ಎಲ್ಲರ ಕೈಗೆಟುಕುವ ದರದಲ್ಲಿ ಮಾವು

7
ವಿದಾಯದ ಹಾದಿಯಲ್ಲಿ ಮಾವು; ಸ್ವಾದ ಸವಿಯಲು ಮುಂದಾದ ಜನರು

ಎಲ್ಲರ ಕೈಗೆಟುಕುವ ದರದಲ್ಲಿ ಮಾವು

Published:
Updated:

ವಿಜಯಪುರ: ಹಣ್ಣುಗಳ ರಾಜ ಮಾವು ಇದೀಗ ಎಲ್ಲರಿಗೂ ಅಗ್ಗ. ತುಟ್ಟಿ ಧಾರಣೆಯಿಂದ ಮಾವಿನ ಸವಿಯಿಂದ ದೂರ ಉಳಿದಿದ್ದ ಬಡವರು, ಮಧ್ಯಮ ವರ್ಗದ ಜನರು ಮಾವು ಖರೀದಿಗಾಗಿ ಮಾರುಕಟ್ಟೆಯಲ್ಲಿ ಮುಗಿ ಬೀಳುತ್ತಿರುವ ದೃಶ್ಯ ಎಲ್ಲೆಡೆ ಗೋಚರಿಸುತ್ತಿದೆ.

ಮೂರು ತಿಂಗಳಿನಿಂದ ಮಾರುಕಟ್ಟೆ ಯಲ್ಲೂ ‘ರಾಜ’ನಂತೆ ಮೆರೆದ ಮಾವು, ಕಾರಹುಣ್ಣಿಮೆಯ ಬಳಿಕ ವಿದಾಯ ಹೇಳಲಿದೆ. ಮತ್ತೆ ಮಾ ವಿನ ಹಣ್ಣನ್ನು ನೋಡಬೇಕು ಎಂದರೂ ಮುಂದಿನ ವರ್ಷದ ಮಾರ್ಚ್‌ ಅಂತ್ಯದವರೆಗೂ ಕಾಯಬೇಕು.

ಮಾರ್ಚ್‌ ಮಧ್ಯದಿಂದ ಜೂನ್‌ ನಡುವಿನವರೆಗೂ ವಿಜಯಪುರದ ಮಾವು ಬಜಾರ್‌ನಲ್ಲಿ ಆಫೂಸ್‌ ತಳಿಯದ್ದೇ ಕಾರುಬಾರಿತ್ತು. ಆರಂಭದ ದಿನಗಳಲ್ಲಿ ಒಂದು ಡಜನ್‌ಗೆ ₹ 1000 ಧಾರಣೆ ಕನಿಷ್ಠವಿತ್ತು. ಇದೀಗ ಆಫೂಸ್‌ ಸುಗ್ಗಿ ಮುಗಿಯುವ ಸಮಯ. ಗುಣಮಟ್ಟದ ಹಣ್ಣಿಗೆ ₹ 300ರ ಧಾರಣೆಯಿದೆ.  ಬೆರಳೆಣಿಕೆ ದಿನದಲ್ಲಿ ಆಫೂಸ್‌ ಮಾರುಕಟ್ಟೆಯಿಂದ ಕಣ್ಮರೆ ಯಾಗಲಿದೆ. ಇನ್ನೇನಿದ್ದರೂ ಸ್ಥಳೀಯ ನೀಲಂ ಮಾವಿನ ಹಣ್ಣಿನ ದರಬಾರು ಆರಂಭವಾಗಲಿದೆ ಎಂದು ಹಲ ವರ್ಷಗಳಿಂದ ಮಾವಿನ ಹಣ್ಣಿನ ವಹಿ ವಾಟು ನಡೆಸುತ್ತಿರುವ ಅಬ್ದುಲ್‌ ಹಮೀದ್‌ ಜಮಖಂಡಿ ತಿಳಿಸಿದರು.

‘ಹಿಂದಿನ ವರ್ಷದ ವಹಿವಾಟಿಗಿಂತ ಈ ಬಾರಿ ವ್ಯಾಪಾರ ಅಷ್ಟಿರಲಿಲ್ಲ. ಸುಗ್ಗಿಯ ಸಮಯದಲ್ಲೇ ನಿಫಾ ವೈರಸ್‌ ಆತಂಕವೂ ಕಾಡಿತು. ಆರಂಭದಲ್ಲಿ ವಹಿವಾಟು ಚಲೋ ನಡೆಯಿತು. ಬಿಸಿಲು ಏರಿದಂತೆ ವ್ಯಾಪಾರವೂ ಹೆಚ್ಚುತ್ತಿತ್ತು. ಮಾವಿಗೂ ಗ್ರಾಹಕರಿಂದ ಸಿಕ್ಕಾಪಟ್ಟೆ ಬೇಡಿಕೆಯಿತ್ತು. ಧಾರಣೆ ಲೆಕ್ಕಿಸದೆ ಬಹುತೇಕರು ಮಾವು ಕೊಂಡು ಸವಿದರು. ಆದರೆ ನಿಫಾ ವೈರಸ್‌ ಆತಂಕ ವಹಿವಾಟಿನ ಓಘಕ್ಕೆ ಬ್ರೇಕ್ ಹಾಕಿತು. ಮಳೆ ಬಿದ್ದ ಬಳಿಕ ಮಾರುಕಟ್ಟೆಗೆ ಆವಕವಾಗುವ ಮಾವಿನ ಪ್ರಮಾಣವೂ ಹೆಚ್ಚಿತು’ ಎಂದರು.

‘ಪೂರೈಕೆ ಹೆಚ್ಚಿದಂತೆ ಬೇಡಿಕೆ ತಗ್ಗಿ ಧಾರಣೆ ಕುಸಿಯಿತು. ಇದರ ಬೆನ್ನಿಗೆ ಬಡವರು, ಮಧ್ಯಮ ವರ್ಗದವರು ಮಾರುಕಟ್ಟೆಗೆ ದಾಂಗುಡಿಯಿಟ್ಟು ಹೆಚ್ಚಿನ ಪ್ರಮಾಣದಲ್ಲಿ ಮಾವು ಖರೀದಿಸಿ ಸ್ವಾದ ಸವಿಯಲಾರಂಭಿಸಿದ್ದಾರೆ’ ಎಂದು ಹಮೀದ್ ಹೇಳಿದರು.

ಜವಾರಿ: ಮಾವಿನ ಸುಗ್ಗಿಯ ಅಂತ್ಯದಲ್ಲಿ ಧಾರಣೆಯೂ ಕಡಿಮೆಯಾಗಿದೆ. ಇದು ಕೊಳ್ಳುವವರ ಖರೀದಿ ಬಯಕೆ ಹೆಚ್ಚಿಸಿದೆ. ವಿಜಯಪುರದ ಆರಾಧ್ಯ ದೈವ ಸಿದ್ಧೇಶ್ವರ ದೇಗುಲದ ಆಸುಪಾಸಿನ ರಸ್ತೆಗಳಲ್ಲಿ ಮಾವು ಮಾರಾಟ ಬಿರುಸುಗೊಂಡಿದೆ.

‘ಸುಗ್ಗಿಯ ಆರಂಭದಿಂದಲೂ ಆಫೂಸ್‌ ಹಣ್ಣುಗಳಿಗೆ ಬೇಡಿಕೆ. ಅಸಂಖ್ಯಾತ ಗ್ರಾಹಕರು ಬೇಡುವುದು ಆಫೂಸ್ ಮಾವನ್ನೇ. ಆದ್ದರಿಂದ ಗ್ರಾಹಕರ ಬೇಡಿಕೆಗೆ ತಕ್ಕಂತೆ ಮಹಾರಾಷ್ಟ್ರದ ವಿವಿಧ ಭಾಗಗಳಿಂದ ಹಣ್ಣನ್ನು ತರಿಸಿಕೊಂಡು, ಮಾರಾಟ ನಡೆಸುತ್ತೇವೆ’ ಎಂದು ವ್ಯಾಪಾರಿ ಮೊಹಮ್ಮದ್‌ ರಫೀಕ್‌ ತಿಳಿಸಿದರು.

‘ಬಜಾರ್‌ನಲ್ಲಿ ಗುಣಮಟ್ಟದ ಹಣ್ಣು ದೊರಕುತ್ತಿವೆ. ದರ ಕುಸಿತ ಗ್ರಾಹಕರ ಖರೀದಿ ಸಾಮರ್ಥ್ಯ ಹೆಚ್ಚಿಸಿದೆ. ಮಾವಿನ ಸುಗ್ಗಿಯ ಕೊನೆಯ ಸಮಯ. ಇದೀಗಲೇ ಖರೀದಿಸಿ ಮಾವು ಸವಿಯಬೇಕು. ಈ ಅವಕಾಶ ತಪ್ಪಿಸಿಕೊಂಡರೇ ಕನಿಷ್ಠ ಒಂಭತ್ತು ತಿಂಗಳು ಮತ್ತೆ ಕಾಯಬೇಕು’ ಎಂದು ಗ್ರಾಹಕ ವಿಶ್ವನಾಥ ಆಲೂರ ಹೇಳಿದರು.

‘ಒಂಭತ್ತು ತಿಂಗಳ ಬಳಿಕ ಮಾವು ಮತ್ತೆ ಮಾರುಕಟ್ಟೆ ಪ್ರವೇಶಿಸಲಿದೆ. ಆರಂಭದ ದಿನದಲ್ಲಿ ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗದಿರುವುದರಿಂದ ಧಾರಣೆ ಬಲು ತುಟ್ಟಿಯಿರಲಿದೆ. ಮಧ್ಯಮ ವರ್ಗದವರು ಖರೀದಿಸು ವುದು ಕಷ್ಟಸಾಧ್ಯ. ಒಂದೆರೆಡು ತಿಂಗಳ ಬಳಿಕ ದರ ಇಳಿಕೆಯಾಗುತ್ತದೆ. ಆಗ ಖರೀದಿಸಬೇಕು. ಅಂದರೇ ಒಂದು ವರ್ಷ ಮಾವಿಗಾಗಿ ಕನವರಿಸಬೇಕಾ ಗುತ್ತದೆ. ಆದ್ದರಿಂದ ಈಗಲೇ ಹಣ್ಣನ್ನು ಸವಿಯುತ್ತಿದ್ದೇವೆ’ ಎಂದು ರಾಘವೇಂದ್ರ ದೇಸಾಯಿ ತಿಳಿಸಿದರು.

ಮಾವಿನ ಮಾರುಕಟ್ಟೆಯ ಕೊನೆ ಕಾಲಘಟ್ಟವಿದು. ದರವೂ ಅಗ್ಗವಾಗಿದೆ. ಸಾಕಷ್ಟು ಕೊಂಡು ತಿನ್ನಬಹುದು. ಗ್ರಾಹಕರಿಗೆ ಮಾತ್ರ ಮಾವಿನ ಸುಗ್ಗಿ ಸಮಯ 

- ರಾಘವೇಂದ್ರ ದೇಸಾಯಿ, ಗ್ರಾಹಕ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry