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿ ಪುರಸಭೆ ಮಾಜಿ ಸದಸ್ಯ ಎಂ.ನಾಗರಾಜ್ ಮಾತನಾಡಿ, ‘ಆತ್ಮರಕ್ಷಣೆಯ ಕಲೆ ಎಂಬ ಹಣೆಪಟ್ಟಿ ಹೊತ್ತಿದ್ದ ಕರಾಟೆ ಇಂದು ಜಗತ್ತಿನ ಎಲ್ಲೆಡೆ ಕ್ರೀಡೆಯಾಗಿ ಜನಮನ್ನಣೆ ಗಳಿಸಿದೆ’ ಎಂದರು.

ಕರಾಟೆ ತರಬೇತುದಾರ ಸನ್ ಸೈ ಪಂಚಪ್ಪ ಮಾತನಾಡಿ, ‘ಮುಂಬರುವ ಒಲಂಪಿಕ್ಸ್ ಕ್ರೀಡಾಕೂಟಕ್ಕೆ ಕರಾಟೆಯನ್ನು ಕೂಡ ಸೇರಿಸಲಾಗಿದೆ. ಈ ಕಾರಣ ಈ ಭಾಗದಿಂದ ಭಾರತ ತಂಡವನ್ನು ಕರಾಟೆಯಲ್ಲಿ ಒಲಂಪಿಕ್ಸ್ ನಲ್ಲಿ ಪ್ರತಿನಿಧಿಸುವ ಮಟ್ಟಕ್ಕೆ ಯುವಜನರನ್ನು ತರಬೇತುಗೊಳಿಸುವ ಉದ್ದೇಶವಿದೆ’ ಎಂದು ತಿಳಿಸಿದರು.

ನೇಪಾಳದ ಕಟ್ಮಂಡುವಿನಲ್ಲಿ ಈಚೆಗೆ ನಡೆದ ಅಂತರರಾಷ್ಟ್ರೀಯ ಕರಾಟೆ ಪಂದ್ಯದಲ್ಲಿ ಉತ್ತಮ ಸಾಧನೆ ಮಾಡಿದ ಛಾಯಾ ಬಿ.ಆರ್., ಸಾತ್ವಿಕ್, ಮೇಘನಾ ಎಂ.ಬಿ., ಫರ್ಮಾನ್, ಮೇಘನಾ ಡಿ., ಅರ್ಪಿತಾ ಜಿ.ಕೆ., ದೀಕ್ಷಿತ್ ಸಿ. ದೀಪಾ, ಅಭಿರಾಮ್, ಅಭಿಷೇಕ್, ವಿಘ್ನೇಶ್ ಎಂ. ಅವರನ್ನು ಸನ್ಮಾನಿಸಲಾಯಿತು.

ಮಲ್ನಾಡು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಎನ್. ಶಿವಾನಂದ ಅಕುಗ್ವೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲ ಟಿ.ಎಸ್. ರಮಣ, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಎನ್. ವೆಂಕಟರಮಣ ಇದ್ದರು.  ಭಾಗ್ಯ ಪಿ. ಗೌಡರ್ ಸ್ವಾಗತಿಸಿದರು. ಮಹೇಶ್ ವಂದಿಸಿದರು. ಮಂಜಪ್ಪ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry