ಬಸವನಹೊಳೆ–ಸಣ್ಣಮನೆ ಇನ್ನು ಚತುಷ್ಪಥ ರಸ್ತೆ

7

ಬಸವನಹೊಳೆ–ಸಣ್ಣಮನೆ ಇನ್ನು ಚತುಷ್ಪಥ ರಸ್ತೆ

Published:
Updated:

ಸಾಗರ: ನಗರದ ಶಿವಮೊಗ್ಗ ರಸ್ತೆಯಲ್ಲಿರುವ ಬಸವನ ಹೊಳೆ ವೃತ್ತದಿಂದ ಜೋಗ ರಸ್ತೆಯ ಸಣ್ಣಮನೆ ಸೇತುವೆಯವರೆಗೆ ₹ 89 ಕೋಟಿ ವೆಚ್ಚದಲ್ಲಿ ಚತುಷ್ಪಥ ರಸ್ತೆಯನ್ನು ನಿರ್ಮಿಸಲಾಗುವುದು ಎಂದು ಶಾಸಕ ಹರತಾಳು ಹಾಲಪ್ಪ ತಿಳಿಸಿದರು.

ಇಲ್ಲಿನ ನ್ಯೂ ಬಿಎಚ್ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಯನ್ನು ಗುರುವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಗೆ ಪ್ರಸ್ತಾವನೆ ಸಿದ್ಧಪಡಿಸ

ಲಾಗಿದ್ದು, ಶೀಘ್ರವೇ ದೆಹಲಿಗೆ ತೆರಳಿ ಸಂಬಂಧಪಟ್ಟ ಇಲಾಖೆಯಿಂದ ಮಂಜೂ

ರಾತಿ ಪಡೆಯುವುದಾಗಿ ಹೇಳಿದರು.

‘ಬಸವನ ಹೊಳೆಯಿಂದ ಸಣ್ಣಮನೆ ಸೇತುವೆಯವರೆಗೆ ಚತುಷ್ಪಥ ರಸ್ತೆ ನಿರ್ಮಾಣವಾಗಲಿರುವ ಕಾರಣ ಹೆಚ್ಚುವರಿಯಾಗಿ ಈ ಮಾರ್ಗದಲ್ಲಿ ಎರಡು ಸೇತುವೆ ನಿರ್ಮಿಸಿ ರಸ್ತೆ ವಿಭಜಕ ಅಳವಡಿಸಲಾಗುವುದು. ಚತುಷ್ಪಥ ರಸ್ತೆಗಾಗಿ ಈಗಿರುವ ರಸ್ತೆಯನ್ನು ವಿಸ್ತರಣೆ ಮಾಡಬೇಕಿದ್ದು, ಇದರಿಂದ ಜಾಗ ಕಳೆದುಕೊಳ್ಳುವ ಮಾರ್ಗ ಮಧ್ಯದ ಸ್ವತ್ತಿನ ಮಾಲೀಕರಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು’ ಎಂದು ತಿಳಿಸಿದರು.

‘ನೂತನವಾಗಿ ನಿರ್ಮಾಣವಾಗುತ್ತಿರುವ ಖಾಸಗಿ ಬಸ್ ನಿಲ್ದಾಣದ ಕಾಮಗಾರಿಯ ಗುಣಮಟ್ಟದ ಬಗ್ಗೆ ತೃಪ್ತಿ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ನಿರ್ವಹಣೆ ಮಾಡದ ಕಾರಣ ಕಾಮಗಾರಿ ವಿಳಂಬವಾಗುವ ಜೊತೆಗೆ ಹಲವು ಎಡವಟ್ಟುಗಳು ಆಗಿವೆ. ಇನ್ನು ಮುಂದೆ ಈ ರೀತಿಯ ಆಟ ನಡೆಯುವುದಿಲ್ಲ’ ಎಂದು ಹೇಳಿದರು.

‘ಖಾಸಗಿ ಬಸ್ ನಿಲ್ದಾಣ ಕಾಮಗಾರಿಯ ಯೋಜನೆ, ನಕಾಶೆ ಕುರಿತು ವಿಚಾರಿಸಿದರೆ ಆ ಬಗ್ಗೆ ನಗರಸಭೆ ಅಧಿಕಾರಿಗಳಲ್ಲಿ ಮಾಹಿತಿ ಇಲ್ಲವಾಗಿದೆ. ಯೋಜನೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕಾರ್ಯಕ್ರಮ ಯೋಜನಾ ಪ್ರಾಧಿಕಾರದ ಅಧಿಕಾರಿಗಳು ಕೈಗೆ ಸಿಗುತ್ತಿಲ್ಲ. ಇಂತಹ ಪ್ರಾಧಿಕಾರ ಜನಸ್ನೇಹಿ ಆಗಬೇಕು ಎನ್ನುವ ಬಗ್ಗೆ ಜಿಲ್ಲಾಮಟ್ಟದ ಕೆಡಿಪಿ ಸಭೆಯಲ್ಲಿ ಚರ್ಚಿಸುತ್ತೇನೆ. ದೀಪಾವಳಿ ವೇಳೆಗೆ ಖಾಸಗಿ ಬಸ್ ನಿಲ್ದಾಣ ಉದ್ಘಾಟನೆಗೊಳ್ಳಲಿದೆ’ ಎಂದರು.

ಶಿವಮೊಗ್ಗ- ಬೆಂಗಳೂರು ಇಂಟರ್‌ಸಿಟಿ ರೈಲಿನ ಸಂಚಾರವನ್ನು ತಾಳಗುಪ್ಪದವರೆಗೆ ವಿಸ್ತರಿಸುವ ಸಂಬಂಧ ಈಗಾಗಲೇ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ. ತಾಳಗುಪ್ಪದವರೆಗೆ ಸಂಚಾರ ವಿಸ್ತರಣೆ ಆಗುವವರೆಗೆ ಶಿವಮೊಗ್ಗ

ದವರೆಗೆ ರೈಲು ಸಂಪರ್ಕಕ್ಕೆ ಅನುಕೂಲವಾಗಲು ಬಸ್ ಸಂಚಾರದ ವ್ಯವಸ್ಥೆ ಮಾಡಲಾಗುವುದು ಎಂದರು.

ನಗರಸಭೆ ಆವರಣದಲ್ಲಿ ಶಾಸಕರ ಸಂಪರ್ಕ ಕಚೇರಿ ಶುಕ್ರವಾರ ಆರಂಭಗೊಳ್ಳಲಿದೆ. ಸಾರ್ವಜನಿಕರು ಕುಂದುಕೊರತೆಗಳ ಬಗ್ಗೆ ಅಹವಾಲು ಸಲ್ಲಿಸಬಹುದು ಎಂದು ತಿಳಿಸಿದರು.

ಉಪವಿಭಾಗಾಧಿಕಾರಿ ನಾಗರಾಜ್ ಆರ್. ಸಿಂಗ್ರೇರ್, ನಗರಸಭೆ ಸದಸ್ಯ ಸಂತೋಷ್ ಆರ್. ಶೇಟ್, ಎಸ್.ಎಲ್. ಮಂಜುನಾಥ್, ಪೌರಾಯುಕ್ತ ಎಸ್. ರಾಜು, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸುಭಾಷ್ ಕಂಬಳಿ, ವಿಠ್ಠಲ್ ಹೆಗಡೆ, ತಾಲ್ಲೂಕು ಪಂಚಾ

ಯಿತಿ ಸದಸ್ಯ ದೇವೇಂದ್ರಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಡಿ. ಮೇಘರಾಜ್, ಚೇತನ್ ರಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry